ಫ್ಯಾಷನ್ ಶೋಗಳಲ್ಲಿ ರ‍್ಯಾಂಪ್ ( incredible fashion design) ಮಾಡುವ ಮೋಡಲ್ಸ್ ಗಳ (models) ವೇಷಭೂಷಣ ಹಾಗೂ ಕ್ಯಾಟ್ವಾಕ್ ವನ್ನು ವ್ಯಕ್ತಿಯೊಬ್ಬ ಅನುಕರಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೀಗೆ ವೈರಲ್ ಆಗುತ್ತಿರುವ ವ್ಯಕ್ತಿಯ ಹೆಸರು ಡಾ ಅಜಯಿತಾ(Dr Ajayita) . ತನ್ನ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರಲ್ಲಿ”ಈ ದಿನಗಳಲ್ಲಿ ಹೆಚ್ಚಿನ ಫ್ಯಾಷನ್ ಶೋಗಳು ” ಅಂತ ಕ್ಯಾಪ್ಷನ್ ಕೊಟ್ಟು ಪೋಸ್ಟ್ ಹಂಚಿಕೊಂಡಿದ್ದಾರೆ.
ವೀಡಿಯೋ ನೋಡಲು ಸಕ್ಕತ್ ಕಾಮಿಡಿ ಆಗಿದೆ ಆದರೆ ಇಲ್ಲಿ ಅವನ ಸೃಜನಶೀಲತೆ ಕಾಣಸಿಗುತ್ತದೆ. ಕೇವಲ ಮನೆಯಲ್ಲಿ ಸಿಗುವಂತ ವಸ್ತುಗಳನ್ನು ಹಿಡಿದುಕೊಂಡು ರಾಂಪ್ ವಾಕ್ ಮಾಡುತ್ತಾನೆ. ವೀಡಿಯೊದಲ್ಲಿ ಅವರು ಬಳಸಿದ ವಿಷಯಗಳು ಹೀಗಿವೆ: ಅವನ ಕುತ್ತಿಗೆಗೆ ವಾಕರ್, ಸ್ಕರ್ಟ್ ಮತ್ತು ಅಲ್ಯೂಮಿನಿಯಂ ಏಣಿ. ಒಟ್ಟಾರೆಯಾಗಿ ವಿಚಿತ್ರ ವಿನ್ಯಾಸದ ಬಟ್ಟೆ ಧರಿಸಿದ ಮಾಡುವುದು ಎಲ್ಲರ ಗಮನ ಸೆಳೆದಿದೆ.
ವಿಡಿಯೋದಲ್ಲಿ ಕಾಣುವಂತೆ ಅವರ ಹಿಂಭಾಗದಲ್ಲಿ ಕಬ್ಬಿಣದ ಬಾಗಿಲು, ಹೆಗಲ ಮೇಲೆ ಮರದ ಬೆಂಚು ಮತ್ತು ಮರದ ಏಣಿಯೊಂದಿಗೆ ನಡೆಯುವುದನ್ನು ಸಹ ಕಾಣಬಹುದು. ಇನ್ನು ಇಲ್ಲಿಯವರೆಗೆ ಟ್ವಿಟ್ಟರಲ್ಲಿ ಡಾ ಅಜಯಿತ ಅವರ ಪೋಸ್ಟ್ 1.5 ಮಿಲಿಯನ್ ವೀಕ್ಷಣೆ ಗೊಂಡಿದೆ ಹಾಗೂ 80,000 ಮೆಚ್ಚುಗೆ ವ್ಯಕ್ತಪಡಿಸಿದರು.
Most fashion shows these days… pic.twitter.com/aUFD003STQ
— Dr. Ajayita (@DoctorAjayita) June 29, 2022
ಈ ಫ್ಯಾಶನ್ ಶೋ ನೋಡಿದ ಜನರು ಸಾಕಷ್ಟು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸಾಕಷ್ಟು ಮಂದಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರ, “ಇದು ಫ್ಯಾಶನ್ ಶೋ ಅಥವಾ ದರೋಡೆಯೇ” ಎಂದು ಹೇಳಿದರು.ಇನ್ನೊಬ್ಬರು ಬಳಕೆದಾರ, “Wiooowww ಅವನು ಕಡಿಮೆ ಶೋಸ್ಟಾಪರ್ ಅಲ್ಲ.” ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ವೀಡಿಯೋ ಹಾಗೂ ಈ ರೀತಿಯ ತಮಾಷೆಗೆ ಸಾಕಷ್ಟು ಪ್ರತಿಕ್ರಿಯೆ ಹಾಗೂ ವೀಕ್ಷಣೆ ಆಗುತ್ತದೆ . ಇದನ್ನು ಅರಿತುಕೊಂಡ ಮಂದಿ ತಮ್ಮ ಪಬ್ಲಿಸಿಟಿಗೆ ಬಳಸಿಕೊಳ್ಳುತ್ತಿದ್ದಾರೆ .
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Viral Video : ಕಾಲೇಜಿನಲ್ಲಿ ಅಸಭ್ಯ ವರ್ತನೆ : ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿಸಿದ ಉಪನ್ಯಾಸಕಿಯರು
ಇದನ್ನೂ ಓದಿ: Monkey fox Virus fear : ಮಂಕಿಪಾಕ್ಸ್ ಭೀತಿ : ಕರ್ನಾಟಕದಲ್ಲಿ ಹೈ ಅಲರ್ಟ್, ಮಾರ್ಗಸೂಚಿ ಪ್ರಕಟ
A Common man incredible fashion design Hit On Internet