ಭಾನುವಾರ, ಏಪ್ರಿಲ್ 27, 2025
HomeBreakingKyamenahalli Hanuma Temple : ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಾನೆ ಅಪರೂಪದ ಎದುರು ಮುಖದ ಆಂಜನೇಯ

Kyamenahalli Hanuma Temple : ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಾನೆ ಅಪರೂಪದ ಎದುರು ಮುಖದ ಆಂಜನೇಯ

- Advertisement -
  • ಹೇಮಂತ್ ಚಿನ್ನು

ಎಲ್ಲಾ ಆಂಜನೇಯನ ದೇಗುಲದಲ್ಲಿ ಆಂಜನೇಯನು ಎಡಕ್ಕೆ ತಿರುಗಿರುವುದನ್ನು ನಾವು ಕಾಣುತ್ತೇವೆ. ಕೆಲವು ದೇಗುಲಗಳಲ್ಲಿ ಮಾತ್ರ ಎದುರು ಮುಖದಲ್ಲಿ ಆಂಜನೇಯನನ್ನು ನೋಡು ತ್ತೇವೆ. ಅಂತಹ ಒಂದು ದೇಗುಲವೇ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿಯಲ್ಲಿರುವ ಹನುಮನ ದೇಗುಲ (Kyamenahalli Hanuma Temple).

ಇದನ್ನು ಜನಮೇಜಯ ರಾಜನು 5000 ವರ್ಷಗಳ ಹಿಂದೆ ನಿರ್ಮಿಸಿ ದರು ಎಂದು ಐತಿಹ್ಯ ಹೇಳುತ್ತದೆ. ಕಾಲಾಂತರದಲ್ಲಿ ವಿಜಯನಗರ ಅರಸರು ಜೀರ್ಣೋದ್ದಾರ ಮಾಡಿಸಿದ್ದಾರೆ. ಈ ಸ್ಥಳವನ್ನು ಸ್ಕಾಂದ ಪುರಾಣದಲ್ಲಿ ಕಮನೀಯ ಕ್ಷೇತ್ರ ಎಂದು ಕರೆಯಲಾಗಿದೆ.

ಈ ಕ್ಷೇತ್ರದಲ್ಲಿ ಜಯ, ಮಂಗಳ, ಹಾಗೂ ಗರುಡಾಚಲ ಎಂಬ ಮೂರು ನದಿಗಳು ಸಂಗಮವಾಗುವುದರಿಂದ ಇದನ್ನು ಸಂಗಮ ಕ್ಷೇತ್ರ ಎಂದೂ ಕರೆಯುತ್ತಾರೆ. ಇಲ್ಲಿನ ಹನುಮನ ವಿಗ್ರಹಕ್ಕೆ ಹಲವು ವಿಶೇಷತೆಗಳಿವೆ. ಇಲ್ಲಿ ಹನುಮನಿಗೆ ಮೀಸೆ ಇದೆ, ಸೊಂಟದಲ್ಲಿ ಕಿರುಗತ್ತಿ ಇದೆ ಹಾಗೂ ಎದುರುಮುಖ ಇದೆ  ಹಾಗೂ ಹನುಮನ ಎಡಬಲದಲ್ಲಿ ಶಂಖ ಚಕ್ರಗಳಿವೆ. ಇಲ್ಲಿನ  ವಿಗ್ರಹದಲ್ಲಿ ಹನುಮ, ಭೀಮ , ಮಧ್ವ ಮೂವರ ಅಂಶವೂ ಇದೆ ಎಂದು ಅಲ್ಲಿನ ಪುರೋಹಿತರು ತಿಳಿಸುತ್ತಾರೆ.

ಪ್ರತಿವರ್ಷ ಫೆಬ್ರವರಿಯಲ್ಲಿ ಇಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆಯುತ್ತದೆ. ಇಲ್ಲೂ ಒಂದು ವಿಶೇಷತೆ ಇದೆ. ರಥೋತ್ಸವದ ದಿನ ರಥದ ಅಲಂಕಾರ ಎಲ್ಲಾ ಮುಗಿದ ಮೇಲೆ ಗರುಡವೊಂದು ಎಲ್ಲಿಂದಲೋ ಬಂದು ರಥಕ್ಕೆ ಒಂದು ಪ್ರದಕ್ಷಿಣೆ ಹಾಕುತ್ತದೆ. ನಂತರವೇ ರಥವನ್ನು ಭಕ್ತಾದಿಗಳು ಎಳೆಯುತ್ತಾರೆ. ಇಲ್ಲಿ ಸೀತಾರಾಮರ ಸನ್ನಿಧಿಯೂ ಇದೆ.

ಕೊರಟಗೆರೆಯಿಂದ 8 ಕಿ.ಮೀ  ಗೊರವನಹಳ್ಳಿಯಿಂದ 6 ಕಿ.ಮೀ ದೂರದಲ್ಲಿರುವ ಈ ಕ್ಯಾಮೇನಹಳ್ಳಿಗೆ ಭೇಟಿ ನೀಡಿ ನಿಮ್ಮ ಮನವಿ ಗಳನ್ನು ಆ ದೇವನಿಗೆ ಸಲ್ಲಿಸಿ. ಏಕೆಂದರೆ ಆತ ಭಕ್ತ ಪರಾಧೀನ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ಎಂದು ಅಲ್ಲಿಗೆ ನಡೆದುಕೊಳ್ಳುವ ಸಾವಿರಾರು ಭಕ್ತರ ಅಭಿಪ್ರಾಯ.

ಇದನ್ನೂ ಓದಿ : Sridhara Swami : ದುರಿತಗಳ ಅಳಿಸಿ ಭಕ್ತಕೋಟಿಯ ಬೆಳೆಸಿದ ಯತಿ ಶ್ರೀಶ್ರೀಧರರು

ಇದನ್ನೂ ಓದಿ : Shivalinga : ಚೂರಾದ ಶಿವಲಿಂಗ ಮತ್ತೆ ಒಂದಾಗುತ್ತೆ, ಸಿಡಿಲಿನಿಂದ ಕಾಪಾಡ್ತಾನೆ ಶಿವ

kyamenahalli hanuma temple koratagere tumkur

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular