(Kroda Shankaranarayan) ಸಾಮಾನ್ಯವಾಗಿ ನಾವು ಎಲ್ಲಾ ದೇವಾಲಯಗಳಲ್ಲಿ ದೇವರನ್ನ ನೇರವಾಗಿ ನೋಡಿ ದರ್ಶನ ಮಾಡಿಕೊಂಡು ಬರುತ್ತೇವೆ . ಆದರೆ ಇಲ್ಲಿ ಮೂಲ ದೇವರನ್ನು ನೋಡಬೇಕಾದರೆ ಕನ್ನಡಿಯ ಮೊರೆ ಹೋಗಲೇ ಬೇಕು. ಏನಪ್ಪಾ ಇದು ಕನ್ನಡಿಯ ಮೊರೆ ಹೋಗಬೇಕು ಅಂತಿದ್ದೀನಿ ಅಂತಾ ಆಲೋಚನೆ ಮಾಡ್ತಿದ್ದೀರಾ? ಹೈದು ಇಲ್ಲಿ ನಾವು ದೇವರ ಮೂಲ ಲಿಂಗವನ್ನು ನೋಡಬೇಕು ಎಂದರೆ ದರ್ಪಣದ ಮೂಲಕವೇ ನೋಡಬೇಕು. ನೇರವಾಗಿ ದೇವರನ್ನು ನೋಡಲು ನಮಗೆ ಸಾಧ್ಯವಿಲ್ಲ. ಹಾಗಿದ್ದರೆ ದರ್ಪಣದ ಮೂಲಕ ಮೂಲ ದೇವರನ್ನ ನೋಡಬೇಕಾದ ದೇಗುಲ ಯಾವುದು ? ಅದರ ವಿಶೇಷತೆ ಹಾಗೂ ಹಿನ್ನಲೆ ಏನು?. ಎನ್ನುವುದರ ಬಗ್ಗೆ ಒಂದಷ್ಟು ವಿವರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಇದು ಪರಶುರಾಮ ಸೃಷ್ಟಿಯ ಸಪ್ತಮೋಕ್ಷ ಕ್ಷೇತ್ರಗಳಲ್ಲಿ ಒಂದು (Kroda Shankaranarayan). ಸಾವಿರಾರು ವರ್ಷಗಳ ಹಿನ್ನಲೆಯನ್ನು ಹೊಂದಿದ ಕ್ಷೇತ್ರ ಇದಾಗಿದೆ. ಕಾರಕಾಸುರ ಮತ್ತು ರಟ್ಟಾಸುರ ಎಂಬ ಇಬ್ಬರು ಅಸುರರು ಪರಮೇಶ್ವರನ ಕುರಿತಾಗಿ ತಪಸ್ಸನ್ನು ಕೈಗೊಂಡು, ಶಿವ ಮತ್ತು ವಿಷ್ಣು ಇಬ್ಬರು ಒಂದಾಗಿ ಅವತಾರ ಎತ್ತಿದರೆ ಮಾತ್ರ ನಮ್ಮ ಮರಣವಾಗಬೇಕು ಎಂದು ವರವನ್ನು ಪಡೆಯುತ್ತಾರೆ. ನಂತರ ಭೂಲೋಕ ಸೇರಿದಂತೆ ಮೂರುಲೋಕದಲ್ಲಿ ತಮ್ಮ ಅಟ್ಟಹಾಸವನ್ನು ಪ್ರಾರಂಭಿಸಿ ಸಾಮಾನ್ಯ ಜನರನ್ನು ಹಿಂಸಿಸತೊಡಗಿದರು. ಇವರ ಅಟ್ಟಹಾಸವನ್ನು ತಾಳಲಾರದೆ ಕ್ರೋಢ ಎಂಬ ಮುನಿಯು ಮತ್ತೈವರು ಮುನಿಗಳ ಜೊತೆ ಸೇರಿ ಬೇರೆ ಬೇರೆ ಸ್ಥಳಗಳಲ್ಲಿ ತಪಸ್ಸನ್ನು ಕೈಗೊಂಡರು. ಇವರ ಭಕ್ತಿಗೆ ಮೆಚ್ಚಿ ಶಿವ ಮತ್ತು ನಾರಾಯಣ ಇಬ್ಬರು ಏಕರೂಪರಾಗಿ ಬಂದು ಅಸುರರನ್ನು ಸಂಹರಿಸಿ ಮುನಿಗಳ ಅಪೇಕ್ಷೆಯಂತೆ ಅವರು ತಪಸ್ಸು ಮಾಡಿದ ಐದು ಸ್ಥಳಗಳಲ್ಲಿ ಶಂಕರನಾರಾಯಣ ಎಂಬ ಹೆಸರಿನಿಂದ ನೆಲೆನಿಂತರು ಎಂದು ಸ್ಥಳಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಹೀಗೆ ಕ್ರೋಢ ಮುನಿ ತಪಸ್ಸನ್ನಾಚರಿಸಿದ ಸ್ಥಳವೇ ಮುಂದೆ ಕ್ರೋಢ ಶಂಕರನಾರಾಯಣ ಎಂದು ಹೆಸರುವಾಸಿಯಾಯಿತು. ಹಿಂದೆ ಇಲ್ಲಿಗೆ ಗೋಳಿಕಟ್ಟೆ ಎಂದು ಸಹ ಕರೆಯುತ್ತಿದ್ದರು. ಈಗಲೂ ಕೂಡ ಕೆಲವರ ಬಾಯಲ್ಲಿ ಇಲ್ಲಿಗೆ ಗೋಳಿಕಟ್ಟೆ ಅಂತಲೇ ಬರುತ್ತದೆ. ಇನ್ನೂ ಕ್ರೋಢಮುನಿ ತಪಸ್ಸನ್ನು ಮಾಡುತ್ತಿದ್ದ ಬೆಟ್ಟವನ್ನು ಕ್ರೋಡ ಬೆಟ್ಟ ಎಂತಲೂ, ತಪಸ್ಸಿಗೆ ಕೂರುತ್ತಿದ್ದ ಗುಹೆಯನ್ನು ಕ್ರೋಢ ಗುಹೆ ಎಂತಲೂ ಕರೆಯಲಾಗುತ್ತದೆ .
ಹಾಗಿದ್ದರೆ ಇಲ್ಲಿನ (Kroda Shankaranarayan) ವಿಶೇಷ ಏನಿರಬಹುದು ಎನ್ನುವ ಕುತೂಹಲ ನಿಮಗೂ ಇದೆ ಅಲ್ಲವೇ.
ಇಲ್ಲಿ ಗರ್ಭಗುಡಿಯ ಒಳಗೆ ನೆಲಮಟ್ಟದಿಂದ ಕೆಳಗೆ ಶಿವ ಮತ್ತು ವಿಷ್ಣು ಉದ್ಭವ ಲಿಂಗಗಳು ನೀರಿನಲ್ಲಿ ಮುಳುಗಿದ್ದು, ನೆಲಮಟ್ಟದಿಂದ ಸುಮಾರು ಆರು ಇಂಚು ವ್ಯಾಸದಡಿಯ ಪೀಠದಡಿಯಲ್ಲಿರುವ ಮೂಲಲಿಂಗಗಳನ್ನು ಕನ್ನಡಿಯ ಮೂಲಕ ಮಾತ್ರ ದರ್ಶನ ಮಾಡಬಹುದಾಗಿದೆ. ಇಲ್ಲಿನ ಶಂಕರ ರೂಪಿ ಲಿಂಗವು ಗೋಲಾಕಾರದಲ್ಲಿದ್ದು, ನಾರಾಯಣ ರೂಪಿ ಲಿಂಗದ ನೆತ್ತಿಯ ಮೇಲೆ ಚಪ್ಪಟೆಯಾಗಿದ್ದು, ಕಾಮಧೇನುವಿನ ಹೆಜ್ಜೆ ಗುರುತನ್ನು ಹೊಂದಿದೆ . ಉದ್ಭವ ಲಿಂಗಗಳ ಸುತ್ತ ನೀರು ಸುತ್ತುವರೆದಿದ್ದು, ಅದನ್ನು ಸಿದ್ಧಾಂತದ ತೀರ್ಥ ಎಂದು ಕರೆಯುತ್ತಾರೆ. ಇನ್ನೂ ನಾವು ಎಲ್ಲಾ ದೇವಾಲಯಗಳಲ್ಲಿ ಎತ್ತರದ ಗರ್ಭಗುಡಿ, ಪಾಣಿಪೀಠ, ತೀರ್ಥಧ್ವಾರಗಳನ್ನು ನೋಡುತ್ತೇವೆ. ಆದರೆ ಈ ದೇವಾಲಯದಲ್ಲಿ ಈ ರೀತಿಯಾಗಿ ಎತ್ತರವಾದ ಗರ್ಭಗುಡಿ, ಪಾಣಿಪೀಠ, ತೀರ್ಥಧ್ವಾರಗಳನ್ನು ನೋಡಲು ಸಾಧ್ಯವಿಲ್ಲ.

