ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿರುವುದು ತಮಿಳುನಾಡಿನ ಕೊಡೈಕಿನಾಲ್. ಇಲ್ಲಿನ ಕಾಡುಗಳಲ್ಲಿನ ನಿಗೂಢತೆ ಇಂದಿಗೂ ರೋಚಕ. ಇಲ್ಲಿನ ಕಾಡಿನೊಳಗೆ ಪ್ರವೇಶಿಸಿದವರಿಗೆ ಮತಿ ಭ್ರಮಣೆಯಾಗುತ್ತಂತೆ. ಈ ಕಾಡಿನ ನಿಗೂಢತೆ ಬಯಲು ಮಾಡುತ್ತವೆ ಎಂದು ಹೋದವರು ಇಲ್ಲಿವರೆಗೂ ಯಾರು ಹಿಂತಿರುಗಿ ಬಂದಿಲ್ಲ. ಕಾಡಿನ ರಹಸ್ಯದ ಬಗ್ಗೆಒಂದಷ್ಟು ಕಾರಣಗಳನ್ನು ಅಲ್ಲಿನ ಜನ ಹೇಳುತ್ತಾರೆ. ಆ ಕಾಡಿಗೆ ಹೊದವರಿಗೆ ಏನೇನೋ ಕಾಣುತ್ತೆ, ಮತಿಭ್ರಮಣೆ ಯಾಗುತ್ತೆ ಅಂತೆಲ್ಲಾ ಆದರೆ ಅವರ ಮಾತಿಗೆ ಯಾವುದಕ್ಕೂ ನಿಖರವಾದ ಸಾಕ್ಷಿಗಳು ಇಲ್ಲಾ. ಆದರೆ ಅಲ್ಲಿ ವಿಸ್ಮಯಗಳು ನಡೆಯುತ್ತವೆ ಅನ್ನೋದಂತು ಸುಳ್ಳಲ್ಲಾ.

ಭಾರತದ ಸಾಕಷ್ಟು ವಿಸ್ಮಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದು ಬ್ರಿಟಿಷರು. ಹಾಗೇ ಈ ಕಾಡಿನ ಬಗ್ಗೆ ಜಗತ್ತಿಗೆ ಮೊದಲು ತಿಳಿಸಿದ್ದು ಬ್ರಿಟಿಷ್ ಅಧಿಕಾರಿಗಳೆ. ಅವತ್ತಿನ ಕಾಲದಲ್ಲಿ ಕೊಡೆಕೆನಾಲ್ ಎಂಬ ಅಬ್ಧುತ ಗಿರಿದಾಮವನ್ನು ಪತ್ತೆ ಹಚ್ಚಿದ ಬ್ರಿಟಿಷರು ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಗಮನ ಹರಿಸುತ್ತಾರೆ. ಈ ವೇಳೆ ಕೊಡೆಕೆನಾಲ್ 20 ಕಿ,ಮೀ ದೂರದಲ್ಲಿರುವ ಬೆರೀಜ್ಸಾಂ ಎಂಬ ನೀರಿನ ಮೂಲವನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: volcano Ganesh : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

ಅಲ್ಲಿನ ತನಕ ಅಲ್ಲಿನ ಕೊಡೈಕಿನಾಲ್ ಅರಣ್ಯ ಪ್ರದೇಶದ ಜನರಿಗೆ ಹಾಗೂ ಗಿರಿ ಜನರಿಗೆ ಮಾತ್ರ ತಿಳಿದಿದ್ದ ಈ ಕಾಡು ಹಾಗೂ ಇಲ್ಲಿನ ಜಲ ಮೂಲಗಳು ಬ್ರಿಟಿಷರ ಕಣ್ಣಿಗೂ ಬಿತ್ತು. 1864 ರಲ್ಲಿ ಕರ್ನಲ್ ಹೇಮೆಲ್ ಟನ್ ಅನ್ನೋ ಬ್ರಿಟಿಷ್ ಅಧಿಕಾರಿ ಈ ಸ್ಥಳವನ್ನು ಗುರುತಿಸಿ ಇಲ್ಲೋಂದು ಬ್ರಿಟಿಷ್ ಕಂಟಲ್ ಮೆಂಟ್ ಒಂದನ್ನು ಸ್ಥಾಪನೇ ಮಾಡೋದಕ್ಕೆ ಪಳನಿ ಅಪ್ಪರ್ ಹಿಲ್ಸ್ ಉತ್ತಮವಾದ ಜಾಗ ಇದು ಎಂಬ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ಕೋಡುತ್ತಾನೆ . ಈ ಮಾಹಿತಿ ದೊರಕಿದ ತಕ್ಷಣ ಬ್ರಟಿಷರು ಆ ಕಾಡಿನಲ್ಲಿ ಸಿಗುವ ಮರಗಳಿಂದ ಅಲ್ಲೋಂದು ಮರದ ಕೋಟೆಯನ್ನು ನಿರ್ಮಾಣ ಮಾಡುತ್ತಾರೆ.

ನಂತರ ಆ ಕೋಟೆಯ ಒಳ ಭಾಗದಲ್ಲಿ ಒಂದಷ್ಟು ಗುಡಿಸಲುಗಳನ್ನು ನಿರ್ಮಿಸಿ ಬ್ರಿಟಿಷ್ ಸೈನಿಕರು ಅಲ್ಲಿ ವಾಸಿಸುತ್ತಿದ್ದರು. ಇವತ್ತಿನ ಬೆರಿಜ್ಸಾಂ ಲೇಕ್ ಅವತ್ತನ ಕಾಲದಲ್ಲಿ ಚಿಕ್ಕ ನೀರಿನ ಮೂಲವಾಗಿತ್ತು. 1867ರಲ್ಲಿ ಮದ್ರಾಸ್ ಪ್ರಾಂತ್ಯದ ಮದುರೈ ಕಲ್ಟೆರ್ ಆಗಿದ್ದ ಸರ್ ವೆರಿಲ್ ಲೆವಿಗ್ನೇ ಎಂಬಾತ ತನ್ನ ನಿವೃತ್ತಿಯ ಹಣದಿಂದ ಈ ಬೆರಿಜ್ಸಾಂ ಕೆರೆಯನ್ನು ಇನ್ನಷ್ಟು ದೊಡ್ಡದಾಗಿ ಕಟ್ಟಿಸುತ್ತಾನೆ. ನಂತರ ಇದು ಬ್ರಟಿಷ್ ಸೈನಿಕರ ನೆಲೆಯಾಗಿ ಗುರುತಿಸಿಕೊಳ್ಳುತ್ತದೆ. ಈ ಸ್ಥಳ ಕೊಡೆಕೆನಾಲ್ ನಿಂದ ಮುನಾರ್ ಗೆ ಹೋಗುವ ಹಾದಿಯಲ್ಲಿ ಇದ್ದಿದ್ದರಿಂದ ಇದಕ್ಕೆ ಸಾಕಷ್ಟು ಮಹತ್ವ ಕೂಡ ಸಿಕ್ಕಿತ್ತು. ಇಲ್ಲಿಗೆ ಬಂದ ಬ್ರಿಟಿಷರು ಇಲ್ಲಿನ ಬುಡಕಟ್ಟು ಜನರ ಸ್ನೇಹವನ್ನು ಸಂಪಾದಿಸಿಕೊಂಡ ನಂತರವೇ ಅವರಿಗೆ ಈ ಕಾಡಿನ ಬಗ್ಗೆ ಗೊತ್ತಾಗಿದ್ದು.

ನಂತರ ಬ್ರಿಟಿಷರು ಈ ಕಾಡಿನ ವಿಷಯವನ್ನು ಸರ್ಕಾರದ ಗಮನಕ್ಕೆ ತಂದ್ರು. ರಹಸ್ಯವಾಗಿ ಉಳಿದಿದ್ದ ಕಾಡಿನ ಪ್ರದೇಶ ಒಂದು ಆಧುನಿಕ ಪ್ರಪಂಚಕ್ಕೆ ಗೊತ್ತಾಯಿತು. ಇಷ್ಟೇಲ್ಲಾ ಆದರೂ ಆ ಕಾಡಿನೋಳಗೆ ಹೋಗುವ ದೈರ್ಯವನ್ನು ಯಾರೂ ಮಾಡಲಿಲ್ಲಾ. ಅಲ್ಲಿನ ಜನ ಈ ಕಾಡಿನ ಪ್ರದೇಶವನ್ನು ಮತಿಕೆಟ್ಟನ್ ಶೊಲಾ ಎಂದು ಕರೆಯುತ್ತಿದ್ದರು. ಅಂದರೆ ತಮಿಳಿನಲ್ಲಿ ಅದರ ಅರ್ಥ ಬುದ್ಧಿಕೇಡೋದು ಎಂದು. ಈ ಕಾಡಿನೊಳಗೆ ಪ್ರವೇಶಿಸಿದವರ ಬುದ್ದಿ ಕೆಟ್ಟುಹೋಗುತ್ತೆ ಅನ್ನೋ ನಂಬಿಕೆ ಅಲ್ಲಿನ ಜನರಲ್ಲಿ ಇರೋದ್ರಿಂದ ಈ ಸ್ಥಳವನ್ನು ಅದೇ ಹೆಸರಿನಿಂದ ಕರೆಯಲಾಯಿತು. ಹೀಗಾಗಿ ಇವತ್ತಿಗೂ ಈ ಕಾಡಿನ ಹೆಸರು ಮತಿಕೆಟ್ಟನ್ ಶೊಲಾ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಇನ್ನು ಇಲ್ಲಿನ ಜನರು ಹೇಳೂವುದೇನೆಂದರೆ ಈ ಕಾಡಿನಲ್ಲಿ ತಮಿಳುನಾಡಿನ ಸಾಧು ಪರಂಪರೆಗೆ ಸೇರಿದ ಸಿದ್ಧರು ತಪಸ್ಸು ಮಾಡುತ್ತಿದ್ದಾರಂತೆ.

ಇದನ್ನೂ ಓದಿ: ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ
ಜನರು ಆ ಕಾಡನ್ನು ಪ್ರವೇಶ ಮಾಡಿದರೆ ಆ ಸಿದ್ಧ ಪುರುಷರ ತಪಸ್ಸಿಗೆ ತೊಂದರೆ ಉಂಟಾಗುತ್ತೆ ಅನ್ನೋ ಉದ್ದೇಶದಿಂದ ಆ ತಪಸ್ವಿಗಳು ಆ ಕಾಡಿಗೆ ಬರುವ ಜನರನ್ನು ತಡೆಯೋದಕ್ಕೆ ಇಂತದೊಂದು ಮಾಯೇಯನ್ನು ಸೃಷ್ಟಿ ಮಾಡಿದ್ದಾರೆ ಎನ್ನುವುದು ಇಲ್ಲಿನ ಜನರ ನಂಬಿಕೆಗಳ ಪೈಕಿ ಒಂದು. ಸಿದ್ಧರು ಎಂದರೆ ಆರ್ಯುವೇಧ ವಿಜ್ಞಾನದ ಪಂಡಿತರು ಹಾಗೂ ರಸ ಮತ್ತು ಸಸ್ಯಶಾಸ್ತ್ರದ ಬಗ್ಗೆ ಅಪಾರವಾದ ಜ್ಞಾನವನ್ನ ಹೊಂದಿದವರು. ನಾಗಪ್ಯೂಪವನ್ನು ಹೋಲುವ ಕೆಲವು ಹೋಗಳು ಹೇಗಿರುತ್ತವೆ ಎಂದರೆ ಅವುಗಳ ವಾಸನೇ ಎಷ್ಟು ಗಾಡವಾಗಿರುತ್ತೆ ಎಂದರೇ ಅವು ಮನುಷ್ಯರನ್ನು ಮೂರ್ಚೇ ಹೋಗುವಂತೆ ಮಾಡುತ್ತದೆ. ಅಲ್ಲದೇ ನಮ್ಮ ಮೆದುಳು ಸ್ವಪ ಕಾಲ ಏನು ಯೋಚನೆ ಇಲ್ಲದೇ ಬ್ಲಾಂಕ್ ಆಗುವಂತೆ ಮಾಡುವ ಶಕ್ತಿ ಆ ಹೂವುಗಳ ವಾಸನೆಗಿರುತ್ತೆ.

ಸಿದ್ಧರು ಜನರನ್ನು ನಿಯಂತ್ರಿಸಲು ಇಂತ ಹೂವಿನ ಗಿಡಗಳನ್ನು ಕಾಡಿನ ಹಾದಿಯಲ್ಲಿ ಬೇಳೆಸಿದ್ದರೂ ಬೆಳಸಿರಬಹುದು ಎಂಬ ವಾಧ ಕೂಡ ಇಲ್ಲಿದೆ. ಅಲ್ಲದೇ ಇತ್ತೀನಿನ ಸಂಶೋದಕರ ಪ್ರಕಾರ ಈ ಕಾಡಿನಲ್ಲಿ ಅಪಾರ ಪ್ರಮಾಣದ ಔಷದೀಯ ಸಸ್ಯಗಳು ಹಾಗೂ ಗಿಡಮೂಲಿಕೆಗಳು ಇದೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಈ ಕಾಡಿನಲ್ಲಿ ಕಾಡು ಪ್ರಾಣಿಗಳು ಇವೆ. ಸೂರ್ಯನ ಬೆಳಕು ನೆಲ ಮುಟ್ಟದಷ್ಟು ದಟ್ಟವಾಗಿ ಈ ಕಾಡು ಬೆಳೆದು ಕೋಡಿದೆ. ಆದರೂ ಇವತ್ತಿನ ವರೆಗು ಈ ಕಾಡಿನ ನಿಗೂಢತೆಯ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ದೊರೆತಿಲ್ಲ.
(Those who enter this forest will be disillusioned!)