ಮಂಗಳವಾರ, ಏಪ್ರಿಲ್ 29, 2025
HomekarnatakaShivamogga Harsha Praveen Nettar : ಅಧಿಕಾರಕ್ಕೇರೋ ಕನಸಿಗೆ ಸಾಲು ಸಾಲು ಕೊಲೆ ಅಡ್ಡಿ: ಬಿಜೆಪಿಗೆ...

Shivamogga Harsha Praveen Nettar : ಅಧಿಕಾರಕ್ಕೇರೋ ಕನಸಿಗೆ ಸಾಲು ಸಾಲು ಕೊಲೆ ಅಡ್ಡಿ: ಬಿಜೆಪಿಗೆ ಕಂಟಕವಾದ ಪ್ರವೀಣ್, ಹರ್ಷ ಕೊಲೆ‌ ಕೇಸ್

- Advertisement -

ಬೆಂಗಳೂರು : ರಾಜ್ಯದಲ್ಲಿ ಅಧಿಕಾರದಲ್ಲಿರೋ ಬಿಜೆಪಿಗೆ ಮುಂದಿನ ಅವಧಿಯಲ್ಲೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರೋ ಕನಸಿದೆ. ಆದರೆ ಬಿಜೆಪಿಯ ಮೂಲ ಅಜೆಂಡಾ ಹಿಂದುತ್ವದ ಹೆಸರಿನಲ್ಲಿ ನಡೆಯಿತ್ತಿರೋ ಕೊಲೆಗಳು ಹಾಗೂ ಈ ಸಾಲು ಸಾಲು ಕೊಲೆಗಳನ್ನು ನಿಭಾಯಿಸುವಲ್ಲಿ ಎಡವುತ್ತಿರುವ ಸರ್ಕಾರದ ನಡೆಯಿಂದ ಬಿಜೆಪಿ ಹಾಗೂ ಸರ್ಕಾರ ಕಾರ್ಯಕರ್ತ ರಿಂದಲೇ ಆಕ್ರೋಶ ಎದುರಿಸುತ್ತಿದೆ. ಹೀಗಾಗಿ ಇನ್ನೇನು ಬೇಡ ಮುಂದಿನ ವಿಧಾನಸಭಾ ಚುನಾವಣೆಗೆ ಹರ್ಷ ಮತ್ತು ಪ್ರವೀಣ್ (Shivamogga Harsha Praveen Nettar) ಹತ್ಯೆ ಪ್ರಕರಣಗಳೇ ಬಿಜೆಪಿಗೆ ಕಂಟಕ ಎಂಬ ಮಾತು ಕೇಳಿಬರುತ್ತಿದೆ.

ರಾಜ್ಯದಲ್ಲಿ ಹಾಗೂ ದೇಶದಲ್ಲಿ ಹಿಂದುತ್ವದ ಹಿನ್ನೆಲೆ ಹಾಗೂ ಅಸ್ತ್ರದೊಂದಿಗೆ ಸಕ್ರಿಯವಾಗಿರೋ ಬಿಜೆಪಿಗೆ ಕಾರ್ಯಕರ್ತರೇ ಆಸ್ತಿ‌. ಉಳಿದ ಪಕ್ಷಗಳಿಗೆ ಹೋಲಿಸಿದರೇ ಬಿಜೆಪಿಯಲ್ಲಿ ಇನ್ನೂ ಕಾರ್ಯಕರ್ತರಿಗೆ ಹಾಗೂ ಅವರ ಶಕ್ತಿಗೆ ಬೆಲೆ ಇದೆ. ಕೇವಲ ಹಣದಿಂದ ಮಾತ್ರ ಕೊಂಡುಕೊಳ್ಳುವ ಮತವಲ್ಲ ಬಿಜೆಪಿಯದ್ದು ಅನ್ನೋದು ಜಗತ್ತಿಗೆ ಗೊತ್ತಿರೋ ಸಂಗತಿ.
ಆದರೆ ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣ ಹಾಗೂ ಮೊನ್ನೆ ಪುತ್ತೂರಿನ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ಕೊಲೆ ಪ್ರಕರಣ ರಾಜ್ಯ ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಕ್ರೂರವಾಗಿ ಕೊಲೆಯಾದ ಕಾರ್ಯಕರ್ತರ ಹತ್ಯೆಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಕಾರ್ಯಕರ್ತರ ಆಕ್ರೋಶ.

ಕಳೆದ ಹತ್ತಾರೂ ವರ್ಷಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ಅಧಿಕಾರದಲ್ಲಿದ್ದಾಗಲೂ, ಇಲ್ಲದೇ ಇದ್ದಾಗಲೂ ಬಿಜೆಪಿ ನಾಯಕರು ಈ ಹತ್ಯೆಗಳಿಗೆ ನ್ಯಾಯ ಒದಗಿಸಿಲ್ಲ. ಕೇವಲ ಹತ್ಯೆ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಬರೋದು, ಸಾಂತ್ವನ ಹೇಳೋದು ಹಾಗೂ ಪರಿಹಾರ ಘೋಷಿಸೋದು ಇಷ್ಟೇ ಪಕ್ಷದ ನಾಯಕರ ಕೆಲಸವಾಗುತ್ತಿದೆ. ಅದರಲ್ಲೂ ಯಾವುದೇ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಅಥವಾ ಪೊಲೀಸ್ ಇಲಾಖೆ ಇಂಥ ಕೃತ್ಯ ಎಸಗುವವರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಿಲ್ಲ. ಒಂದೇ ಕಠಿಣ ಕ್ರಮವಾದ ದಾಖಲೆಯಿಲ್ಲ. ಹಿಂದೂತ್ವದ ಹೆಸರಿನಲ್ಲಿ ಬಡ,ಅಮಾಯಕ ವರ್ಗದ ಗಂಡು ಮಕ್ಕಳು ಕೊಲೆಯಾಗುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಹಾಗೂ ಸರ್ಕಾರ ಸತ್ತವರಿಗೆ ನ್ಯಾಯ ದೊರಕಿಸಿಕೊಡುತ್ತಿಲ್ಲ ಎಂಬ ಅಭಿಪ್ರಾಯ ತಳಮಟ್ಟದಿಂದ ರೂಪುಗೊಳ್ಳುತ್ತಿದೆ.

ಅದರಲ್ಲೂ ಚುನಾವಣೆ ಎದುರಿನಲ್ಲಿ ಹಾಗೂ ಕೆಲವೇ ಕೆಲವು ತಿಂಗಳಿನ ಅಂತರದಲ್ಲಿ ನಡೆದ ಹರ್ಷ ಮತ್ತು ಪ್ರವೀಣ್ ಹತ್ಯೆ ಪ್ರಕರಣ ಬಿಜೆಪಿಯ ಓಟ್ ಬ್ಯಾಂಕ್ ಮೇಲೆ ಭಾರಿ ಪರಿಣಾಮ ಬೀರಿದ್ದು, ಯಾರು ನಮ್ಮ ಸುರಕ್ಷತೆಯ ಹೊಣೆ ಹೊರುತ್ತಾರೋ ಅವರಿಗೆ ನನ್ನ ಮತ ಎಂದು ಜನರು ಹಾಗೂ ಪಕ್ಷಕ್ಕಾಗಿ ಬೆಲೆ ಕೊಡುವವರಿಗೆ ಮಾತ್ರ ನಮ್ಮ ಪಕ್ಷ ನಿಷ್ಠೆ ಎಂದು ಕಾರ್ಯಕರ್ತರು ಬಂಡಾಯ ಸಾರುತ್ತಿದ್ದಾರೆ. ಹೀಗಾಗಿ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿಗೆ ಬಹುದೊಡ್ಡ ಡ್ಯಾಮೇಜ್ ಸೃಷ್ಟಿಯಾಗಿದ್ದು, ಇದನ್ನು ಸರ್ಕಾರ ಯಾವ ರೀತಿ ಬದಲಾಯಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : Dr. C Aswattha Narayan : ಅಗತ್ಯಬಿದ್ದರೆ ದುಷ್ಕರ್ಮಿಗಳ ಎನ್​ಕೌಂಟರ್​ ಮಾಡಲೂ ಸರ್ಕಾರ ಸಿದ್ಧವಿದೆ : ಸಚಿವ ಡಾ. ಅಶ್ವತ್ಥ ನಾರಾಯಣ ಗುಡುಗು

ಇದನ್ನೂ ಓದಿ : CM Basavaraja Bommai : ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಗುಡುಗಿದ ಸಿಎಂ ಬಸವರಾಜ ಬೊಮ್ಮಾಯಿ

Shivamogga Harsha Praveen Nettar Murder Effect Bjp for Next Election 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular