ಸೋಮವಾರ, ಏಪ್ರಿಲ್ 28, 2025
HomekarnatakaInternational Women's Day 2022: ದುಡಿಮೆಗೆ ಸಂಬಳ ಕೇಳದ ಅಮ್ಮನೇ ನಿಜವಾದ ನಾಯಕಿ; ಅಂತರಾಷ್ಟ್ರೀಯ ಮಹಿಳಾ...

International Women’s Day 2022: ದುಡಿಮೆಗೆ ಸಂಬಳ ಕೇಳದ ಅಮ್ಮನೇ ನಿಜವಾದ ನಾಯಕಿ; ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ

- Advertisement -

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ” ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೋ, ಅಲ್ಲಿ ದೇವತೆಗಳು ಸಂತೋಷವಾಗಿ ಇರುತ್ತಾರೆ. ಮನು ಸ್ಮೃತಿಯಲ್ಲಿ ಬರುವ ಈ ಶ್ಲೋಕ ಭಾಗವು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಇರುವ ಸ್ಥಾನ ಮತ್ತು ಗೌರವವನ್ನು ತಿಳಿಸುತ್ತದೆ. ಪ್ರಾಚೀನಕಾಲದಿಂದಲೂ ನಮ್ಮ ಭಾರತದಲ್ಲಿ ಮಹಿಳೆಯರನ್ನು ಪೂಜ್ಯಭಾವದಿಂದ ಕಾಣಲಾಗುತ್ತಿತ್ತು. ಮನೆಯ ಹಬ್ಬ-ಹರಿದಿನಗಳಲ್ಲಿ, ದೇಗುಲಖಳ ಉತ್ಸವಗಳಲ್ಲಿ, ಪೂಜೆ-ಪುನಸ್ಕಾರಗಳು ಸಂದರ್ಭದಲ್ಲಿ ಮಹಿಳೆಯರ ಪಾತ್ರ( International women’s day 2022) ಅನನ್ಯವಾದುದು. ಹಿಂದೆ ಪುರುಷರಷ್ಟೇ ಮಹಿಳೆಯರಿಗೂ ಗೌರವ ಸಿಗುತ್ತಿತ್ತು.

ಒಂದು ಕುಟುಂಬದಲ್ಲಿ ಸುಖ- ಸಂತೋಷಗಳನ್ನು ಉಳಿಸುವುದರಲ್ಲಿ ಮಹಿಳೆಯ ಪಾತ್ರ ಅನನ್ಯವಾದುದು. ಮನೆಯ ಮಗಳು, ಅಕ್ಕ-ತಂಗಿ, ಸೊಸೆ ‌ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಕಾಣಿಸುಕ್ಕೊಳ್ಳುವ ಹೆಣ್ಣು ಮಾತೃತ್ವದ ಹಂತದಲ್ಲಿ ಮಾಡುವ ಹೋರಾಟ ಪದಗಳಲ್ಲಿ ವಿವರಿಸುವುದು ಕಷ್ಟದ ಕೆಲಸ. ಋತುಚಕ್ರದ ಏರುಪೇರುಗಳ ನಡುವೆಯೂ, ತನ್ನ ಕುಟುಂಬದ ನೆಮ್ಮದಿಗಾಗಿ ಮುಖದಲ್ಲಿ ನೋವಿನ ಗೆರೆಗಳನ್ನು ತೋರ್ಪಡಿಸದೆ, ಮನೆ ಮಂದಿಗಾಗಿ ದುಡಿಯುವ ತಾಯಿಯನ್ನು ದೇವರು ಎಂದರೆ ಅತಿಶಯೋಕ್ತಿಯಲ್ಲ. ನವಮಾಸಗಳು ತನ್ನ ಕಂದನನ್ನು ತನ್ನಲ್ಲೇ ಬಚ್ಚಿಟ್ಟು , ಸುಂದರ ನಾಳೆಗಳನ್ನು ನಿರೀಕ್ಷೆಯಲ್ಲಿ ಮಗು ಹೊರಲೋಕಕ್ಕೆ ಬರುವುದನ್ನೇ ಕಾಯುವ ಅಮ್ಮನ ತಾಳ್ಮೆ ಅಮ್ಮನಿಗಲ್ಲದೆ ಇನ್ಯಾರಿಗೆ ಇರಲು ಸಾಧ್ಯ? ತನ್ನ ಪುಟ್ಟ ಕಂದಮ್ಮನ ಮೊದಲ ಬಾರಿಗೆ ಅತ್ತಾಗ , ಆನಂದ ಬಾಷ್ಪದೊಂದಿಗೆ ತನ್ನ ಎದೆಗೊತ್ತಿ ನವಮಾಸದ ಈ ಸೆಣಸಾಟದಲ್ಲಿ ಸಾರ್ಥಕತೆಯನ್ನು ಕಾಣುವ ಅಮ್ಮನಿಗಿಂತ ದೊಡ್ಡ ಯೋಧ ಈ ಪ್ರಪಂಚದಲ್ಲಿ ಯಾರೂ ಇಲ್ಲ.

