ನವರಾತ್ರಿ 5ನೇ ದಿನ : ಪ್ರೀತಿ, ವಾತ್ಸಲ್ಯವನ್ನು ಜಗತ್ತಿಗೆ ಹಂಚುವ ಜಗನ್ಮಾತೆ ಸ್ಕಂದಮಾತಾ ದೇವಿ !

ನವರಾತ್ರಿಯ ಐದನೇ ದಿನವನ್ನು ಅಕ್ಟೋಬರ್ 15, 2026 (ಇಂದು) ರಂದು ಸ್ಕಂದಮಾತಾ ದೇವಿಯನ್ನು ಪೂಜಿಸುವ ಮೂಲಕ ಆಚರಿಸಲಾಗುತ್ತಿದೆ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
Navaratri Day 5 Skandamata Devi
Navaratri Day 5 Skandamata Devi

ನವರಾತ್ರಿಯ ಐದನೇ ದಿನವನ್ನು ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಇದು ದುರ್ಗಾದೇವಿಯ ಪ್ರೀತಿ, ವಾತ್ಸಲ್ಯ ತುಂಬಿದ ಅವತಾರವಾಗಿದೆ. ಸದ್ಯ ಎಲ್ಲಡೆ ನವರಾತ್ರಿಯ ವೈಭವ ಮನೆಮಾಡಿದೆ. ನವರಾತ್ರಿಯ ಐದನೇ ದಿನವನ್ನು ಅಕ್ಟೋಬರ್ 15, 2026 (ಇಂದು) ರಂದು ಸ್ಕಂದಮಾತಾ ದೇವಿಯನ್ನು ಪೂಜಿಸುವ ಮೂಲಕ ಆಚರಿಸಲಾಗುತ್ತಿದೆ. ಸ್ಕಂದಮಾತಾ ದೇವಿ ಅಂದರೆ ಸ್ಕಂದಕುಮಾರ ಅಂದರೆ ಕಾರ್ತಿಕೇಯನ ತಾಯಿ. ಈ ದಿನ ದೇವಿಯನ್ನು ಪೂಜಿಸುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ, ಜ್ಞಾನ ಹೆಚ್ಚಾಗುತ್ತದೆ. ತಾಯಿ ತನ್ನ ಮಕ್ಕಳನ್ನು ಪ್ರೀತಿಯಿಂದ ಸಲಹುತ್ತಾಳೆ ಎಂಬ ಅರ್ಥದಲ್ಲಿ ಈ ದಿನ ನವರಾತ್ರಿಯ ಪೂಜೆ ನಡೆಯುತ್ತದೆ. ಇಷ್ಟೇ ಅಲ್ಲದೇ ಮಕ್ಕಳ ಭಾಗ್ಯವಿಲ್ಲದ ದಂಪತಿಗಳಿಗೆ ಸ್ಕಂದಮಾತಾ ದೇವಿಯನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ.

ನವರಾತ್ರಿ 5ನೇ ದಿನ

ದಿನಾಂಕ : ಅಕ್ಟೋಬರ್‌ 15, 2026

ನವರಾತ್ರಿ ದಿನ : ಐದನೇ ದಿನ

ಪೂಜಿಸುವ ದೇವಿ : ಸ್ಕಂದಮಾತಾ ದೇವಿ

ಮಹತ್ವ : ಪ್ರೀತಿ, ವಾತ್ಸಲ್ಯ ಹಂಚುವ ತಾಯಿ

ಬಣ್ಣ : ಹಳದಿ

ನೈವೇದ್ಯ : ಬಾಳೆಹಣ್ಣು ಅಥವಾ ಬಾಳೆಹಣ್ಣಿನಿಂದ ತಯಾರಿಸಿದ ಸಿಹಿ

ಸ್ಕಂದಮಾತಾ ದೇವಿ ಪುರಾಣ ಕಥೆ

ಕಠಿಣ ತಪಸ್ಸು ಮಾಡಿ ಶಿವನ್ನು ಒಲಿಸಿದ ನಂತರ ಶಿವನ ಪತ್ನಿಯಾಗಿ ಬಂದ ಮಾತೆ ಪಾರ್ವತಿಯು ಕಾರ್ತಿಕೇಯನಿಗೆ ಜನ್ಮ ನೀಡುತ್ತಾಳೆ. ಕಾರ್ತಿಕೇಯನ ಇನ್ನೊಂದು ಹೆಸರು ಸ್ಕಂದ. ಆದ್ದರಿಂದ ದುರ್ಗಾ ದೇವಿಯ ಈ ರೂಪವನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ. ಸ್ಕಂದಮಾತಾ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು, ಸಿಂಹದಮೇಲೆ ಆಸೀನಳಾಗಿದ್ದಾಳೆ. ಕಾರ್ತಿಕೇಯನನ್ನು ತನ್ನ ಮಡಿಲಲ್ಲಿ ಹಿಡಿದಿದ್ದಾಳೆ. ಎರಡು ಕೈಗಳಲ್ಲಿ ಕಮಲವನ್ನು ಹಿಡಿದಿರುವ ದೇವಿಯ ಮುಖದಲ್ಲಿ ಸೂರ್ಯನ ತೇಜಸ್ಸಿದೆ.

Topics

ಸಂಬಂಧಿತ ಸುದ್ದಿಗಳು