(Cup Cake Recipe)ಬೇಕರಿಗೆ ಹೋದಾಗ ಮೊದಲು ಎಲ್ಲರ ಗಮನ ಕೇಕಿನ ಕಡೆ ಹೋಗುತ್ತದೆ. ಬೇಕರಿಯಲ್ಲಿ ಕೋಲ್ಡ್ ಕೇಕ್ , ಕ್ರೀಮ್ ಕೇಕ್, ಬ್ರೆಡ್ ಕೆಕ್ , ಕಪ್ ಕೇಕ್ ಹಲವು ವಿಧದ ಕೇಕ್ ಸಿಗುತ್ತದೆ. ಬೇಕರಿಯಲ್ಲಿ ಖರೀದಿಸಿದ ಕಪ್ ಕೇಕ್ ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಹಾಗಾಗಿ ಈ ಕಪ್ ಕೇಕ್ ಅನ್ನು ಮನೆಯಲ್ಲಿಯೇ ಮಾಡಿಕೊಟ್ಟರೆ ಆರೋಗ್ಯವು ಉತ್ತಮವಾಗಿ ಇರುತ್ತದೆ. ಕಪ್ ಕೇಕ್ ಮಾಡುವುದು ಹೇಗೆ ಎಂಬ ಮಾಹಿತಿಯ ಕುರಿತು ತಿಳಿಯೋಣ.
(Cup Cake Recipe)ಬೇಕಾಗುವ ಸಾಮಾಗ್ರಿಗಳು:
- ಮೊಸರು
- ಸಕ್ಕರೆ
- ಅಡುಗೆ ಎಣ್ಣೆ
- ಮೈದಾಹಿಟ್ಟು
- ಬೇಕಿಂಗ್ ಸೋಡಾ
- ವೆನಿಲ್ಲಾ ಎಸೆನ್ಸ್ ಅಥವಾ ಏಲಕ್ಕಿ ಪುಡಿ
ಮಾಡುವ ವಿಧಾನ:
ಮೊದಲಿಗೆ ಸಣ್ಣ ಲೋಟದಲ್ಲಿ ಎಣ್ಣೆ ಹಚ್ಚಿಕೊಡು ಸ್ವಲ್ಪ ಮೈದಾಹಿಟ್ಟು ಹಾಕಬೇಕು (ಮೈದಾಹಿಟ್ಟು ಹಾಕಿಕೊಳ್ಳುವುದರಿಂದ ಕೆಕ್ ತಳ ಹಿಡಿಯದಂತೆ ನೋಡಿಕೊಳ್ಳುತ್ತದೆ.)ಅಥವಾ ಬೇಕಿಂಗ್ ಪೆಪರ್ ಇದ್ದರೆ ಬಳಸಿಕೊಳ್ಳಬಹುದು. ಗ್ಯಾಸ್ ಮೇಲೆ ಬಾಣಲೆ ಇಟ್ಟುಕೊಂಡು ಮಧ್ಯಭಾಗಕ್ಕೆ ಕುಕ್ಕರ್ ಪ್ಲೇಟ್ ಇಟ್ಟುಕೊಂಡು ಅದರ ಮೇಲೆ ತಟ್ಟೆ ಇಟ್ಟು ಸಣ್ಣ ಉರಿಯಲ್ಲಿ ಬಿಸಿಮಾಡಿಕೊಳ್ಳಬೇಕು. ನಂತರ ಬೌಲ್ ನಲ್ಲಿ ಅರ್ಧ ಲೋಟ ಮೊಸರು, ಒಂದು ಲೋಟ ಸಕ್ಕರೆ ಹಾಕಿ ಕರಗುವ ವರೆಗೆ ಸೌಟನ್ನು ಆಡಿಸಿ ಅರ್ಧ ಲೋಟ ಎಣ್ಣೆ, ಎರಡು ಲೋಟ ಮೈದಾಹಿಟ್ಟು, ಇಂದು ಲೋಟ ಸಕ್ಕರೆ ಹಾಕಿ ಮಿಶ್ರಣ ಮಾಡಿಕೊಂಡು ಅದಕ್ಕೆ ಅರ್ಧ ಲೋಟ ಬಿಸಿ ಆರಿದ ಹಾಲು ಹಾಲು ಹಾಕಿಕೊಂಡು ದೊಸೆ ಹಿಟ್ಟಿನ ಹದಕ್ಕೆ ಬರುವಂತೆ ಮಾಡಿಕೊಳ್ಳಬೇಕು. ಅದಕ್ಕೆ ಬೇಕಿಂಗ್ ಸೋಡಾವನ್ನು ಜರಡಿ ಮಾಡಿ ಮಿಶ್ರಣ ಮಾಡಿಕೊಳ್ಳಬೇಕು. ಬೇಕಾದಲ್ಲಿ ಮುಕ್ಕಾಲು ಚಮಚ ವೆನಿಲ್ಲಾ ಎಸೆನ್ಸ್ ಹಾಕಬಹುದು ಇಲ್ಲವಾದಲ್ಲಿ ಏಲಕ್ಕಿ ಪುಡಿ ಹಾಕಿಕೊಳ್ಳಬೇಕು.
ಮಾಡಿಕೊಂಡ ಕೇಕ್ ಮಿಶ್ರಣವನ್ನು ಲೋಟದಲ್ಲಿ ಅರ್ಧದಷ್ಟು ಹಾಕಿಕೊಂಡು ಬಾಣಲೆಯಲ್ಲಿರುವ ತಟ್ಟೆಯಲ್ಲಿ ಇಡಬೇಕು . ಇದನ್ನು 30 ರಿಂದ 35 ನಿಮಿಷ ಸಣ್ಣ ಉರಿಯಲ್ಲಿ ಬೆಯಿಸಬೇಕು. ನಂತರ ಕಪ್ ಕೇಕ್ ಬೆಂದಿರುವುದನ್ನು ನೋಡಲು ಟೂತ್ ಸ್ಟಿಕ್ ಹಾಕಿ ಚುಚ್ಚಬೇಕು ಅದಕ್ಕೆ ಕೇಕ್ ಅಂಟಿಕೊಳ್ಳದಿದ್ದರೆ ಕೇಕ್ ಸರಿಯಾಗಿ ಬೆಂದಿರುತ್ತದೆ. ಅಕಸ್ಮಾತ್ ಟೂತ್ ಸ್ಟಿಕ್ ಗೆ ಕೇಕ್ ಅಂಟಿಕೊಂಡರೆ ಇನ್ನು ಐದು ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಯಾಗಿ ಸವಿಯಲು ಕಪ್ ಕೇಕ್ ರೆಡಿ.
ಇದನ್ನೂ ಓದಿ:Millet Biscuits Recipe:ಆರೋಗ್ಯಕರ ಟೇಸ್ಟಿ ರಾಗಿ ಬಿಸ್ಕತ್ತು ಮಾಡುವ ವಿಧಾನ ತಿಳಿದುಕೊಳ್ಳಿ
ಇದನ್ನೂ ಓದಿ:Ginger Chocolate Recipe:ಕೆಮ್ಮಿನಿಂದ ನಿಮ್ಮ ಮಕ್ಕಳು ನಿದ್ದೆ ಮಾಡ್ತಿಲ್ವಾ? ಹಾಗಾದ್ರೆ ಶುಂಠಿ ಚಾಕಲೇಟ್ ಮಾಡಿ ಕೊಡಿ
Cup Cake Recipe Cup cake made without using oven, eggs