ಇನ್ನೂ ಇಲ್ಲಿನ ಒಂದು ವಿಶೇಷ ಹರಕೆ ಎಂದರೆ ಅದು ಕಂಚುಳಿ ಸೇವೆ. ಸನ್ನಿಧಿಗೆ ಬಂದು ಕಂಚುಳಿ ಸೇವೆಯನ್ನು ಮಾಡಿಸುವುದಾಗಿ ಹರಕೆಯನ್ನು ಕಟ್ಟಿಕೊಂಡರೆ ತಮ್ಮ ಮನೋಭಿಲಾಷೆ ಇಡೇರುವುದು ಎಂಬುದು ಭಕ್ತರ ಒಂದು ಘಾಡವಾದ ನಂಬಿಕೆ.
ಹಾಗಿದ್ದರೆ ಕಂಚುಳಿ ಸೇವೆ ಎಂದರೇನು?
ಹೊಸ ಬಟ್ಟೆಯನ್ನು ತೊಟ್ಟು ಒಂದು ಹರಿವಾಣದಲ್ಲಿ ಅಕ್ಕಿ, ತೆಂಗಿನಕಾಯಿ, ಅಡಿಕೆ, ಹೂವು, ದೀಪ ಮತ್ತು ತಾಂಬೂಲವನ್ನು ಹಾಕಿಕೊಂಡು ತಲೆಯ ಮೇಲೆ ಹೊತ್ತು ದೇವಸ್ಥಾನದ ಸುತ್ತ ಹಿಮ್ಮುಖವಾಗಿ ಪ್ರದಕ್ಷಿಣೆ ಹಾಕುವುದನ್ನು ಕಂಚುಳಿ ಸೇವೆ ಎನ್ನುತ್ತಾರೆ. ಈ ರೀತಿಯ ಸೇವೆಗಳನ್ನು ಇಲ್ಲಿ ಬಿಟ್ಟು ಬೇರೆಲ್ಲೂ ನೋಡಲಾಗದು ಎಂಬ ಸಂಗತಿ ಸುಳ್ಳಲ್ಲ.
ಇಲ್ಲಿಯ ಇನ್ನೊಂದು ವಿಶೇಷವೇನೆಂದರೆ;
ಇಲ್ಲಿ ಪ್ರಸಾದ ರೂಪದಲ್ಲಿ ದೇವರ ಮೂಲ ಮೃತ್ಯುಕೆಯನ್ನು ಕೊಡಲಾಗುತ್ತೆ. ಇದನ್ನು ಪ್ರಸಾದ ರೂಪದಲ್ಲಿ ತೆಗೆದುಕೊಂಡರೆ ಅಸ್ಟೈಶ್ವರ್ಯಗಳು ಲಭಿಸುವುದು ಎಂದು ಇಲ್ಲಿನ ಭಕ್ತರು ನಂಬಿದ್ದಾರೆ.

ದೇವಸ್ಥಾನದ ಎದುರುಗಡೆ ಕೋಟಿತೀರ್ಥ ಎಂಬ ಕೆರೆಯಿದೆ. ಇದು ಅಡಿಕೆ ಮತ್ತು ತೆಂಗಿನ ಮರಗಳಿಂದ ಸುತ್ತುವರೆದಿದ್ದು,ಜನರ ಮನಸ್ಸನ್ನು ಅತಿ ವೇಗವಾಗಿ ಸೆಳೆಯುತ್ತದೆ. ಇಲ್ಲಿ ಬಂದು ಕೆರೆಯ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡರೆ ನಮ್ಮ ಪಾಪ ಪುಣ್ಯಗಳು ತೊಲಗಿ ಮೋಕ್ಷ ದೊರಕುವುದೆಂಬುದು ಜನರ ನಂಬಿಕೆ. ಈ ಕ್ಷೇತ್ರದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಶಕ್ತಿಶಾಲಿಯಾದ ಶಂಕರನಾರಾಯಣ ಸ್ವಾಮಿಯ ದರ್ಶನ ಮಾಡಬಹುದಾಗಿದೆ.

