ವರದಿ : ರಿತೇಶ್ ದೇವಾಡಿಗ ಅಲೆವೂರು ಉಡುಪಿ : Udupi Traffic Jam : ದಿನೇ ದಿನೇ ಬೆಳೆಯುತ್ತಿರುವ ಉಡುಪಿ ನಗರದಲ್ಲಿ ವಾಹನಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ಅದ್ರಲ್ಲೂ ಅತೀ ಹೆಚ್ಚು ವಾಹನ ದಟ್ಟಣೆ ಹೊಂದಿರುವ ಕಲ್ಸಂಕದಲ್ಲಿನ (Kalsanka) ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ರಸ್ತೆಗಳನ್ನು ಅಗಲೀಕರಣಗೊಳಿಸಲಾಗಿದೆ. ಫ್ರೀ ಲೆಫ್ಟ್ ತೆರೆಯಲಾಗಿದ್ದು, ಸರ್ಕಲ್ ನಿರ್ಮಾಣ ಮಾಡಿ ಸಿಗ್ನಲ್ ವ್ಯವಸ್ಥೆ ಅಳವಡಿಸುವ ಕಾರ್ಯವೂ ನಡೆಯುತ್ತಿದೆ. ಆದರೆ ಖಾಸಗಿ ಬಸ್ಸುಗಳು ಸಿಗ್ನಲ್‌ಗಳಲ್ಲೇ ಜನರನ್ನು ಹತ್ತಿಸಿ, ಇಳಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿದೆ.
ಈಗಾಗಲೇ ಮಣಿಪಾಲ – ತೀರ್ಥಹಳ್ಳಿ ಹೆದ್ದಾರಿಯ ಅಗಲೀಕರಣ ಕಾರ್ಯ ಉಡುಪಿ ನಗರ ವ್ಯಾಪ್ತಿಯಲ್ಲಿ ಬಹುತೇಕ ಪೂರ್ಣಗೊಂಡಿದೆ. ನಗರದ ಕಲ್ಸಂಕ ಭಾಗದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗದಂತೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಸಾಕಷ್ಟು ಮಾಲ್, ಕಟ್ಟಡಗಳು ನಿರ್ಮಾಣ ಆಗಿರುವುದರಿಂದ ಜನರದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲದೇ ಅಂಬಾಗಿಲು ರಸ್ತೆಯಿಂದ ನಗರಕ್ಕೆ ಪ್ರವೇಶಿಸುವ ವಾಹನ ಸವಾರರಿಗಾಗಿ ಪ್ರೀ ಲೆಫ್ಟ್ ತೆರೆಯಲಾಗಿದೆ. ಕಲ್ಸಂಕ ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಪೊಲೀಸರು ಸಂಚಾರ ನಿಯಂತ್ರಣ ಮಾಡುತ್ತಿದ್ದಾರೆ. ಮಣಿಪಾಲಕ್ಕೆ ತೆರಳುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಬಸ್ಸು ನಿಲ್ದಾಣವನ್ನೂ ತೆರೆಯಲಾಗಿದೆ.

ಆದರೆ ಮಣಿಪಾಲಕ್ಕೆ ತೆರಳು ಸಿಟಿ ಬಸ್ ಹಾಗೂ ಖಾಸಗಿ ಬಸ್ಸುಗಳ ಚಾಲಕರು ಕಲ್ಸಂಕ ಜಂಕ್ಷನ್‌ನಲ್ಲಿಯೇ ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಳ್ಳುವುದು ಹಾಗೂ ಇಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅದ್ರಲ್ಲೂ ರಸ್ತೆಯ ನಡುಭಾಗದಲ್ಲೇ ಪ್ರಯಾಣಿಕರನ್ನು ಹಿತ್ತಿಸಿ ಇಳಿಸುವ ಸಲುವಾಗಿ ನಿಲ್ಲಿಸುತ್ತಾ ಇರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಪ್ರಯಾಣಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಖಾಸಗಿ ಬಸ್‌ಗಳ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡ್ರೆ, ಪೊಲೀಸರನ್ನೇ ದಬಾಯಿಸುವ ಮಟ್ಟಿಗೆ ಬಸ್ ಚಾಲಕರು ಇಳಿದಿದ್ದಾರೆ. ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿಸುವ ಕಾರ್ಯವನ್ನು ಬಸ್ ಮಾಲೀಕರು ಮಾಡುತ್ತಿದ್ದಾರೆ. ಹೀಗಾಗಿ ಕಲ್ಸಂಕ ಸಿಗ್ನಲ್‌ನಲ್ಲಿ ಪೊಲೀಸರು ಕಣ್ಣಿದ್ದು ಕುರುಡರಂತಾಗಿದ್ದಾರೆ.

ಸಿಟಿ ಹಾಗೂ ಖಾಸಗಿ ಬಸ್ಸುಗಳ ಚಾಲಕರು ಸೃಷ್ಟಿಸುತ್ತಿರುವ ಅವಾಂತರಗಳಿಂದಾಗಿ ಉಡುಪಿಯ ನಾಗರೀಕರು ಬೇಸತ್ತು ಹೋಗಿದ್ದಾರೆ. ಕಲ್ಸಂಕ ಜಂಕ್ಸನ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವುದರಿಂದ ರೋಗಿಗಳು, ಜಿಲ್ಲಾದಿಕಾರಿಗಳ ಕಚೇರಿಗೆ ಅಗತ್ಯ ಕೆಲಸಕ್ಕೆ ತೆರಳುವವರು, ಜನಸಾಮಾನ್ಯರು ಪಡಬಾರದ ಸಮಸ್ಯೆ ಅನುಭವಿಸಬೇಕಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಕೈಗೊಂಡು ಖಾಸಗಿ ಬಸ್ ಚಾಲಕರ ದರ್ಪಕ್ಕೆ ಕಡಿವಾಣ ಹಾಕಬೇಕಾಗಿದೆ.
ಇದನ್ನೂ ಓದಿ : Nadoja Dr G Shankar : ವಿಧಾನ ಪರಿಷತ್‌ಗೆ ನಾಡೋಜಾ ಡಾ.ಜಿ.ಶಂಕರ್ ?
ಇದನ್ನೂ ಓದಿ : Karnataka Rain Alert : ಕರ್ನಾಟಕದ 9 ಜಿಲ್ಲೆಗಳಲ್ಲಿ ಜೂನ್ 2 ರವರೆಗೆ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಘೋಷಣೆ