Nagaraja temple : ಹಾವುಗಳನ್ನು ಕಂಡ್ರೆ ಒಂದು ವಿಚಿತ್ರ ಭಯವಂತು ಎಲ್ಲರಿಗೆ ಇರುತ್ತೆ. ನಾಗಗಳನ್ನು ಕಂಡ್ರೆ ಅಂತೂ ಹೇಳೋದೇ ಬೇಡ. ಅದರಲ್ಲೂ ಭಾರತೀಯ ಪರಂಪರೆಯಲ್ಲಿ ಇದಕ್ಕೆ ಒಂದು ಪೂಜನೀಯ ಸ್ಥಾನವಿದೆ. ಅದರಲ್ಲೂ ಈ ನಾಗಗಳಿಗೆ ಹಿಂಸೆ ನೀಡಿದ್ರೆ ಜನ್ಮಾಂತರಗಳ ದೋಷ ಕಾಣುತ್ತೆ ಅನ್ನೋ ನಂಬಿಕೆ ಇನ್ನೂ ಜನರಲ್ಲಿದೆ.

ಕಾಳಸರ್ಪದೋಷ, ನಾಗದೋಷಗನ್ನು ಪರಿಹರಿಸೋಕೆ, ಸಂತಾನ ಪಡೆಯೋಕೆ ಈ ನಾಗಗಳನ್ನು ಪೂಜಿಸುವ ಪರಿಪಾಠ ನಮ್ಮಲ್ಲಿದೆ. ಭಾರತೀಯರ ಪ್ರಕಾರ ಇಂದಿಗೂ ನಾಗಲೋಕ ಹಾಗೂ ಅಲ್ಲಿ ಶಕ್ತಿಶಾಲಿ ನಾಗಗಳಿವೆ . ಜನರ ಕಷ್ಟ ಪರಿಹರಿಸೋಕೆ ಅಲ್ಲಿಂದ ಅವು ಬರುತ್ತವೆ ಅನ್ನೋ ನಂಬಿಕೆ ಹಲವು ಜನರಲ್ಲಿದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ದೇವಾಲಯ (Nagaraja temple).

ಹೌದು, ಈ ದೇವಾಲಯ ಎಲ್ಲಾ ದೇವಾಲಯಗಳಂತಲ್ಲ. ಯಾಕಂದ್ರೆ ಇಲ್ಲಿ ಪೂಜಿಸ್ಪಡೋದು ಬರಿ ನಾಗ ಜಾತಿಯ ಹಾವುಗಳೇ. ನಾಗರಾಜ ನೇ ಇಲ್ಲಿ ಕಾಯುವ ದೇವರಾಗಿ ನಿಂತಿದ್ದಾನೆ. ಅವನ ಜೊತೆಯಲ್ಲೇ ನಾಗಲೋಕದ ನಾಗಗಳು ಇಲ್ಲಿ ಬಂದು ಭಕ್ತರ ಆಶಯಗಳನ್ನು ಈಡೇರಿಸುತ್ತವೆ ಅನ್ನೋ ನಂಬಿಕೆ ಇಲ್ಲಿಯ ಭಕ್ತರಲ್ಲಿದೆ.

ಇದಕ್ಕೆ ಸಾಕ್ಷಿಯಂತೆ ಇವೆ ಇಲ್ಲಿನ 30 ಸಾವಿರ ನಾಗ ಶಿಲೆಗಳು. ಇಲ್ಲಿ ಸುಮಾರು 30 ಸಾವಿರ ನಾಗನ ಪ್ರತಿಮೆಗಳಿವೆ. 13 ಎಕರೆ ವಿಸ್ತೀರ್ಣವಿರುವ ಈ ಕಾಡಿನ ಭಾಗದಲ್ಲಿದೆ ಈ ದೇವಾಲಯ. ಈ ದೇವಾಲಯದ ಮೂಲೆ ಮೂಲೆಯಲ್ಲೂ ನಾಗನ ಪ್ರತಿಮೆಗಳನ್ನು ನಾವು ಕಾಣಬಹುದು. ಇದನ್ನು ನಾಗಲೋಕದ ಶಕ್ತಿಯು ನಾಗಗಳ ಪ್ರತಿಮೆ ಅಂತಲೂ ನಂಬಲಾಗುತ್ತೆ. ಕಾಡಿನ ನಡುವಿನಲ್ಲಿರೋ ಈ ದೇವಾಲಯವು ನಾಗಗಳು ನೆಲೆಸಿದ ಸ್ಥಳ. ಹೀಗಾಗಿ ಈ ಹಾವುಗಳೇ ಇಲ್ಲಿ ಶಿಲೆಗಳಾಗಿವೆ ಅಂತಲೂ ಭಕ್ತರು ಹೇಳುತ್ತಾರೆ.ಇಲ್ಲಿ ಪೂಜೆ ಮಾಡಿದ್ರೆ ಸಂತಾನ ಭಾಗ್ಯ ಸಿಗುತ್ತೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ.

ಇನ್ನು ದೇವಾಲಯದಲ್ಲಿ ನಾಗಗಳ ಶಿಲೆಗಳು ಮಾತ್ರವಲ್ಲ, ನಿಜವಾದ ನಾಗಲೋಕದ 30 ಸಾವಿರಕ್ಕೂ ಹೆಚ್ಚಿನ ಸರ್ಪಗಳು ಬರುತ್ತವಂತೆ. ದೇವಾಲಯದ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಅದು ಮಾಮೂಲಿ ಸರ್ಪಗಳಾಗಿ ಬದಲಾಗುತ್ತೆ. ಹಾಗೂ ಇದು ಯಾವ ಭಕ್ತರಿಗೂ ತೊಂದರೆ ಮಾಡಲ್ಲ ಅನ್ನೋದು ಸ್ಥಳೀಯರ ಮಾತು. ಇನ್ನು ಇಲ್ಲಿನ ಸ್ಥಳ ಪುರಾಣದ ಪ್ರಕಾರ ಈ ಸರ್ಪಗಳ ಕಥೆ ಪರಶುರಾಮನ ಕಾಲಕ್ಕೆ ಕೊಂಡೊಯ್ಯುತ್ತೆ.

ಕ್ಷತ್ರಿಯರನ್ನು ನಾಶ ಮಾಡಿದ ಪರಶುರಾಮ ತನ್ನ ಪಾಪವನ್ನು ಕಳೆದುಕೊಳ್ಳೋಕೆ ಸಮುದ್ರದಿಂದ ಭೂಭಾಗವನ್ನು ಸೃಷ್ಟಿ ಮಾಡಿದ. ಅಲ್ಲಿನ ಮಣ್ಣು ಲವಣಾಂಶ ಯುಕ್ತವಾದ್ರಿಂದ ಹಾವಿನ ವಿಷ ಮಾತ್ರ ಅದನ್ನು ವಾಸಯೋಗ್ಯವಾಗಿ ಮಾಡಬಲ್ಲದು ಎಂದು ತಿಳಿದು ನಾಗರಾಜನನ್ನು ಮೆಚ್ಚಿಸಿ ಭೂಲೋಕಕ್ಕೆ ಕರೆತಂದು ಅಲ್ಲಿ ವಾಸಕ್ಕೆ ಯೋಗ್ಯವಾದ ಭೂಮಿ ಮಾಡಿದ. ಅಂದು ಬಂದ ನಾಗಗಳು ಆ ನಾಡಿನಲ್ಲಿ ಮಂದಾರಮರದಲ್ಲಿ ನೆಲೆ ನಿಂತವು. ಅದು ಮುಂದೆ ಮಂದಾರ ಶಾಲಾ ಆಗಿ ಮನ್ನಾರ್ ಶಲ ಆಯ್ತು ಅನ್ನೋ ನಂಬಿಕೆ ಇದೆ.

