Ghosts wait for Ayodhya Rama darshan : ನಮ್ಮಲ್ಲಿ ಒಂದೊಂದು ದೇವರನ್ನು ಪೂಜಿಸೋದು ಒಂದೊಂದು ರೀತಿ . ಉತ್ತರ ಭಾರತದಲ್ಲಿ ಒಂದು ರೀತಿಯಾದರೆ ದಕ್ಷಿಣ ಭಾರತದಲ್ಲಿ ಮತ್ತೊಂದು ರೀತಿಯಲ್ಲಿ ಪೂಜಿಸಲಾಗುತ್ತೆ. ಉತ್ತರ ಭಾರತದಲ್ಲಿ ದೇವರ ಗರ್ಭಗುಡಿಗೆ ಹೋಗೋಕೆ ಭಕ್ತರಿಗೆ ಅವಕಾಶವಿದೆ. ಆದರೆ ದಕ್ಷಿಣ ಭಾರತದಲ್ಲಿ ಈ ಅವಕಾಶಗಳು ಕಮ್ಮಿ ಅಂತಾನೆ ಹೇಳಬಹುದು . ಇನ್ನು ಪೂಜಾ ವಿಧಾನಗಳು ಸಹಾ ಬೇರೆ ಬೇರೆಯಾಗಿಯೇ ಇರುತ್ತೆ, ಇದು ರಾಮಾಯಣದ ಮರ್ಯಾದಾ ಪುರುಶೋತ್ತಮ ಅಯೋಧ್ಯ ಶ್ರೀರಾಮ ನಿಗೂ ಹೊರತಾಗಿಲ್ಲ. ಈ ದೇವಾಲಯದಲ್ಲಿ ಇಲ್ಲಿ ರಾಮ ಲಕ್ಷ್ಮಣರು ಬೇರೆಯಾಗಿ ಪೂಜಿಸ್ಪಡುತ್ತಾರೆ .

ಹೌದು, ಇಲ್ಲಿ ಮುಖ್ಯ ದೇವರೂ ರಾಮನೇ ಆದ್ರೂ ಅಷ್ಟೇ ಪ್ರಾಮುಖ್ಯತೆ ಇಲ್ಲಿ ಲಕ್ಷ್ಮಣನಿಗೂ ಇದೆ. ಇಲ್ಲಿ ಪಶ್ಚಿಮಾಭಿಮ ಭಾಗದಲ್ಲಿ ರಾಮ ನೆಲೆಸಿದ್ರೆ ಪೂರ್ವಾಭಿ ಮುಖವಾಗಿ ಲಕ್ಷ್ಮಣ ನೆಲೆಸಿದಾನೆ . ಇಲ್ಲಿ ರಾಮ ವಿಷ್ಣು ರೂಪದಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಇಲ್ಲಿ ಶೇಷ ನಾಗ ರಾಮನಿಗೆ ಕೊಡೆಯ ರೀತಿ ನೆರಳಾಗಿ ನಿಂತಿದ್ದಾನೆ.
ಇನ್ನು ಪೂರ್ವಾಭಿ ಮುಖದಲ್ಲಿ ನೆಲೆನಿಂತಿರುವ ಲಕ್ಷ್ಮಣ ನಿಗೂ ಇಲ್ಲಿ ಅಷ್ಟೇ ಪ್ರಾಧಾನ್ಯತೆ ಇದೆ ಎಂದು ನಂಬಲಾಗುತ್ತೆ . ಇನ್ನು ಇಲ್ಲಿ ರಾಮನ ವಿಗ್ರಹದಲ್ಲಿ ಶಿವರೂಪೀ ಶಕ್ತಿ ಅಡಗಿದೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ . ಇದೇ ಕಾರಣಕ್ಕೆ ಇಲ್ಲಿ ವಿಗ್ರಹದ ಹಿಂಬಾಗದಲ್ಲಿ ದೀಪವನ್ನು ಉರಿಸಿ ಇಡುವ ಸಂಪ್ರದಾಯ ನಡೆದು ಬಂದಿದೆ .
