ನವರಾತ್ರಿ 9ನೇ ದಿನ : ಇಂದು ಮಾಹಾನವಮಿ: ಸಿದ್ದಿದಾತ್ರಿ ದೇವಿಯನ್ನು ಪೂಜಿಸುವ ದಿನ !

ಶರನ್ನ ನವರಾತ್ರಿಯ ಒಂಬತ್ತನೇ ದಿನದಂದು, ದುರ್ಗಾ ದೇವಿಯ ಒಂಬತ್ತನೇ ರೂಪವಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದ ಮಹತ್ವವೇನು? ಇಲ್ಲಿದೆ ಓದಿ.

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
Navaratri 9th day Siddhidatri Devi
Navaratri 9th day Siddhidatri Devi

ಈ ವರ್ಷದ ಶರನ್ನ ನವರಾತ್ರಿಯ ಕೊನೆಯ ದಿನ ನವಮಿಯ ಆಚರಣೆ ಇಂದು (ಅಕ್ಟೋಬರ್ 19, 2026) ನಡೆಯಲಿದೆ. ಇಂದು ನವದುರ್ಗೆಯರ ಒಂಬತ್ತನೇ ಅವತಾರ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವ ದಿನ. ಧಾರ್ಮಿಕ ನಂಬಿಕೆಗಳ ಪ್ರಕಾರ ಸಿದ್ಧಿದಾತ್ರಿ ದೇವಿಯು ತನ್ನ ಭಕ್ತರಿಗೆ ಸುಖ, ಸಂತೋಷ, ಜ್ಞಾನ ಮತ್ತು ಸಮೃದ್ದಿಯನ್ನು ನೀಡುತ್ತಾಳೆ. ಭಕ್ತರ ಆಸೆಗಳನ್ನು ಪೂರೈಸಿ, ಜೀವನದಲ್ಲಲಿರುವ ಅಡೆತಡೆಗಳನ್ನು ದೂರಮಾಡುತ್ತಾಳೆ. ನವಮಿ ತಿಥಿಯಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವ ಮೂಲಕ ನವರಾತ್ರಿ ಆಚರಣೆ ಸಂಪೂರ್ಣವಾಗುತ್ತದೆ. ಮರುದಿನ ವಿಜಯ ದಶಮಿಯ ಆಚರಣೆಯಿರುತ್ತದೆ. ನವಮಿಯಂದು ಸಿದ್ದಿದಾತ್ರಿ ದೇವಿಯನ್ನು ಪೂಜಿಸುವದೇಕೆ ಎಂದು ತಿಳಿಯೋಣ.

ನವರಾತ್ರಿ 9ನೇ ದಿನ

ದಿನಾಂಕ : ಅಕ್ಟೋಬರ್‌ 19, 2026

ನವರಾತ್ರಿ ದಿನ : ಒಂಬತ್ತನೇ ದಿನ

ಪೂಜಿಸುವ ದೇವಿ : ಸಿದ್ಧಿದಾತ್ರಿ ದೇವಿ

ಮಹತ್ವ : ಜ್ಞಾನ, ಆಧ್ಯಾತ್ಮ ಸಾಧನೆ, ಸುಖ, ಸಮೃದ್ಧಿಯನ್ನು ನೀಡುವ ದೇವಿ

ಬಣ್ಣ : ನವಿಲು ಹಸಿರು/ ಹಸಿರು

ನೈವೇದ್ಯ : ಎಳ್ಳಿನಿಂದ ತಯಾರಿಸಿದ ಸಿಹಿ

ಸಿದ್ಧಿದಾತ್ರಿ ದೇವಿಯ ರೂಪ ಮತ್ತು ಪುರಾಣ ಕಥೆ

ಸಿದ್ಧಿದಾತ್ರಿ ದೇವಿಯು ಸಿದ್ಧಿಗಳನ್ನು ದಯಾಪಾಲಿಸುವ ದೇವಿ. ನವರಾತ್ರಿ ಒಂಬತ್ತನೇ ದಿನದಂದು ಅವಳನ್ನು ಪೂಜಿಸುವುದರಿಂದ ಎಲ್ಲ ಸಿದ್ಧಿಗಳು ಲಭಿಸುತ್ತವೆ. ಭಕ್ತರ ಮನೋಕಾಮನೆಗಳು ಪೂರೈಸುತ್ತವೆ. ಜ್ಞಾನ ಸಂಪಾದನೆ, ಆಧ್ಯಾತ್ಮ ಸಾಧನೆಗೆ ಸಹಾಯ ಮಾಡುವ ದೇವಿಯಾಗಿದ್ದಾಳೆ. ಪುರಾಣದ ಕಥೆಗಳ ಪ್ರಕಾರ ಸಿದ್ಧಿದಾತ್ರಿ ದೇವಿಯನ್ನು ಕಮಲದ ಮೇಲೆ ಕುಳಿತಿರುವ ಅಥವಾ ಸಿಂಹದ ಮೇಲೆ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ದೇವಿಗೆ ನಾಲ್ಕು ಕೈಗಳಿದ್ದು ಕಮಲ, ಶಂಖ, ಚಕ್ರ ಮತ್ತು ಗದೆಯನ್ನು ಹಿಡಿದಿರುತ್ತಾಳೆ. ಭಕ್ತರ ಜ್ಞಾನ, ಯೋಗ ಸಾಧನೆಗೆ ತನ್ನ ಅಭಯವನ್ನು ನೀಡುವ ದೇವಿಯಾಗಿ ಸಿದ್ದಿದಾತ್ರಿ ದೇವಿಯ ಪೂಜಿಸಲ್ಪಡುತ್ತಾಳೆ.

Topics

ಸಂಬಂಧಿತ ಸುದ್ದಿಗಳು