ನವದೆಹಲಿ : ವರ್ಷಂಪ್ರತಿ ಮೇ 1 ರಂದು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು (Labour Day 2023) ಆಚರಿಸಲಾಗುತ್ತದೆ. ಕಾರ್ಮಿಕರ ಮಹತ್ವ ಮತ್ತು ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಶಿಕ್ಷಣ ನೀಡಲು ಮೇ ದಿನ ಅಥವಾ ಕಾರ್ಮಿಕರ ದಿನ ಎಂದು ಸಹ ಕರೆಯಲಾಗುತ್ತದೆ. ಇನ್ನು ಕಾರ್ಮಿಕ ದಿನ 2023ರ ಇತಿಹಾಸ, ಮಹತ್ವ ಮತ್ತು ಅದನ್ನು ಏಕೆ ಆಚರಿಸಲಾಗುತ್ತದೆ ಅನ್ನೋ ಮಾಹಿತಿ ಇಲ್ಲಿದೆ.
ಹಲವು ದೇಶಗಳಲ್ಲಿ ಕಾರ್ಮಿಕ ದಿನವು ರಾಷ್ಟ್ರೀಯ ರಜಾದಿನವಾಗಿದ್ದು, ಹಲವಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳ ಸುಧಾರಣೆಗಾಗಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತದೆ. ಕಾರ್ಮಿಕರ ದಿನವನ್ನು ಅಂಗೀಕರಿಸುವ ಮಸೂದೆಯನ್ನು ಪರಿಚಯಿಸಿದ ಮೊದಲ ರಾಜ್ಯ ನ್ಯೂಯಾರ್ಕ್ ಆಗಿದ್ದು, ಫೆಬ್ರವರಿ 21, 1887 ರಂದು ಒರೆಗಾನ್ ಅದರ ಮೇಲೆ ಕಾನೂನನ್ನು ಅಂಗೀಕರಿಸಿದ ಮೊದಲನೆಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ನಂತರ 1889 ರಲ್ಲಿ, ಮಾರ್ಕ್ಸಿಸ್ಟ್ ಇಂಟರ್ನ್ಯಾಷನಲ್ ಸೋಷಿಯಲಿಸ್ಟ್ ಕಾಂಗ್ರೆಸ್ ಒಂದು ದೊಡ್ಡ ಅಂತರರಾಷ್ಟ್ರೀಯ ಪ್ರದರ್ಶನಕ್ಕಾಗಿ ಕಾರ್ಮಿಕ ದಿನಾಚರಣೆಯ ನಿರ್ಣಯವನ್ನು ಅಂಗೀಕರಿಸಿತು. ಇದರಲ್ಲಿ ಅವರು ಕಾರ್ಮಿಕರನ್ನು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು. ಇದರೊಂದಿಗೆ ಮೇ 1 ರಂದು ರಜೆ ಘೋಷಿಸಲು ನಿರ್ಧರಿಸಲಾಯಿತು.
ಭಾರತದಲ್ಲಿ ಕಾರ್ಮಿಕ ದಿನ :
ಭಾರತವು ಮೇ 1, 1923 ರಂದು ಚೆನ್ನೈನಲ್ಲಿ ಕಾರ್ಮಿಕರ ದಿನವನ್ನು ಮೊದಲು ಆಚರಿಸಲು ಪ್ರಾರಂಭಿಲಾಯಿತು. ಕಾರ್ಮಿಕ ದಿನಾಚರಣೆಯನ್ನು ‘ಕಾಮ್ಗರ್ ದಿವಸ್’, ‘ಕಾಮ್ಗರ್ ದಿನ್’ ಮತ್ತು ‘ಅಂತರಾಷ್ಟ್ರೀಯ ಶ್ರಮಿಕ್ ದಿವಸ್’ ಎಂದೂ ಕರೆಯಲಾಗುತ್ತದೆ. ಈ ದಿನವನ್ನು ಮೊದಲು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆಚರಿಸಿತು ಮತ್ತು ಇದನ್ನು ದೇಶದಲ್ಲಿ ರಾಷ್ಟ್ರೀಯ ರಜಾದಿನವೆಂದು ಪರಿಗಣಿಸಲಾಗಿದೆ.
ಕಾರ್ಮಿಕ ದಿನಾಚರಣೆಗಳು :
ಈ ದಿನದಂದು, ಕಾರ್ಮಿಕರ ಹಕ್ಕುಗಳನ್ನು ಖಾತ್ರಿಪಡಿಸಲು ಮತ್ತು ಶೋಷಣೆಗೆ ಒಳಗಾಗದಂತೆ ರಕ್ಷಿಸಲು ವಿಶ್ವದಾದ್ಯಂತ ಜನರು ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ನಡೆಸುವ ಮೂಲಕ ದಿನವನ್ನು ಆಚರಿಸುತ್ತಾರೆ. ಜಾಗೃತಿ ಮೂಡಿಸುವ ಸಲುವಾಗಿ ಹಲವಾರು ದೇಶಗಳಲ್ಲಿ ಈ ದಿನವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದೆ. ಭಾರತದಲ್ಲಿ, ಈ ದಿನವನ್ನು ಅಂತರರಾಷ್ಟ್ರೀಯ ಶ್ರಮಿಕ್ ದಿವಸ್ ಅಥವಾ ಕಮ್ಗರ್ ದಿನ್ ಎಂದೂ ಕರೆಯಲಾಗುತ್ತದೆ. ಈ ದಿನವನ್ನು ಭಾರತದಲ್ಲಿ ಮೊದಲ ಬಾರಿಗೆ 1923 ರಲ್ಲಿ ಆಚರಿಸಲಾಯಿತು.
ಅಂತರಾಷ್ಟ್ರೀಯ ಕಾರ್ಮಿಕ ದಿನದ ಇತಿಹಾಸ :
ಅಮೆರಿಕನ್ ಉದ್ಯೋಗಿಗಳು ಕಠೋರ ಕಾರ್ಮಿಕ ನಿಯಮಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಟ್ಟ ಕೆಲಸದ ಪರಿಸ್ಥಿತಿಗಳು ಮತ್ತು ಭಯಾನಕ ಕೆಲಸದ ಸಮಯಗಳ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದರು. ದಿನವೊಂದಕ್ಕೆ 8 ಗಂಟೆಗಳ ಕೆಲಸವನ್ನು ನಿಗದಿಗೊಳಿಸಬೇಕು ಎನ್ನುವ ಕಾರ್ಮಿಕರ ಚಳುವಳಿ 1860 ರಿಂದ ಆರಂಭವಾಯಿತು. ಚಳವಳಿಗಾಗಿ ಅಮೆರಿಕ, ಕೆನಡಾ, ದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ದಿನವೊಂದಕ್ಕೆ 10 ರಿಂದ 14 ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುದನ್ನು ಈ ಸಂಘಟನೆಗಳು ವಿರೋಧಿಸಿದವು.
ಅಮೆರಿಕದ ಷಿಕಾಗೋ ಸಾವಿರಾರು ಕಾರ್ಮಿಕ ಸಂಘಟನೆಗಳ ಕೇಂದ್ರವಾಯಿತು. 1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಲಕ್ಷಾಂತರ ಕಾರ್ಮಿಕರು 8 ಗಂಟೆಗಳ ಕೆಲಸದ ನಿಗದಿಗೆ ಪ್ರತಿಭಟನೆ ಆರಂಭಿಸಿದ್ದರು. ಈ ಹೋರಾಟದಲ್ಲಿ ಎಷ್ಟೋ ಕಾರ್ಮಿಕರು ಪ್ರಾಣತ್ಯಾಗ ಮಾಡಿದರು. ಹೀಗಾಗಿ 1916 ರವರೆಗೂ ಯುನೈಟೆಡ್ ಸ್ಟೇಟ್ಸ್ ಎಂಟು ಗಂಟೆಗಳ ಕೆಲಸ ಸಮಯವನ್ನು ನಿಗಧಿಪಡಿಸಿತು. ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥ ಮೇ 1 ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿಯು ವಿಶ್ವದಾದ್ಯಂತ ಎಂಟು ಗಂಟೆಗಳಿಗೆ ಮಿತಿಗೊಂಡಿತು.
ಇದನ್ನೂ ಓದಿ : ವಿಶ್ವ ಭೂ ದಿನ 2023 : ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಬಗ್ಗೆ ತಿಳಸಿದ ಪ್ರಧಾನಿ ಮೋದಿ
ಹೀಗಾಗಿ ಸ್ವೀಡನ್, ಫ್ರಾನ್ಸ್, ಪೋಲೆಂಡ್, ಫಿನ್ಲ್ಯಾಂಡ್, ನಾರ್ವೆ, ಸ್ಪೇನ್, ಜರ್ಮನಿ ಮತ್ತು ಇಟಲಿ ಸೇರಿದಂತೆ ಹಲವು ಯುರೋಪಿಯನ್ ದೇಶಗಳಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ದಕ್ಷಿಣ ಅಮೆರಿಕಾದಲ್ಲಿ, ಕ್ಯೂಬಾ, ಮೆಕ್ಸಿಕೋ, ಗಯಾನಾ, ಪೆರು, ಉರುಗ್ವೆ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಆಚರಿಸಲಾಗುತ್ತದೆ. ಕೆನಡಾ, US ಮತ್ತು ಆಸ್ಟ್ರೇಲಿಯಾದಲ್ಲಿ ವರ್ಷವಿಡೀ ವಿವಿಧ ಸಮಯಗಳಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
Labour Day 2023 : When did Labor Day start? History, significance of something