ಇದಕ್ಕೆ ಪೌರಾಣಿಕ ಕಾರಣ ಕೂಡಾ ಒಂದಿದೆ. ಕಶ್ಯಪ ಮುನಿಯ ಮಗನಾದ ಅಮಲಕ ಎಂಬ ಋಷಿಯು ಅದೇ ಸ್ಥಳದಲ್ಲಿ ವಿಷ್ಣುವನ್ನು ಸ್ತುತಿಸುತ್ತಾ ಘೋರ ತಪಸ್ಸು ಮಾಡಿದನು. ಇದೇ ವೇಳೆ ದೇವತೆಗಳು ಹಾಗೂ ರಾಕ್ಷಸರು ಬಂದು ಈತನ ತಪಸ್ಸು ಭಂಗ ಮಾಡಲು ಯತ್ನಿಸಿದರು. ಆದರೆ ಪರಮಾತ್ಮ ನರಹಿಂಹ ರೂಪ ತಾಳಿ ಅವರನ್ನು ನಿಗ್ರಹಿಸಿ , ಶಿವ ಶಕ್ತಿ ಯನ್ನು ಅಲ್ಲಿ ನೆಲೆನಿಲ್ಲುವಂತೆ ಮಾಡಿದ ಅಂತ ನಂಬಲಾಗುತ್ತೆ.

ಇನ್ನು ಈ ದೇವಾಲಯದ ಕೆಳಬಾಗದಲ್ಲಿ ಚಿನ್ನದ ಬಿಲ್ವ ವೃಕ್ಷ ಇದೆ ಎಂದು ನಂಬಲಾಗುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ವಿಗ್ರಹದ ಕೆಳಬಾಗದಲ್ಲಿ ಗುಹೆಯಂತ ಆಕಾರವನ್ನು ಕಾಣಬಹುದು ಅಂತಾರೆ ಇಲ್ಲಿನ ಅರ್ಚಕರರು. ಅದಕ್ಕೆ ಈ ದೇವಾಲಯವನ್ನು ತಿರುವಿಲ್ವಾಮಲ ಅಂತಾನೂ ಕರೆಯುತ್ತಾರೆ . ಇನ್ನು ಇಲ್ಲಿರುವ ರಾಮನ ವಿಗ್ರಹವನ್ನು ಯಾರು ನಿರ್ಮಿಸಿಲ್ಲ ಅನ್ನು ಮಾತಿದೆ . ಇದೊಂದು ಸ್ವಯಂಭೂ ವಿಗ್ರಹವಾಗಿದ್ದು ಪರಶುರಾಮರೇ ಇದನ್ನು ಶಿವನಿಂದ ಉಡುಗೊರೆ ಯಾಗಿ ಪಡೆದು ಸ್ಥಾಪಿದದ್ರು ಅಂತನೂ ನಂಬಲಾಗುತ್ತೆ .
ಕಥೆಗಳ ಪ್ರಕಾರ ಪರಶು ರಾಮರು 21 ಬಾರಿ ಕ್ಷತ್ರಿಯರ ವಧೆ ಮಾಡಿದ ಬಳಿಕ ಗೆದ್ದ ಭೂಮಿಯನ್ನು ದಾನ ನೀಡಿ, ಕೊಡಲಿಯಿಂದ ತೆಂಗನ ಮರಳಿರುವ ನೆಲವನ್ನು ಸಮುದ್ರದಿಂದ ನಿರ್ಮಿಸಿದನು . ಇದೇ ಮುಂದೆ ಕೇರಳವಾಯಿತು. ಕೇರ ಅಂದ್ರೆ ತೆಂಗಿನ ಮರ ಎಂದರ್ಥ. ಇದಾದ ಬಳಿಕ ತಪಸ್ಸಿಗಾಗಿ ಇಲ್ಲಿಯ ಗುಹೆ ಯೊಂದಕ್ಕೆ ಬಂದ ಪರಶುರಾಮರಿಗೆ ನೆಮ್ಮದಿ ಇರಲಿಲ್ಲ . ಏಕೆಂದರೆ ತಾವು ಸಂಹರಿದ ಕ್ಷತ್ರಿಯರ ಆತ್ಮಗಳು ಮುಕ್ತಿಗಾಗಿ ಅವರನ್ನು ಕಾಡ ತೊಡಗಿವು . ಇಲ್ಲವಾದರೆ ಅಲ್ಲಿನ ಜನರಿಗೆ ಹಾನಿ ಯುಂಟು ಮಾಡುದಾಗಿ ಹೇಳಿದವು. ಆಗ ಶಿವನ್ನು ಸ್ಥುತಿಸಿ ದಾಗ ಶಿವನು ಈ ವಿಗ್ರಹವನ್ನು ದಯಪಾಲಿಸಿದನು. ನಂತರ ಪರಶುರಾಮರು ಅವುಗಳಿರುವ ಗುಹೆ ಕಾಣುವಂತೆ ಪ್ರತಿಷ್ಟಾಪಿಸಿ ಹಿಮಾಲಯದತ್ತ ತೆರಳಿದರು ಎಂಬ ನಂಬಿಕೆ ಇದೆ.
ಇಲ್ಲಿದೆ ಭೂತಪ್ರೇತಗಳ ಗುಹೆ :
ಕಥೆಯಲ್ಲಿ ಹೇಳಿದಂತೆ ಈ ಗುಹೆ ಯಲ್ಲಿ ಇಂದಿಗೂ ಈ ಪ್ರೇತಾತ್ಮಗಳು ಇದೆ ಎನ್ನುವ ನಂಬಿಕೆ ಇದ್ದು, ಮಾನವರು ವರ್ಷದಲ್ಲಿ ಒಂದು ಬಾರಿ ಅಂದ್ರೆ ಗುರುವಾಯೂರು ಏಕಾದಶಿ ಮಾತ್ರ ಇಲ್ಲಿ ತೆರಳಬಹುದಾಗಿದೆ . ಇನ್ನು ಉಳಿದ ದಿನ ಇಲ್ಲಿ ಭೂತಾತ್ಮಗಳು ಇರುತ್ತವೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಇದನ್ನು ಭೂತನ್ಮಾಲ ಎಂದು ಕರೆಯುತ್ತಾರೆ.

ಇನ್ನು ಗುಹೆಯನ್ನು ಬೃಹಸ್ಪತಿಯ ಸಲಹೆಯ ಮೇರೆಗೆ ದೇವ ಶಿಲ್ಪಿ ವಿಶ್ವಕರ್ಮನೇ ನಿರ್ಮಿಸಿದ ಅನ್ನಲಾಗುತ್ತೆ . ಇಲ್ಲಿನ ಮತ್ತೊಂದು ವಿಶೇಷ ವೆಂದರೆ ಇದೇ ಗುಹೆಯ ಪಕ್ಕದಲ್ಲಿ ಬೃಹದಾಕಾರದ ಅರಳಿ ಮರವಿದ್ದು ಮಣ್ಣಿನ ಸಹಾವಿಲ್ಲದೆ ಬರೀ ಬಂಡೆಯಲ್ಲಿ ಬೆಳೆದು ನಿಂತಿದೆ .ಇಷ್ಟೇ ಅಲ್ಲದೆ ಇಲ್ಲಿ ನಾಗನ ಆರಾಧನೆ ಯನ್ನು ನಾವು ಕಾಣಬಹುದು.
