ಭಾನುವಾರ, ಏಪ್ರಿಲ್ 27, 2025
HomeNationalಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ: ರಾಮ ನಡೆದ ಹಾದಿ ಇಂದಿಗೂ ಜೀವಂತ, ದೇಶದ ಹಲವೆಡೆ ಇದೆ ರಾಮನ...

ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ: ರಾಮ ನಡೆದ ಹಾದಿ ಇಂದಿಗೂ ಜೀವಂತ, ದೇಶದ ಹಲವೆಡೆ ಇದೆ ರಾಮನ ಕುರುಹು

- Advertisement -

Ayodhya Ram Mandir Pran Pratishtha Ceremony live  : ಭಾರತೀಯರ ಎದೆಯಲ್ಲಿ ಶ್ರೀ ರಾಮನಿಗೆ ವಿಶಿಷ್ಟವಾದ ಸ್ಥಾನವಿದೆ. ರಾಮ ನಡೆದ ಹಾದಿಯೆಲ್ಲಾ ಭಾರತೀಯರ ಪಾಲಿಗೆ ಪುಣ್ಯ ಭೂಮಿ. ಇಂದಿಗೂ ಅಲ್ಲಿ ಜನರು ರಾಮನನ್ನು ಭಕ್ತಿಯಿಂದ ಪೂಜಿಸಿ ಆರಾಧಿಸುತ್ತಾರೆ. ರಾಮ ಜನ್ಮಭೂಮಿ ಅನ್ಯರ ಪಾಲಾಗಿದ್ದರೂ ರಾಮನ ನೆನಪಿನಲ್ಲಿಯೇ ಇಲ್ಲಿ ಪೂಜೆ ಪುನಸ್ಕಾರಗಳು ಇಂದಿಗೂ ಇಲ್ಲಿ ನಡೆಯುತ್ತಲೇ ಇವೆ. ರಾಮ ವನವಾಸಕ್ಕೆ ತೆರಳಿದ ಜಾಗಗಳಂತು ಭಕ್ತರ ಪಾಲಿನ ಶ್ರದ್ದಾ ಕೇಂದ್ರ.

Ayodhya Ram Mandir Pran Pratishtha Ceremony live path taken by Rama is still alive today,
Image Credit to Original Source

ರಾಮನಿಗೆ ಪಿತೃವಾಕ್ಯ ಪರಿ ಪಾಲನೆಯ ಸಲುವಾಗಿ ಅಯೋಧ್ಯೆ ಬಿಡಬೇಕಾಯಿತು . ಅಲ್ಲಿಂದ ಕಾಡಿನತ್ತ ಹೆಜ್ಜೆ ಹಾಕಿದ್ದ ರಾಮ ಗಂಗಾನದಿಯ ದಡದಲ್ಲಿರುವ ನಿಷಧ ರಾಜ್ಯಕ್ಕೆ ಬಂದಿದ್ದ ಅಲ್ಲಿಂದ ಗಂಗಾ ನದಿಯನ್ನು ಪಾರು ಮಾಡಿದ ರಾಮ ಸೀತೆ ಲಕ್ಷ್ಮಣ ಪ್ರಯಾಗಕ್ಕೆ ಬಂದು ತಲುಪಿದ್ರು. ಇದು ಉತ್ತರ ಪ್ರದೇಶ ದಲ್ಲಿಯೇ ಇದೆ. ಇಲ್ಲಿ ತ್ರಿವೇಣಿ ಸಂಗಮವನ್ನು ಕೂಡಾ ಕಾಣಬಹುದು . ಇಲ್ಲಿ ಗಂಗಾ ಯಮುನ ಹಾಗೂ ಗುಪ್ತಗಾಮಿನಿ ಯಾದ ಸರಸ್ವತಿ ಸಂದಿಸುತ್ತಾಳೆ.

