ಕರ್ನಾಟಕದ ಹೆಮ್ಮೆಯ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯ (Immadi Pulikeshi) ಪ್ರತಿಮೆ ಸ್ಥಾಪಿಸಬೇಕೆಂಬ ಅಭಿಯಾನ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಈ ಆಂದೋಲನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಸೇರಿ ಹಲವರು ಬೆಂಬಲ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನರು ಈ ಆಂದೋಲನಕ್ಕೆ ತಮ್ಮ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇಮ್ಮಡಿ ಪುಲಿಕೇಶಿ ದೊರೆಯ ಪ್ರತಿಮೆ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಮ್ಮಡಿ ಪುಲಿಕೇಶಿ ಬಾದಾಮಿ ಚಾಲುಕ್ಯ ವಂಶದ ಅರಸ. ಚಾಲುಕ್ಯ ಅರಸರು ಜೈನ ಧರ್ಮದ ದಿಗಂಬರ ಪಂಥ ಅನುಸರಿಸಿದವರು. ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ನಡೆಸಿದರು. ಚಾಲುಕ್ಯ ಅರಸರ ಸಾಮ್ರಾಜ್ಯವು ಇಂದಿನ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಆಂಧ್ರಪ್ರದೇಶ,ಗುಜರಾತ್, ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳನ್ನು ವ್ಯಾಪಿಸಿತ್ತು. ಚಾಲುಕ್ಯ ಚಕ್ರವರ್ತಿ ಕೃತವರ್ಮನ ಮಗನಾದ ಪುಲಿಕೇಶಿ ರಾಜ್ಯದ ಮೇಲೆ ಹಿಡಿತ ಸಾಧಿಸಲು ತನ್ನ ಚಿಕ್ಕಪ್ಪನಾದ ಮಂಗಳೇಶನ ವಿರುದ್ಧ ದಂಗೆಯೆದ್ದು ಅವನನ್ನು ಪಟ್ಟದಿಂದ ಕೆಳಗಿಳಿಸಿ ತಾನು ಪಟ್ಟಕ್ಕೇರುತ್ತಾನೆ. ನಂತರದ ದಿನಗಳಲ್ಲಿ, ಪಶ್ಚಿಮ ಕರಾವಳಿಯಲ್ಲಿ ಕೊಂಕಣದ ಮೌರ್ಯರನ್ನು ಸೋಲಿಸಿ ಆ ಪ್ರದೇಶಗಳನ್ನು ತನ್ನ ಆಡಳಿತಕ್ಕೆ ತರುತ್ತಾನೆ.
ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರರಾಗುವಂತಹ ಹಲವು ಸಾಧನೆಗಳ ಮೂಲಕ ಇಮ್ಮಡಿ ಪುಲಿಕೇಶಿಯ ಹೆಸರು ಈಗಲೂ ಪ್ರವರ್ಧಮಾನದಲ್ಲಿ ಕೇಳಿಬರರುತ್ತದೆ. ಭಾರತದಲ್ಲಿ ಮಹಮ್ಮದೀಯರ ಆಕ್ರಮಣದವರೆಗೂ ಸ್ಥಾಪಿತವಾದ ಹಲವು ಪ್ರಬುದ್ಧ ಹಿಂದೂ ಸಾಮ್ರಾಜ್ಯಗಳಲ್ಲಿ ಚಾಲುಕ್ಯ ವಂಶವು ಪ್ರಮುಖವಾದುದು. ಅಪ್ಪಾಯಿಕ ಮತ್ತು ಗೋವಿಂದನನ್ನು ಮೊದಲ್ಗೊಂಡು ಅಮೋಘ ಚಕ್ರವರ್ತಿಯೆಂದು ಹೆಸರುವಾಸಿಯಾಗಿದ್ದ ಹರ್ಷವರ್ಧನನನ್ನು ಇಮ್ಮಡಿ ಪುಲಿಕೇಶಿ ಎದುರಿಸಿದ್ದ. ಇದು ಇಮ್ಮಡಿ ಪುಲಿಕೇಶಿಯನ್ನು (Immadi Pulikeshi ) ಇತಿಹಾಸದಲ್ಲಿ ಚಿರಸ್ಥಾಯಿಯನ್ನಾಗಿಸಿತು. ದಕ್ಷಿಣ ಭಾರತದ ರಾಜರುಗಳಲ್ಲಿ ಪುಲಿಕೇಶಿಗೆ ಮಹತ್ವದ ಸ್ಥಾನ ಒದಗಿಸಿಕೊಟ್ಟಿತು.
ಏಕೆ ಈಗ ಅಭಿಯಾನ?