ಅಂದ ಹಾಗೆ ಇಂತಹ ವಿಚಿತ್ರ ವಿಸ್ಮಯಕಾರಿಯಾದ ದೇವಾಲಯ ವಿರೋದು ನಮ್ಮ ಪಕ್ಕದ ಜಿಲ್ಲೆ ಅನ್ನಿಸಿಕೊಂಡಿರುವ ದೇವರ ನಾಡು ಕೇರಳದ ತಿಶೂರ್ ಜಿಲ್ಲೆಯಲ್ಲಿ. ದೇವಾಲಯದ ಬೀಡು ಅನ್ನಿಸಿಕೊಂಡಿರುವ ತಿಶೂರ್ ಜಿಲ್ಲೆಯಲ್ಲಿ ಇನ್ನು ಒಂದು ರಾಮನ ದೇವಾಲಯವಿದೆ . ಈ ದೇವಾಲಯವು ಬೆಳಗ್ಗೆ 4 ರಿಂದ ಮಧ್ಯಾಹ್ನದ ವರೆಗೆ ಹಾಗೂ ಸಂಜೆ 6 ರಿಂದ 9 ಗಂಟೆಯ ವರೆಗೆ ತೆರೆದಿರುತ್ತೆ.
ಇನ್ನು ಇಲ್ಲಿ ದೇವಾಲಯಕ್ಕೆ ಭೇಟಿ ನೀಡುವಾಗ ತಮಗನ್ನಿಸುವಂತೆ ದರ್ಶನ ಪಡೆಯುವಂತಿಲ್ಲ. ಯಾವ ದೇವರ ದರ್ಶನವನ್ನು ಮೊದಲು ಪಡೆಯಬೇಕು, ನಂತರ ಯಾವ ದೇವರ ದರ್ಶನವಾಗ ಬೇಕು ಎನ್ನುದರ ಬಗ್ಗೆ ದೇವಾಲಯದಲ್ಲಿ ತಿಳಿಸಿಕೊಡಲಾಗುತ್ತೆ ಅಂತೆಯೇ ದರ್ಶನ ಪಡೆಯಬೇಕಾಗುತ್ತೆ.

ಇನ್ನು ಇಲ್ಲಿ ಹೋಗೋಕೆ ಬಯಸೋರು ಬಸ್ , ರೈಲು ಹಾಗೂ ವಿಮಾನದ ಮೂಲಕ ಪ್ರಯಾಣಿಸಬಹುದು . ಕೋಸಿಕೋಡ್ ಗೆ ಬೆಂಗಳೂರಿನಿಂದ ವಿಮಾನ ಸೌಲಭ್ಯವಿದ್ದು ಅಲ್ಲಿಂದ ಸಾರಿಗೆ ವ್ಯವಸ್ಥೆಯ ಮೂಲಕ ಅಲ್ಲಿಗೆ ತಲುಪಬಹುದು. ಇದಕ್ಕೂ ಈ ಗುಹೆಯು ಮುಖ್ಯ ದೇವಾಲಯದಿಂದ ಆಗ್ನೇಯಕ್ಕೆ 2 ಕಿ.ಮೀ ದೂರದಲ್ಲಿದೆ. ಇದನ್ನು ಬೃಹಸ್ಪತಿಯ ಕೋರಿಕೆಯ ಮೇರೆಗೆ ದೈವಿಕ ವಾಸ್ತುಶಿಲ್ಪಿ ವಿಶ್ವಕರ್ಮ ನಿರ್ಮಿಸಿದನೆಂದು ನಂಬಲಾಗಿದೆ.
ಮಾನವರು ವರ್ಷದಲ್ಲಿ ಒಂದು ದಿನ ಮಾತ್ರ ಈ ಗುಹೆಯನ್ನು ಪ್ರವೇಶಿಸಬಹುದು – ವೃಶ್ಚಿಕಂ ತಿಂಗಳ (ನವೆಂಬರ್-ಡಿಸೆಂಬರ್) ಪ್ರಕಾಶಮಾನವಾದ ಹದಿನೈದು ದಿನಗಳ 11 ನೇ ದಿನ (ಏಕಾದಶಿ), ಅಂದರೆ ಗುರುವಾಯೂರ್ ಏಕಾದಶಿ. ಉಳಿದ ಎಲ್ಲಾ ದಿನಗಳು ದೆವ್ವಗಳಿಗೆ ಮೀಸಲಾಗಿದೆ.
Ghosts wait for Ayodhya Rama darshan: Rama and Lakshmana are worshiped differently here