ಮಂಗಳವಾರ, ಏಪ್ರಿಲ್ 29, 2025
Homepoliticsstate cabinet reshuffle : ಇನ್ನೈದು ದಿನಗಳಲ್ಲಿ ರಾಜ್ಯದಲ್ಲಿ ಸಂಪುಟ ಪುನಾರಚನೆ: ಸುಧಾಕರ್​, ಆರ್​.ಅಶೋಕ್​ ಸೇರಿದಂತೆ...

state cabinet reshuffle : ಇನ್ನೈದು ದಿನಗಳಲ್ಲಿ ರಾಜ್ಯದಲ್ಲಿ ಸಂಪುಟ ಪುನಾರಚನೆ: ಸುಧಾಕರ್​, ಆರ್​.ಅಶೋಕ್​ ಸೇರಿದಂತೆ ಪ್ರಮುಖರಿಗೆ ಕೊಕ್​​

- Advertisement -

ಬೆಂಗಳೂರು :state cabinet reshuffle: ವಿಧಾನಸಭೆ ಚುನಾವಣೆಗೆ ಕೇವಲ ಇನ್ನೊಂದು ವರ್ಷ ಬಾಕಿ ಇರುವಾಗಲೇ ರಾಜ್ಯದಲ್ಲಿ ಸಂಪುಟ ಪುನಾರಚನೆಯ ಕೂಗುಗಳು ಕೇಳಿ ಬಂದಿದ್ದವು. ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯ ಪ್ರವಾಸ ಕೈಗೊಂಡ ವೇಳೆಯಲ್ಲಿ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆಯುತ್ತದೆ ಎಂದೆಲ್ಲ ಭಾವಿಸಲಾಗಿತ್ತು. ಆದರೆ ಮೇಲ್ನೋಟಕ್ಕೆ ಅಮಿತ್​ ಶಾ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೀಗ ಅಮಿತ್​ ಶಾ ರಾಜ್ಯ ಭೇಟಿ ಬೆನ್ನಲ್ಲೇ ಮತ್ತೊಮ್ಮೆ ಸಂಪುಟ ಪುನಾರಚನೆಯ ಚಟುವಟಿಕೆಗಳು ಗರಿಗೆದವರಿವೆ.


ರಾಜ್ಯದಲ್ಲಿ ಸಂಪುಟ ಪುನಾರಚನೆಗೆ ದಿನಾಂಕ ನಿಗದಿಯಾಗಿದೆ ಎಂಬ ಮಹತ್ವದ ಮಾಹಿತಿಯು ಮೂಲಗಳಿಂದ ತಿಳಿದುಬಂದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ತಿಂಗಳ 10ನೇ ತಾರೀಖಿನಂದು ರಾಜ್ಯದಲ್ಲಿ ಸಂಪುಟ ಪುನಾರಚನೆಗೊಳ್ಳಲಿದೆ. ಸಂಪುಟದಲ್ಲಿ ಯಾರ್ಯಾರಿಗೆ ಕೊಕ್​ ನೀಡಬೇಕು ಹಾಗೂ ಯಾವೆಲ್ಲ ಹೊಸ ಮುಖಗಳನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಿಎಂ ಬಸವರಾಜ ಬೊಮ್ಮಾಯಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.


ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಪ್ರಸ್ತುತ ಇರುವ ಆರು ಮಂತ್ರಿಗಳ ಬಳಿಯಲ್ಲಿ ರಾಜೀನಾಮೆ ಕೇಳುವಂತೆ ಬಿಜೆಪಿ ಹೈಕಮಾಂಡ್​ ಸಿಎಂ ಬಸವರಾಜ ಬೊಮ್ಮಾಯಿಗೆ ಸೂಚನೆಯನ್ನು ನೀಡಿದೆ. ಕಂದಾಯ ಸಚಿವ ಆರ್​.ಅಶೋಕ್​ ಬಳಿಯಲ್ಲಿ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದು ಅವರಿಗೆ ಬಿಬಿಎಂಪಿ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳಲು ನೇಮಿಸುವ ಸಾಧ್ಯತೆಯಿದೆ. ಇತ್ತ ಡಾ.ಕೆ ಸುಧಾಕರ್​ ವಿರುದ್ಧವೂ ಕೆಲವು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಂದಲೂ ರಾಜೀನಾಮೆ ಪಡೆಯಲು ಹೈಕಮಾಂಡ್​ ಸೂಚಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಸಚಿವರಾದ ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್​, ವಿ.ಸೋಮಣ್ಣ ಹಾಗೂ ಪ್ರಭು ಚವ್ಹಾಣ್​​​ ಈ ಬಾರಿಯ ಸಂಪುಟದಿಂದ ಹೊರಗುಳಿಯುವ ಸಾಧ್ಯತೆ ಇದೆ.


ಚುನಾವಣೆಗೂ ಮುನ್ನ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದ್ದು ಅರವಿಂದ ಬೆಲ್ಲದ್​, ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್​,ಎನ್​.ಮಹೇಶ್​, ಪ್ರೀತಂ ಗೌಡ, ಪಿ.ರಾಜೀವ್​ ಸೇರಿದಂತೆ ಇನ್ನೂ ಕೆಲವರನ್ನು ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರನ್ನಾಗಿ ಮಾಡಿಕೊಳ್ಳುವಂತೆ ಬಿಜೆಪಿ ಹೈಕಮಾಂಡ್​ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನು ಓದಿ : MS Dhoni Breaks Silence : ಸ್ಪೂನ್‌ ಫೀಡಿಂಗ್‌ ನಾಯಕನಿಗೆ ಸಹಾಯವಾಗೋದಿಲ್ಲ : ರವೀಂದ್ರ ಜಡೇಜಾ ವಿಚಾರದಲ್ಲಿ ಮೌನ ಮುರಿದ ಧೋನಿ

ಇದನ್ನೂ ಓದಿ : chief minister basavaraj bommai : ಪಿಎಸ್​ಐ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ಸಿಗರೇ ಬಂಧನಕ್ಕೊಳಗಾಗುತ್ತಿದ್ದಾರೆ : ಸಿಎಂ ಬೊಮ್ಮಾಯಿ

state cabinet reshuffle on may 10 likely

RELATED ARTICLES

Most Popular