ಸೋಮವಾರ, ಏಪ್ರಿಲ್ 28, 2025
HomeSpecial Storylaughing buddha : ಸುಖ, ಸಂಪತ್ತು ಸದಾ ನೆಲೆಸಲು ಹೊಸ ವರ್ಷದಲ್ಲಿ ಮನೆಗೆ ತನ್ನಿ ಈ...

laughing buddha : ಸುಖ, ಸಂಪತ್ತು ಸದಾ ನೆಲೆಸಲು ಹೊಸ ವರ್ಷದಲ್ಲಿ ಮನೆಗೆ ತನ್ನಿ ಈ ವಿಶೇಷ ವಸ್ತು..!

- Advertisement -

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ನಾವೀಗ 2021ರ ಕೊನೆಯ ತಿಂಗಳಲ್ಲಿ ಇದ್ದೇವೆ. 2021ನೇ ವರ್ಷ ಅನೇಕರ ಪಾಲಿಗೆ ಶುಭದಾಯಕವಾಗಿದ್ದರೆ ಇನ್ನು ಕೆಲವರಿಗೆ ಈ ವರ್ಷ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಇಂತಹ ಸಮಸ್ಯೆಯು ನಿಮಗೆ ಮುಂಬರುವ ವರ್ಷಗಳಲ್ಲಿ ಕಾಡಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಇದಕ್ಕೊಂದು ಪರಿಹಾರ ವಾಸ್ತು ಶಾಸ್ತ್ರದಲ್ಲಿದೆ. (laughing buddha)

ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ಹೊಸ ವರ್ಷ ಆರಂಭಕ್ಕೂ ಮುನ್ನ ನೀವು ಮನೆಯಲ್ಲಿ ಕೆಲ ವಸ್ತುಗಳನ್ನು ತರಬೇಕು. ಆ ವಸ್ತುವು ನಿಮ್ಮ ಮನೆಗೆ ವರ್ಷವಿಡಿ.. ಸುಖ ಹಾಗೂ ಸಮೃದ್ಧಿಯನ್ನು ತರಲಿದೆ. ಹಾಗಾದರೆ ಆ ವಸ್ತುಗಳು ಯಾವುದು..? ಅನ್ನೋದನ್ನು ತಿಳಿದುಕೊಳ್ಳೋಣ. ಲಾಫಿಂಗ್​ ಬುದ್ಧ ಬಗ್ಗೆ ನೀವು ಕೇಳಿರ್ತೀರಾ. ನೋಡಿಯೂ ಇರ್ತೀರಾ. ಇದನ್ನು ಸಾಮಾನ್ಯವಾಗಿ ಮನೆ ಹಾಗೂ ಕಚೇರಿಗಳಲ್ಲಿ ಇಡಲಾಗುತ್ತದೆ. ಇದನ್ನು ಅದೃಷ್ಟದ ವಿಗ್ರಹ ಎಂದು ಕರೆಯಲಾಗುತ್ತದೆ. ಇದನ್ನು ಅನೇಕರು ಉಡುಗೊರೆ ರೂಪದಲ್ಲಿ ನೀಡುತ್ತಾರೆ.

ಈ ವಿಗ್ರಹವನ್ನು ಅದೃಷ್ಟದ ಸಂಕೇತ ಎಂದು ಹೇಳುವುದರ ಹಿಂದೆ ಕತೆಯೊಂದಿದೆ. ಮಹಾತ್ಮ ಬುದ್ಧನಿಗೆ ಅನೇಕ ಶಿಷ್ಯವೃಂದವಿತ್ತು. ಇದರಲ್ಲಿ ಓಬ್ಬ ಜಪಾನ್​ನ ಹೋಟೆ. ಹೋಟೆ ಜ್ಞಾನವನ್ನು ಪಡೆಯುತ್ತಿದ್ದಂತೆಯೇ ಜೋರಾಗಿ ನಗಲು ಪ್ರಾರಂಭಿಸಿದನು. ಅಂದಿನಿಂದ ಆತನ ಏಕೈಕ ಉದ್ದೇಶ ಜನರನ್ನು ನಗಿಸುವುದು. ಹೋಟೆಯು ದೇಹವು ಗಂಡುಗುಂಡಾಗಿತ್ತು. ಹೊಟ್ಟೆ ಹೊರಗೆ ಚಾಚಿಕೊಂಡಿತ್ತು. ಈತ ಜನರ ಮಧ್ಯೆ ಇದ್ದಾಗಲೆಲ್ಲ ತನ್ನ ಹೊಟ್ಟೆಯನ್ನು ತೋರಿಸಿ ನಗುತ್ತಿದ್ದನಂತೆ.

ಈತನ ಹರ್ಷಚಿತ್ತದ ಸ್ವಭಾವದಿಂದಾಗಿ ಆತನನ್ನು ಜನರು ಲಾಫಿಂಗ್​ ಬುದ್ಧ ಅಂತಲೇ ಕರೆಯಲು ಆರಂಭಿಸಿದರು. ಜಪಾನ್​ ಹಾಗೂ ಚೀನಾ ಕಡೆಗಳಲ್ಲಿ ಆತ ಲಾಫಿಂಗ್​ ಬುದ್ಧ ಎಂತಲೇ ಪ್ರಸಿದ್ಧಿಯನ್ನು ಪಡೆದನು. ಲಾಫಿಂಗ್​ ಬುದ್ಧನ ಅನುಯಾಯಿಗಳು ದೇಶಾದ್ಯಂತ ನಗುವನ್ನು ಹಂಚುವ ಕಾಯಕವನ್ನೇ ಮಾಡುತ್ತಾರೆ.

ಹೋತೆಇಗೆ ಚೀನಾದಲ್ಲಿ ಪುಟೈ ಎಂದು ಕರೆಯಲಾಗುತ್ತದೆ ಹಾಗೂ ಇದನ್ನು ಫೆಂಗ್​ ಶೂಯಿ ದೇವರು ಎಂದು ಪರಿಗಣಿಸಲಾಗುತ್ತದೆ, ಲಾಫಿಂಗ್​ ಬುದ್ಧ ಇರುವ ಸ್ಥಳದಲ್ಲಿ ಸಂತೋಷ, ಸಮೃದ್ಧಿ ಹಾಗೂ ನೆಮ್ಮದಿ ಇರುತ್ತದೆ, ಹಾಗೂ ಆ ವಾತಾವರಣವು ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ.

ಇದನ್ನು ಓದಿ : ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

fengshui tips bring laughing buddha before new year 2022 know about hotei it can change your luck vastu

RELATED ARTICLES

Most Popular