ಇನ್ನು ಇಲ್ಲಿ ಐದು ಹೆಡೆಯ ಸರ್ಪವನ್ನು ಪೂಜಿಸಲಾಗುತ್ತೆ. ಅದ್ದು ಖುದ್ದು ವಾಸುಕಿಯ ಮೂರ್ತಿ ಅಂತನೂ ಹೇಳಲಾಗುತ್ತೆ. ಭಕ್ತಯೊಬ್ಬಳ ಭಕ್ತಿಗೆ ಮೆಚ್ಚಿ ಇಲ್ಲಿ ನೆಲೆಸಿದ್ದಾನೆ ಅನ್ನೋ ನಂಬಿಕೆ ಭಕ್ತರದ್ದೂ. ಇದಕ್ಕೂ ಒಂದು ಪೌರಾಣಿಕ ಕಥೆ ಇದೆ. ವಾಸುಕಿ ಅಥವಾ ನಾಗರಾಜ ನೆಲೆಸಿದ್ದ ಕಾಡಿಗೆ ಬೆಂಕಿ ಬಿತ್ತು. ಆಗ ಅಲ್ಲಿದ್ದ ಹಲವು ನಾಗಗಳು ಬೆಂದು ಹೋಯಿತು. ಆಗ ಅಲ್ಲಿ ಕಾಡಿನಲ್ಲಿಯೇ ನೆಲೆಸಿದ್ದ ನಂಬೂದರಿ ಪತಿ ಪತ್ನಿ ಅರೆಬೆಂದ ಹಾವುಗಳಿಗೆ ಪರಿಮಳದ ಹುಲ್ಲಿನ ಲೇಪ ಮಾಡಿ ಹಚ್ಚಿ ಅವುಗಳ ಉರಿ ಕಡಿಮೆ ಮಾಡಿದ್ರು.

ಈ ದಂಪತಿಗೆ ಮಕ್ಕಳಿರಲಿಲ್ಲ. ಇವರು ನಾಗ ವಾಸುಕಿಯ ಭಕ್ತರಾಗಿದ್ದರು. ಹೀಗಾಗಿ ಈ ದಂಪತಿಗೆ ಒಬ್ಬ ಪುತ್ರ ಹಾಗೂ 5 ಹೆಡೆಯ ಸರ್ಪ ವೊಂದು ಜನಿಸಿತು .ಈ 5 ಹೆಡೆಯ ಹಾವನ್ನು ನಾಗರಾಜ ಎಂದು ನಂಬಲಾಗುತ್ತೆ. ಈಗಲೂ ಈ ಸರ್ಪ ಆ ಕುಟುಂಬವಿರುವ ಮನೆಯ ನೆಲಮಹಡಿಯಲ್ಲಿ ವಾಸವಾಗಿದೆ ಎಂದು ನಂಬಲಾಗುತ್ತೆ. ಮನೆಯ ಸದಸ್ಯರು ಅವನನ್ನು ಮುತಸ್ಸನ್ ಮತ್ತು ಅಪ್ಪೊಪ್ಪನ್ (ಅಜ್ಜ ತಂದೆ) ಎಂದು ಪ್ರೀತಿಯಿಂದ ಸಂಬೋಧಿಸುತ್ತಾರೆ. ದೇವಾಲಯದ ಆವರಣದಲ್ಲಿ ಹತ್ತಿರವಿರುವ ಕಾಡನ್ನು ಅಪ್ಪೊಪ್ಪನ್ ಕವು ಅಥವಾ ಅಜ್ಜನ ತೋಪು ಎಂದು ಕರೆಯಲಾಗುತ್ತದೆ.

ಇನ್ನು ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ಈ ಸರ್ಪಕ್ಕೆ ಪೂಜೆ ಮಾಡೋದು ಈ ನಂಬೂದರಿ ಕುಟುಂಬದ ಹಿರಿಯ ಹೆಣ್ಣು ಮಗಳು. ಯಾಕಂದ್ರೆ ಈ ನಾಗರಾಜ ಮನೆಯ ನೆಲಮಾಳಿಗೆ ತಪಸ್ಸಿಗೆ ಹೋಗುವ ಮುನ್ನ ತಾಯಿಯೇ ತನ್ನನ್ನು ಪೂಜಿಸ ಬೇಕು ಎಂದಿದ್ದನಂತೆ. ಅಂತೆಯೇ ತಾಯಿಯ ಕಾಲಾನಂತರ ಕುಟುಂಬದ ಹಿರಿಯ ಮಹಿಳೆ ಇಲ್ಲಿ ಪೂಜೆ ಮಾಡುತ್ತಾ ಬಂದಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಗಂಡಸರಿಗೆ ಪೂಜೆಗೆ ಅವಕಾಶವಿರುತ್ತೆ.

ಇನ್ನು ಇಲ್ಲಿಗೆ ಭಕ್ತರು ಹೆಚ್ಚಾಗಿ ಬರೋದು ಸಂತಾನಕ್ಕಾಗಿಯೇ. ಇಲ್ಲಿ ಬರೋ ದಂಪತಿಗಳು ನಾಗರಾಜ ಹಾಗೂ ಆತನ ಪತ್ನಿ ನಾಗಯಕ್ಷಿಯ ಮುಂದೆ ನಿಂತು ಸಂತಾನಕ್ಕಾಗಿ ಹರಕೆ ಹೇಳುತ್ತಾರೆ. ಮಕ್ಕಳಾದ ನಂತರ ಮಕ್ಕಳ ಸಮೇತರಾಗಿ ನಿಂತು ವಿಶೇಷ ಪೂಜೆಯನ್ನು ಮಾಡಿ ಹರಕೆ ತೀರಿಸುತ್ತಾರೆ. ಇಂದಿಗೂ ನಾಗರೂಪಿ ಶಕ್ತಿ ಭಕ್ತರನ್ನು ಕಾಯುತ್ತೆ ಅನ್ನೋನಂಬಿಕೆ ಇಲ್ಲಿದೆ.

ಇಲ್ಲಿ ಬಂದು ಸೇವೆ ಮಾಡಿದ್ರೆ ಕಾಳಸರ್ಪ ದೋಷ ಸೇರಿದಂತೆ ಎಲ್ಲಾಸರ್ಪ ದೋಷ ನಿವಾರಣೆಯಾಗುತ್ತೆ ಅನ್ನೋದು ನಂಬಿಕೆ. ಅಂದ ಹಾಗೆ ಈ ದೇವಾಲಯವಿರುವುದು ನಮ್ಮ ನೆರೆಯ ರಾಜ್ಯ ಪರಶುರಾಮನ ಸೃಷ್ಟಿ ಎನಿಸಿಕೊಂಡಿರೋ ಕೇರಳದಲ್ಲಿ. ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ ಬಳಿಯ ಮನ್ನರ್ ಶಲ ದಲ್ಲಿರೋ ನಾಗರಾಜ ದೇವಾಲಯವಿದು.

ಬೆಂಗಳೂರಿನಿಂದ ಸುಮಾರು 59 ಕಿಲೋ ಮೀ ಇರುವ ಈ ಸ್ಥಳಕ್ಕೆ ಹೋಗೋಕೆ ಬೆಂಗಳೂರಿನಿಂದ ರೈಲು ಸಂಪರ್ಕವಿದೆ. ಈ ದೇವಾಲಯವು ( Mannar Nagaraja temple ) ಮುಂಜಾನೆ 5 ರಿಂದ ಮಧ್ಯಾಹ್ನ 12 ವರೆಗೆ ಹಾಗೂ ಸಂಜೆ 5 ರಿಂದ 7.30 ವರೆಗೆ ತೆರೆದಿರುತ್ತೆ. ಸಾಧ್ಯವಾದ್ರೆ ನೀವಿಲ್ಲಿಗೊಮ್ಮೆ ಭೇಟಿ ನೀಡಿ.
ಇದನ್ನೂ ಓದಿ : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ- ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ
ಇದನ್ನೂ ಓದಿ : ತಿಮ್ಮಪ್ಪನ ಭಕ್ತರಿಗೆ ಹೊಸ ರೂಲ್ಸ್ ! ನಿಯಮ ಪಾಲಿಸದಿದ್ದರೆ ತಿಮ್ಮಪ್ಪನ ದರ್ಶನವೇ ಇಲ್ಲ
(Nagaraja temple in Mannar shack near Haripad protects devotees with 30 thousand snakes )