ಪ್ರತಿವರ್ಷ ಮಕರಸಂಕ್ರಾಂತಿಯ ಸಂದಂರ್ಭ ಅಂದರೆ ಜನವರಿ 16 ರಂದು ಶ್ರೀ ದೇವರಿಗೆ ಮನ್ಮಹಾರಥೋತ್ಸವ ಸೇವೆ ವಿಜ್ರಂಭಣೆಯಿಂದ ನೆರವೇರುತ್ತದೆ . ಶಿವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಕಾರ್ತಿಕ ಮಾಸದ ಪ್ರಾರಂಭದ ಸೋಮವಾರದಿಂದ ಕೊನೆಯ ಕಾರ್ತಿಕ ಸೋಮವಾರದವರೆಗೂ ಈ ಕ್ಷೇತ್ರದಲ್ಲಿ ಕಾರ್ತಿಕ ಸೋಮವಾರದ ಪೂಜೆ ಹಬ್ಬದ ರೀತಿಯಲ್ಲಿ ನೆರವೇರುತ್ತದೆ. ಮನ್ಮಹಾರಥೋತ್ಸವ ಹಾಗೂ ಕಾರ್ತಿಕ ಮಾಸದಲ್ಲಿ ಬೇರೆ ಬೇರೆ ಕಡೆಗಳಿಂದ ಅತಿ ಹೆಚ್ಚು ಜನರು ದೇವಾಲಯದತ್ತ ಬಂದು ಶಂಕರನಾರಾಯಣನ ದರ್ಶನ ಮಾಡುತ್ತಾರೆ.

ಇಲ್ಲಿ ಶ್ರೀ ಸ್ವಾಮಿಗೆ ರುದ್ರಾಭಿಶೇಕ, ಪಂಚಾಮ್ರತ ಅಭಿಷೇಕ, ಸಹಸ್ರನಾಮಾರ್ಚನೆ, ಕಂಚುಳಿ ಸೇವೆ, ಅಭಿಷೇಕ ಸೇವೆ ಹಾಗೂ ಇನ್ನೀತರ ಸೇವೆಗಳನ್ನು ಮಾಡಿಸಬಹುದಾಗಿದೆ. ಈ ದೇವಸ್ಥಾನವು ಶಂಕರನಾರಾಯಣ ಗ್ರಾಮಕ್ಕೆ ಸೇರಿದ್ದು, ಶಂಕರನಾರಾಯಣ ಬಸ್ ನಿಲ್ದಾಣದ ಹಿಂದುಗಡೆ ದೇವಸ್ಥಾನದ ಮಹಾಧ್ವಾರ ಜನರನ್ನು ಕೈಬೀಸಿ ಕರೆಯುತ್ತಿದೆ.

ಇಲ್ಲಿಗೆ ಬರುವ ಭಕ್ತರು ಉಡುಪಿಯಿಂದ ಬರುವುದಾದರೆ 44 ಕಿ. ಮೀ. ದೂರ ಕ್ರಮಿಸಿದರೆ , ಕುಂದಾಪುರದಿಂದ 25 ಕಿ.ಮೀ. ದೂರ ಕ್ರಮಿಸಿದರೆ ಶ್ರೀ ಕ್ಷೇತ್ರವು ಸಿಗುತ್ತದೆ . ಇಲ್ಲಿಗೆ ಹಲವಾರು ಬಸ್‌ಗಳ ವ್ಯವಸ್ಥೆ ಇದ್ದು ಇಲ್ಲಿಗೆ ಬರುವ ಜನರಿಗೆ ಅನುಕೂಲಕರವಾಗಿದೆ.
ಇದನ್ನೂ ಓದಿ : Champa shashti background: ಕುಕ್ಕೆ ಸುಬ್ರಹ್ಮಣ್ಯ, ಕಾಳಾವರ, ಕುಡುಪುವಿನಲ್ಲಿ ಚಂಪಾ ಷಷ್ಠಿ ಉತ್ಸವ : ಏನಿದರ ಹಿನ್ನಲೆ ಗೊತ್ತಾ ?
ಇದನ್ನೂ ಓದಿ : Guddattu shri vinayaka temple: ಕಲ್ಲು ಬಂಡೆಯ ನಡುವೆ ಮೂಡಿಬಂದ ಬಲಮುರಿ ಗಣಪ
(Kroda Shankaranarayan) Usually we come to see God directly in all the temples. But if you want to see the original God here, you have to go to the mirror. Are you thinking that this should go to the mirror? Haidu here we have to see the original gender of God means through Darpana.