ಇನ್ನು ಇಲ್ಲಿಂದ ರಾಮನ ಹೆಜ್ಜೆ ಗುರುತು ಕಾಣಸಿಗೋದು ಚಿತ್ರಕೂಟದಲ್ಲಿ. ಚಿತ್ರಕೂಟದಲ್ಲಿ ರಾಮ ತನ್ನ 13 ವರ್ಷಗಳ ವನವಾಸವನ್ನು ಕಳೆದಿದ್ದ. ಇಲ್ಲಿಯೇ ರಾಮ ಭರತನನ್ನು ಭೇಟಿಯಾಗಿದ್ದು ಎನ್ನುವ ನಂಬಿಕೆ ಇದೆ. ಇದರ ಗುರುತಾಗಿ ಅಲ್ಲಿಯ ಕಲ್ಲುಗಳಲ್ಲಿ ರಾಮ ಹಾಗೂ ಭರತನ ಪಾದದ ಗುರುತು ಇದೆ ಅನ್ನೋದಾಗಿ ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ಸ್ಥಳದಲ್ಲಿ ರಾಮ ಹಾಗೂ ಭರತನ ಪೂಜೆಯನ್ನು ಮಾಡಲಾಗುತ್ತೆ . ಇದು ಮದ್ಯಪ್ರದೇಶದ ಸತ್ನಾ ಅನ್ನೋ ಜಿಲ್ಲೆಯಲ್ಲಿ ಬರುತ್ತೆ.

ಇದನ್ನೂ ಓದಿ : ಅಯೋಧ್ಯೆಯಲ್ಲಿ ರಾಮನಿಗಾಗಿ ಸಾಲು ಸಾಲು ಉಡುಗೊರೆ : ಏನೆಲ್ಲಾ ಉಡುಗೊರೆ ಭಕ್ತರಿಂದ ಬಂತು ಗೊತ್ತಾ ?

13 ವರ್ಷಗಳ ವನವಾಸವನ್ನು ಮಾಡಿದ್ದ ರಾಮ ಮುಂದೆ ಹೋಗಿದ್ದು ದಂಡಕಾರಾಣ್ಯದ ಕಡೆಗೆ.  ರಾಕ್ಷಸರ ಉಪಟಳಕ್ಕೆ ಬೇಸತ್ತಿದ್ದ ಅಲ್ಲಿನ ಜನರನ್ನು ಕಾಯೋಕೆ ಅಲ್ಲಿಗೆ ರಾಮ ತೆರಳಿದ್ದ . ಅಲ್ಲಿ ಪಂಚವಟಿ ಎಂಬಲ್ಲಿ ಸೀತೆ ಹಾಗೂ ಲಕ್ಷ್ಮಣನ ಸಮೇತನಾಗಿ ತನ್ನ ವಾಸ ಆರಂಭಿಸಿದ್ದ . ಇಲ್ಲಿ ಪಂಚವಟಿ ಅಂದ್ರೆ 5 ವೃಕ್ಷ ಅಂದ್ರೆ ಅದರಲ್ಲೂ ವಟ ವೃಕ್ಷ ( ಆಲದ ಮರ) ವಿದ್ದ ಜಾಗ ಎಂಬರ್ಥವಿದೆ. ಇಂದಿಗೂ ಈ ವೃಕ್ಷವನ್ನು ನಾವಿಲ್ಲಿ ಕಾಣಬಹುದು.

ಇನ್ನು ಇಲ್ಲೇ ರಾಮಾಯಣದ ಮಹತ್ವದ ಘಟ್ಟ ನಡೆದಿದ್ದು . ಇಲ್ಲಿ ವಾಸವಿದ್ದಾಗ ರಾವಣ ಸೀತೆಯನ್ನು ಅಪಹರಿಸಿದ್ದು ಎಂದು ರಾಮಾಯಣ ಹೇಳುತ್ತೆ . ಇದಕ್ಕೆ ಸಾಕ್ಷಿ ಯಾಗಿ ಸೀತಾ ಗುಹೆ , ಲಕ್ಷ್ಮಣ ಶೂರ್ಪಣಕಿಯ ಮೂಗು ಕತ್ತರಿದ ಜಾಗ ಎಲ್ಲವನ್ನು ಕಾಣಬಹುದು. ಇನ್ನು ಸೀತಾಪಹ ರಣ ನಡೆದಿದ್ದು ಇದೇ ಜಾಗವಾಗಿದ್ದು ಇಲ್ಲಿ ಲಕ್ಷ್ಮಣ ರೇಖೆಯನ್ನು ಎಳೆದು ಹೋದ ಜಾಗವೂ ಇಲ್ಲಿದೆ .

