ಮಂಗಳವಾರ, ಏಪ್ರಿಲ್ 29, 2025
HomeNationalFour legged baby: ನಾಲ್ಕು ಕಾಲುಗಳಿರುವ ಹೆ‍ಣ್ಣು ಮಗುವಿಗೆ ಜನ್ಮ ನೀಡಿರುವ ತಾಯಿ!

Four legged baby: ನಾಲ್ಕು ಕಾಲುಗಳಿರುವ ಹೆ‍ಣ್ಣು ಮಗುವಿಗೆ ಜನ್ಮ ನೀಡಿರುವ ತಾಯಿ!

- Advertisement -

ಮಧ್ಯಪ್ರದೇಶ: (Four legged baby) ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ನಡೆದಿದೆ. ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಎಂಬ ಮಹಿಳೆ ನಾಲ್ಕು ಕಾಲುಗಳುಳ್ಳ ಮಗುವಿಗೆ ಜನ್ಮ ನೀಡಿದ್ದಾರೆ.

ಜನನದ ನಂತರ ಮಗು 2.3 ಕೆ.ಜಿ ಯಷ್ಟಿದ್ದು ನವಜಾತ ಶಿಶು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿಗೆ ನಾಲ್ಕು ಕಾಲುಗಳಿದ್ದು(Four legged baby), ಮಗುವಿಗೆ ದೈಹಿಕ ವಿಕಲತೆ ಇದೆ. ಬೆಳವಣಿಗೆ ಸಂದರ್ಭದಲ್ಲಿ ಕೆಲವು ಭ್ರೂಣಗಳು ಹೆಚ್ಚುವರಿಯಾಗುತ್ತವೆ. ಇದನ್ನು ವೈದ್ಯಕೀಯ ವಿಜ್ಞಾನದಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ, ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ಅವರು ಹೇಳಿದ್ದಾರೆ.

ಇದೀಗ ಮಗುವಿನ ದೇಹದ ಬೇರೆ ಭಾಗಗಳಲ್ಲಿ ಯಾವುದೇ ಅಂಗವಿಕಲತೆ ಇದೆಯೇ ಎಂದು ವೈದ್ಯರು ತಪಾಸಣೆ ನಡೆಸುತ್ತಿದ್ದು, ತಪಾಸಣೆಯ ಬಳಿಕ ಮಗು ಆರೋಗ್ಯವಾಗಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಹೆಚ್ಚುವರಿ ಕಾಲುಗಳನ್ನು ಬೇರ್ಪಡಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಮಗು ಸಂಪೂರ್ಣ ಆರೋಗ್ಯವಾಗಿದ್ದು, ಮಗುವಿನ ಆರೋಗ್ಯ ಸೃಇತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಈ ಘಟನೆ ವೈದ್ಯಲೋಕ್ಕೆ ಅಚ್ಚರಿ ನೀಡಿದೆ. ಮಗುವಿನ ಜನನವಾಗುತ್ತಿದ್ದಂತೆ ವೈದ್ಯರು ಅಚ್ಚರಿಗೊಳಗಾಗಿದ್ದರು. ಇದೀಗ ಶಸ್ತ್ರಚಿಕಿತ್ಸೆಯ ಮೂಲಕ ಹೆಚ್ಚುವರಿ ಕಾಲುಗಳನ್ನು ತೆಗೆಯುವ ಚಿಂತನೆಯನ್ನು ವೈಧ್ಯರು ನಡೆಸಿದ್ದಾರೆ.

ಇದನ್ನೂ ಓದಿ : Christmas Gifts For Children: ಮಕ್ಕಳಿಗೆ ಕ್ರಿಸ್‌ಮಸ್‌ ಗಿಫ್ಟ್‌ ಕೊಡಬೇಕಾ; ಇಲ್ಲಿದೆ ಬೆಸ್ಟ್‌ ಐಡಿಯಾಗಳು

ಇದನ್ನೂ ಓದಿ : The Story of the Abandoned Church:ಪ್ರವಾಸಿಗರಿಗೆ ಕುತೂಹಲ ಕೆರಳಿಸುತ್ತಿದೆ ಕರ್ನಾಟಕದ ಈ ತೇಲುವ ಚರ್ಚ್

ಇದನ್ನೂ ಓದಿ : Datta Jayanti: ದತ್ತ ಜಯಂತಿಯ ಆಚರಣೆ ಹಾಗೂ ಮಹತ್ವದ ಬಗ್ಗೆ ಒಂದಿಷ್ಟು ಮಾಹಿತಿ

ಇದನ್ನೂ ಓದಿ : Datta Jayanti 2022: ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ : ಇಂದು ಶೋಭಾಯಾತ್ರೆ

ಇದನ್ನೂ ಓದಿ : Marankatte kshethra: ಆದಿ ಮೇಳ ‘ ಎಂದೇ ಕರೆಯಲ್ಪಡುವ ‘ ಶ್ರೀ ಮಾರಣಕಟ್ಟೆ ಮೇಳದ ಬಗ್ಗೆ ನಿಮಗಿಷ್ಟು ಮಾಹಿತಿ

(Miracle) An incident where a woman gave birth to a four-legged baby girl took place in Gwalior, Madhya Pradesh. A woman named Aarti Kushwaha of Sikandar Kampu gave birth to a four-legged baby in the women and children’s department of Kamalaraja Hospital.

RELATED ARTICLES

Most Popular