ಭಾನುವಾರ, ಏಪ್ರಿಲ್ 27, 2025
HomeCoastal NewsKrishna Janmashtami : ಸಾಲಿಗ್ರಾಮ : ಆಗಸ್ಟ್ 27 ರಂದು ಮುದ್ದು ಕೃಷ್ಣ - ಮುದ್ದು...

Krishna Janmashtami : ಸಾಲಿಗ್ರಾಮ : ಆಗಸ್ಟ್ 27 ರಂದು ಮುದ್ದು ಕೃಷ್ಣ – ಮುದ್ದು ರಾಧಾ ಸ್ಪರ್ಧೆ

- Advertisement -

ಸಾಲಿಗ್ರಾಮ : ಶ್ರೀಕೃಷ್ಣಜನ್ಮಾಷ್ಠಮಿಯ (Krishna Janmashtami) ಹಿನ್ನೆಲೆಯಲ್ಲಿ ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಯುವ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗ ಸಂಸ್ಥೆ ಇವರ ನೇತೃತ್ವದಲ್ಲಿ ಮುದ್ದುಕೃಷ್ಣ – ಮುದ್ದು ರಾಧಾ ಸ್ಪರ್ಧೆಯು ಅಗಸ್ಟ್‌ 27 ರಂದು ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಜ್ಣಾನ ಮಂದಿರದಲ್ಲಿ ನಡೆಯಲಿದೆ.

ಕೂಟ ಮಹಾ ಜಗತ್ತು ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ), ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ವಿ ಪಿ ಅಡಿಗ ಅಸೋಸಿಯೇಟ್ಸ್ ಉಳ್ತೂರು,ಶ್ರೀ ಕೃಷ್ಣ ಕೊ.ಆಪರೇಟಿವ್ ಸೊಸೈಟಿ ಉಡುಪಿ, ಗೆಳೆಯರ ಬಳಗ ಕಾರ್ಕಡ ಇವರ ಸಹಯೋಗದೊಂದಿಗೆ ಮುದ್ದು ರಾಧಾ ಮತ್ತು ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ : Minister Lakshmi Hebbalkar : ಹಠಾತ್ ಪ್ರವಾಹ ಮುನ್ಸೂಚನೆ : ಎಚ್ಚರಿಕೆ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಇದನ್ನೂ ಓದಿ : Toilet video case : ಉಡುಪಿ : ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ : 3 ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲು

ಮುದ್ದುರಾಧಾ – ಮುದ್ದುಕೃಷ್ಣ ಸ್ಪರ್ಧೆಯು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ಎಲ್ಲಾ ಸ್ಪರ್ಧೆಯು 0 ರಿಂದ 2, 2 ರಿಂದ 4 ಮತ್ತು 4 ರಿಂದ 6 ವಯೋ ಮಿತಿಯ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧಾ ವಿಜೇತ ಮಕ್ಕಳಿಗೆ ಪ್ರಶಸ್ತಿ ಮತ್ತು ಪ್ರಶಂಸಾ ಪತ್ರವನ್ನು ನೀಡಲಾಗುತ್ತದೆ. ಸ್ಪರ್ಧಿಗಳು ವೇಷಭೂಷವನ್ನು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇನ್ನು ಸ್ಪರ್ಧಿಗಳಿಗೆ ಸ್ಥಳದಲ್ಲಿಯೇ ವೇಷಭೂಷಣ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಖರ್ಚನ್ನು ಸ್ಪರ್ಧಾಳುಗಳೇ ಭರಿಸಬೇಕಾಗಿದೆ ಎಂದು ಕಾರ್ಯಕ್ರಮದ ಅಯೋಜಕರಾದ ಯುವವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಮಯ್ಯ ಅವರು ತಿಳಿಸಿದ್ದಾರೆ.

Krishna Janmashtami : Saligrama : Muddu Krishna – Muddu Radha Competition on 27th August

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular