ಬೆಂಗಳೂರು : ಜಗತ್ತಿನಾದ್ಯಂತ ಕೊರೊನಾ ವೈರಸ್ ಅಟ್ಟಹಾಸವನ್ನು ಮೆರೆಯುತ್ತಿದೆ. ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸುತ್ತಿದ್ದು ನೂರಾರು ಮಂದಿ ಈಗಾಗಲೇ ಪ್ರಾಣತೆತ್ತಿದ್ದಾರೆ. ವೈದ್ಯಕೀಯ ಜಗತ್ತು ಕೊರೊನಾ ವೈರಸ್ ತಡೆಗೆ ಹೋರಾಟವನ್ನೇ ನಡೆಸುತ್ತಿದೆ. ಸಂಶೋಧನೆಗಳನ್ನು ನಡೆಸುತ್ತಿದ್ದರೂ ಕೂಡ ಕೊರೊನಾ ವೈರಸ್ ತಡೆಗೆ ಸಾಧ್ಯವಾಗ್ತಿಲ್ಲ. ಆದರೆ ಸ್ವಯಂ ಘೋಷಿತ ದೇವಮಾನವ ಬಿಡದಿಯ ನಿತ್ಯಾನಂದ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿದಿದ್ದಾನಂತೆ
ಕೊರೊನಾ ವೈರಸ್ ತಡೆ ಹೇಗೆ ಅನ್ನುವ ಕುರಿತು ವಿಡಿಯೋವೊಂದನ್ನು ಪೋಸ್ಟ್ ಮಾಡಿರೊ ನಿತ್ಯಾನಂದ, “ಓಂ ನಿತ್ಯಾನಂದ ಪರಮ ಶಿವೋಹಂ”ಎಂಬ ಅಖಂಡ ಮಹಾವಾಕ್ಯ ಮಂತ್ರವನ್ನು ನಿರಂತರ 48 ಗಂಟೆಗಳ ಕಾಲ ಪಠಿಸಿದರೆ ಕೊರೊನಾ ದೇಹ ಬಿಟ್ಟು ಹೋಗುತ್ತೆ ಅಂತಾ ತಿಳಿಸಿದ್ದಾನೆ. ಅಖಂಡ ಮಹಾವಾಕ್ಯದ ಮಂತ್ರವನ್ನು ನಿರಂತರವಾಗಿ ಪಠಿಸುವುದರಿಂದ ದೇಹದಲ್ಲಿ ಆಧ್ಯಾತ್ಮಿಕ ಹಾಗೂ ಧನಾತ್ಮಕ ಶಕ್ತಿಗಳು ವೃದ್ದಿಯಾಗುತ್ತದೆ. ಇದರಿಂದ ಕೊರೊನಾ ವೈರಸ್ ದೇಹದಿಂದ ಓಡಿ ಹೋಗುತ್ತದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.
ಕೊರೊನಾಗೆ ಔಷಧಿ ಕಂಡುಹಿಡಿದ ದೇವಮಾನವ ನಿತ್ಯಾನಂದ !
- Advertisement -
RELATED ARTICLES