ಉತ್ತರ ಭಾರತೀಯರು ದಕ್ಷಿಣ ಭಾರತೀಯರ ಮೇಲೆ ಅಧಿಪತ್ಯ ಸಾಧಿಸುತ್ತಿದ್ದಾರೆ.ಹಿಂದಿ ಭಾಷಿಗರು ತಮ್ಮ ಪ್ರಾಬಲ್ಯವನ್ನು ದಕ್ಷಿಣ ಭಾರತೀಯರ ಮೇಲೆ ಹೇರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತರ ಭಾರತದ ಹರ್ಷವರ್ಧನ ಚಕ್ರವರ್ತಿಯನ್ನು ಮಣಿಸಿದ ಇಮ್ಮಡಿ ಪುಲಿಕೇಶಿಯಂತಹ ನಾಯಕನ ಅಗತ್ಯವಿದೆ ಎಂಬುದು ಇದೀಗ ಇಮ್ಮಡಿ ಪುಲಿಕೇಶಿ ಟ್ರೆಂಡ್ ಆಗಲು ಕಾರಣ. ಕೆಲವು ಟ್ವೀಟ್‌ಗಳನ್ನು ಅವಲೋಕಿಸಿ:
ಕ್ರಿಶಕ ೬೩೭ ಹಾಗೂ ಕ್ರಿ.ಶಕ ೭೩೯ರಲ್ಲಿ ನಮ್ಮ ಅಪ್ರತಿಮ ದೊರೆಗಳಾದ ಇಮ್ಮಡಿ ಪುಲಿಕೇಶಿ ಮತ್ತು ಅವವಿಜಾಶ್ರಯ ಪುಲಿಕೇಶಿ ಅರಬ್ಬರ ದಾಳಿಯನ್ನು ಸಮರ್ಥವಾಗಿ ಎದುರಿಸಿ,ಸೋಲಿಸಿ ಹಿಮ್ಮೆಟ್ಟಿಸಿದ್ದು.
— ಪ್ರಖ್ಯಾತ್ ಪುತ್ತೂರು(ಪುತ್ತೂರು ದ ಮುತ್ತು) (@Pai1288) December 5, 2021
ಉಘೇ ಉಘೇ ನಮ್ಮ ದೊರೆಗಳಿಗೆ💪💛❤️#ಇಮ್ಮಡಿಪುಲಿಕೇಶಿ pic.twitter.com/6xJQhnAUpQ
#RashtrotthanaSahitya ದ ಜನಪ್ರಿಯ #ಭಾರತಭಾರತಿ ಪುಸ್ತಕ ಸರಣಿಯಲ್ಲಿ #ಇಮ್ಮಡಿಪುಲಿಕೇಶಿ ಪುಸ್ತಕ. ನಮ್ಮ ನಾಡು ಮತ್ತು ದೇಶಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟ ಅನೇಕ ಮಹನೀಯರನ್ನು ಈ ಪುಸ್ತಕ ಸರಣಿ ಮಕ್ಕಳಿಗೆ ಪರಿಣಾಮವಾಗಿ ಪರಿಚಯಿಸುತ್ತದೆ.#ಬಾದಾಮಿ_ಪುಲಿಕೇಶಿ#Badami_Pulikeshi pic.twitter.com/iXcythe6Jh
— Harish Kulkarni ಹರೀಶ ಕುಲಕರ್ಣಿ 🇮🇳 (@harishkrcr) November 28, 2021
ಕರ್ನಾಟಕವನ್ನು ಒಕ್ಕೂಟದ ಶೋಷಣೆಗಳಿಂದ ಕಾಪಾಡಲು ನಮಗೆ #ಇಮ್ಮಡಿಪುಲಿಕೇಶಿ #ImmadiPulakeshi ಅಂತಹ ಅರಸ ಮತ್ತೆ ಬೇಕಾಗಿದೆ
— LetUsDemandLanguageEquality 💛❤️ (@UsDemand) November 29, 2021
ಕೊಡುಗೆಗಳು
ಈ ಕನ್ನಡ ನಾಡಿಗೆ ಕರ್ನಾಟಕ ಎಂಬ ಹೆಸರು ಕೊಟ್ಟವರು-ಬಾದಾಮಿ ಚಾಲುಕ್ಯರು.ಕನ್ನಡವು ಬಾದಾಮಿ ಚಾಲುಕ್ಯರ ದೇಶ ಭಾಷೆಯಾಗಿತ್ತು.
ಬಾದಾಮಿ ಚಾಲುಕ್ಯರು ಭಾರತೀಯ ವಾಸ್ತುಶಿಲ್ಪದಲ್ಲಿ-ಚಾಳುಕ್ಯ ಶೈಲಿ ಎಂಬ ವಿಶಿಷ್ಟ ಶಿಲ್ಪಕಲಾ ಶೈಲಿಯನ್ನು ಪ್ರಾರಂಭಿಸಿದರು.
ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಮಹಾಕೂಟಗಳು ಬಾದಾಮಿ ಚಾಲುಕ್ಯರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳಾಗಿವೆ.
ಬಾದಾಮಿ ಚಾಲುಕ್ಯರು ಭಾರತೀಯ ವಾಸ್ತುಶಿಲ್ಪದಲ್ಲಿ-ಚಾಲುಕ್ಯ ಶೈಲಿ ಎಂಬ ವಿಶಿಷ್ಟ ಶಿಲ್ಪಕಲಾ ಶೈಲಿಯನ್ನು ಪ್ರಾರಂಭಿಸಿದರು.
ಅರಬ್ ಮುಸ್ಲಿಮರ ದಾಳಿ ತಡೆದು ಹಿಂದೂಸ್ಥಾನವನ್ನು ರಕ್ಷಿಸಿದ ಮೊದಲ ಹಿಂದೂ ದೊರೆ , ಹಿಂದೂ ಹೃದಯ ಸಾಮ್ರಾಟ್ ಇಮ್ಮಡಿ ಪುಲಿಕೇಶಿ ಮಹರಾಜರ ಪ್ರತಿಮೆ ಬಾದಾಮಿಯಲ್ಲಿ ಆಗಲೇ ಬೇಕು#ಬಾದಾಮಿ_ಫುಲಕೇಶಿ #Badami_pulakeshi pic.twitter.com/FIXjkmqPAA
— Gururaj Belagali (@BelagaliGururaj) November 28, 2021
ಚಾಲುಕ್ಯ ಅರಸರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರಲ್ಲಿ ಇಮ್ಮಡಿ ಪುಲಿಕೇಶಿಯದ್ದು ದೊಡ್ಡ ಹೆಸರು. ಹರ್ಷವರ್ಧನ ಚಕ್ರವರ್ತಿಗೆ ಮುಖಭಂಗ ಮಾಡಿದ ಇಮ್ಮಡಿ ಪುಲಿಕೇಶಿ ಉತ್ತರ ಪಥೇಶ್ವರ ಅಥವಾ ಉತ್ತಮ ಪರಮೇಶ್ವರ ಎಂಬ ಬಿರುದನ್ನು ತನ್ನ ಮುಕುಟ ಮಣಿಯನ್ನು ಮುಡಿಗೇರಿಸಿಕೊಂಡಾತ.
ಇಷ್ಟೆಲ್ಲ ಕೊಡುಗೆಗಳನ್ನು ನೀಡಿದ್ದರೂ, ಇಮ್ಮಡಿ ಪುಲಿಕೇಶಿಯ ಕುರಿತು ಬಹುತೇಕ ಜನರಿಗೆ ಗೊತ್ತಿಲ್ಲ. ಕರುನಾಡ ಹೆಮ್ಮೆಯ ಅರಸ, ಕರ್ನಾಟಕ ಎಂಬ ಹೆಸರು ನೀಡಿದ ವ್ಯಕ್ತಿಯ ಹೆಸರು ಕೇವಲ ಚರಿತ್ರೆಯ ಭಾಗವಾಗದೆ, ಜನರಿಗೂ ತಿಳಿಯಬೇಕು. ದಕ್ಷಿಣ ಭಾರತೀಯರ ಮೇಲೆ ಯಾವುದೇ ಹೇರಿಕೆ ಆಗುವುದು ಸಲ್ಲ. ಈಗಲೂ ಇಮ್ಮಡಿ ಪುಲಿಕೇಶಿಯಂತಹ ನಾಯಕನ ಅಗತ್ಯವಿದೆ. ಸ್ಪೂರ್ತಿ ಕಥನವಾಗಿ ಇಮ್ಮಡಿ ಪುಲಿಕೇಶಿಯ ಪ್ರತಿಮೆ ನಿರ್ಮಾಣ ಆಗಬೇಕು ಎಂದು ಜನರ ಅಭಿಪ್ರಾಯ ವ್ಯಕ್ತವಾಗಿದೆ.
ವಿಶೇಷ ವರದಿ: ತೇಜಸ್ವಿನಿ ಭಾರದ್ವಾಜ್
ಇದನ್ನೂ ಓದಿ: “ಕಾರ್ಗಿಲ್ ವಿಜಯೋತ್ಸವ 21 ವರ್ಷ” ವೀರ ಯೋಧರಿಗೆ ನಮ್ಮದೊಂದು ಸಲಾಂ
(Badami Chalukya Immadi Pulikeshi twitter trend people urges statue of Kannada king)