ಪುಟ್ಟ ಕಂದಮ್ಮ ತೊದಲುತ್ತಾ ಮಾತನಾಡುವಾಗ ಮೊದಲು ಉಸುರುವ ಶಬ್ದ- “ಅಮ್ಮ”!
ಒಂದು ಕ್ಷಣ ಅಮ್ಮ ತನ್ನ ದೃಷ್ಟಿಯಿಂದ ದೂರವಾದರೆ, ಕಾಣಿಸದೆ ಹೋದರೆ ಪುಟ್ಟ ಕಂದ ತನ್ನ ಕಣ್ಣಾಲಿಗಳನ್ನು ತುಂಬಿ, ರಚ್ಚೆ ಹಿಡಿದು ಅಮ್ಮನನ್ನು ಪುನಃ ಕರೆಸಿಕೊಳ್ಳುತ್ತದೆ.
ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಮನೆಕೆಲಸ ಮಾಡುವ ಅಮ್ಮ ಅಪ್ಪನಲ್ಲಿ ‘ತಾನು ಇಷ್ಟು ದುಡಿದೆ’ ಎಂದು ಅಪ್ಪನ ಬಳಿ ದುಡಿದಕ್ಕಾಗಿ ಸಂಬಳ ಕೇಳಿದ್ದೇ ಇಲ್ಲ. ಕಚೇರಿಯಲ್ಲಿ ದುಡಿಯುವುದಕ್ಕೆ ಸಿಗುವ ಪ್ರತಿಫಲವನ್ನು ತನಗಾಗಿ ಎಂದು ವ್ಯಯಿಸುವ ಕೆಲಸವನ್ನು ಮಾಡಲಿಲ್ಲ. ಬದಲಾಗಿ ಮನೆಮಂದಿಯ ಸಂತೋಷಕ್ಕಾಗಿ ತನ್ನ ಬೆವರಿನ ಹನಿಗಳನ್ನೊರಸಿ, ನಗುಮೊಗದಿಂದ ದುಡಿಯುವ ಅಮ್ಮನ ಸಹನೆಗೆ ಹೋಲಿಕೆಯಿಲ್ಲ. ಅಡುಗೆಯಲ್ಲಿ ಮತ್ತು ಜೀವನದಲ್ಲಿ ಉಪ್ಪು-ಖಾರಗಳನ್ನು ಸಮತೋಲನಗೊಳಿಸುವ ಅಮ್ಮನನ್ನು ವರ್ಣಿಸಲು ವರ್ಣಮಾಲೆಯೇ ಸಾಲದು.
ಬದುಕಿನ ಏರಿಳಿತಗಳನ್ನು ಸರಿದೂಗಿಸುತ್ತಾ, ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಾ , ಕುಟುಂಬದ ನೆಮ್ಮದಿಗಾಗಿ ದುಡಿಯುವ ಅಮ್ಮನೇ ನಿಜವಾದ ನಾಯಕಿ.

(ಸುಲಕ್ಷಣಾ ಕೆ, ದ್ವಿತೀಯ ಬಿಎ ವಿಭಾಗ,ವಿವೇಕಾನಂದ ಪದವಿ ಕಾಲೇಜು,ಪುತ್ತೂರು.)

ಇದನ್ನೂ ಓದಿ: Health Apps For Women: ಮಹಿಳೆಯರೇ ನಿಮ್ಮ ಆರೋಗ್ಯದ ಸುರಕ್ಷತೆಗೆ ಈ ಆ್ಯಪ್‌ಗಳನ್ನು ಬಳಸಿ

(International women’s day 2022)

RELATED ARTICLES

Most Popular