Ayodhya Ram Mandir Pran Pratishtha Ceremony live path taken by Rama is still alive today,
Image Credit to Original Source

ಇಲ್ಲಿ ಚಿಕ್ಕ ದಾಗಿ ನೀರು ಹರಿಯುತ್ತಿದ್ದು, ಮೊದಲು ಇದು ಅಗ್ನಿ ರೇಖೆಯಾಗಿತ್ತು ಈಗ ಜಲರೇಖೆ ಯಾಗಿದೆ ಅಂತಾರೆ ಸ್ಥಳೀಯರು . ಇನ್ನು ಈ ಪಂಚವಟಿ ಇರೋದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ. ಹಿಂದಿಯಲ್ಲಿ ನಾಸಿಕ್ ಅಂದ್ರೆ ಮೂಗು ಎಂಬ ಅರ್ಥವೂ ಇದೆ. ಇಲ್ಲಿ ಮುಂದೆ ರಾವಣಾಸುರನಿಂದ ಸೀತೆಯ ಅಪಹರಣ ನಡೆಯುತ್ತೆ. ನಂತರ ರಾಮ ಸೀತೆಯನ್ನು ಹುಡುಕಿಕೊಂಡು ಮುಂದೆ ತೆರಳುತ್ತಾನೆ. ಅಲ್ಲಿಂದ ಕಿಷ್ಕಿಂದೆಗೆ ಆಗಮಿಸುವ ರಾಮನಿಗೆ ಹನುಮಂತ ಹಾಗೂ ಸುಗ್ರೀವ ಸ್ನೇಹವಾಗುತ್ತೆ.

ಇಲ್ಲಿ ವಾಲಿಯನ್ನು ಸಂಹರಿಸುವ ರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ್ದ . ಇನ್ನು ಈ ಘಟನೆಗೆ ಸಾಕ್ಷಿಯಾಗಿ ನಿಂತಿರುವುದು ನಮ್ಮ ಕರ್ನಾಟಕಕ್ಕೆ ಸೇರಿದ ಅಂಜನಾದ್ರಿ ಬೆಟ್ಟ. ಬಳ್ಳಾರಿ ಜಿಲ್ಲೆಗೆ ಸೇರಿದ ಈ ಬೆಟ್ಟ ಹನುಮಂತನ ಜನ್ಮಸ್ಥಳ ಅಂತನೂ ಹೇಳಲಾಗುತ್ತೆ. ಇಂದಿಗೂ ಹಲವಾರು ಆಂಜನೇಯನ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.

ಇದನ್ನೂ ಓದಿ : ರಾಮನ ದರ್ಶನಕ್ಕಾಗಿ ಕಾಯುತ್ತವೆ ಪ್ರೇತಾತ್ಮಗಳು : ರಾಮನಿಗೂ ಲಕ್ಷ್ಮಣ ನಿಗೂ ಇಲ್ಲಿ ಭಿನ್ನ ಪೂಜೆ

ಮುಂದೆ ಸೀತೆಯ ಮಾಹಿತಿಯನ್ನು ಅರಿತ ರಾಮನು ಲಂಕೆಗೆ ಲಗ್ಗೆ ಹಾಕಲು ಧನುಶ್ ಕೋಟಿಗೆ ಬರುತ್ತಾನೆ . ಅಲ್ಲಿ ವಾನರ ಸೈನ್ಯದೊಂದಿಗೆ ಸೇತುವೆಯನ್ನು ನಿರ್ಮಾಣ ಮಾಡುತ್ತಾನೆ ಅನ್ನೋದು ಪುರಾಣ ಇದಕ್ಕೆ ಸಾಕ್ಷಿಯಾಗಿ ಇಲ್ಲಿ ಸೇತುವೆಯ ಭಾಗಗಳನ್ನು ಕಾಣಬಹುದು . ಜೊತೆಗೆ ರಾಮನೇ ನಿರ್ಮಿಸಿದ ಎನ್ನೋ ಜೋತಿರ್ಲಿಂಗ ವಿದ್ದು ಇದರಿಂದಲೇ ಇಲ್ಲಿಗೆ ರಾಮೇಶ್ವರಂ ಎನ್ನೋ ಹೆಸರು ಬಂತು ಅಂತ ಹೇಳಲಾಗುತ್ತೆ. ಒಟ್ಟಾರೆ ರಾಮ ಜನ್ಮ ಭೂ ಮಿ ಎಷ್ಟು ಮುಖ್ಯವೋ ಅಷ್ಟೋ ಮುಖ್ಯ ರಾಮ ನಡೆದ ಹಾದಿ ಅನ್ನೋದು ನಮ್ಮ ಹೆಮ್ಮೆ .

Ayodhya Ram Mandir Pran Pratishtha Ceremony live path taken by Rama is still alive today, there are traces of Rama in many parts of the country

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular