ಇತ್ತೀಚಿನ ದಿನಗಳಲ್ಲಿ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಕೆಲಸದೊತ್ತಡ, ಟೆನ್ಶನ್ ಸೇರಿದಂತೆ ನಾನಾ ಕಾರಣಗಳಿಂದಾಗಿ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಅನ್ನೋದು ನಿಮಗೆ ಗೊತ್ತಾ ? ಈ ಟ್ರಿಕ್ ಅಳವಡಿಸಿಕೊಂಡ್ರೆ ನಿಮಗೆ ನವ ತಾರುಣ್ಯ ಉಕ್ಕುವುದು ಪಕ್ಕಾ.

ಕ್ಯಾರೆಟ್ ನಲ್ಲಿ ವಿಟಮಿನ್ ಸಿ, ಎ ಮತ್ತು ಇ ಇದ್ದು, ತ್ವಚೆಯಲ್ಲಿ ಕಾಣಿಸುವ ವಯಸ್ಸಾದ ಲಕ್ಷಣಗಳನ್ನು ಇದು ದೂರಗೊಳಿಸಿ ಮುಖದ ರಕ್ತಸಂಚಾರ ಹೆಚ್ಚಿಸುತ್ತದೆ. ಮೊಗವನ್ನು ಕಾಂತಿಯುತ ಹಾಗೂ ಯೌವನಯುತವಾಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ: Curd Beauty Tips : ಮೊಸರು ಆರೋಗ್ಯಕ್ಕಷ್ಟೇ ಅಲ್ಲಾ ಮುಖದ ತ್ವಚೆಗೂ ಉತ್ತಮ

ಕ್ಯಾರೆಟ್ ಮಾಸ್ಕ್ ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೊಡವೆ, ನೆರಿಗೆ, ಕಲೆಯಂತಹ ಸಮಸ್ಯೆಯಿಂದ ಮುಕ್ತಿ ದೊರಕಿಸಿ ಕೊಡುತ್ತದೆ. ಕ್ಯಾರೆಟ್ ಪೇಸ್ಟ್ ಗೆ ಬಾದಾಮಿ ಎಣ್ಣೆ ಬೆರೆಸಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ಒಂದು ಗಂಟೆ ಬಳಿಕ ತೊಳೆದರೆ ಹೊಳೆಯುವ ಮುಖಾರವಿಂದ ನಿಮ್ಮದಾಗುತ್ತದೆ. ಇದನ್ನು ವಾರಕ್ಕೆರಡು ಬಾರಿ ಮಾಡಿದರೆ ಉತ್ತಮ.

ಕ್ಯಾರೆಟ್ ನೊಂದಿಗೆ ಕಡ್ಲೆಹಿಟ್ಟು, ಸೌತೆಕಾಯಿ, ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಕಣ್ಣಿನ ಕೆಳಭಾಗ, ಗಲ್ಲ, ಕೆನ್ನೆ, ಕುತ್ತಿಗೆ ಕೆಳಭಾಗದಲ್ಲಿ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆದರೂ ಮುಖಕ್ಕೆ ಅತ್ಯುತ್ತಮ ಗ್ಲೋ ಸಿಗುತ್ತದೆ. ಕೆಲಸದ ನಡುವೆ ಸ್ವಪ ಬಿಡುವಿದ್ದಾಗ ಈ ಬ್ಯುಟಿ ಟಿಪ್ಸ್ ಅನ್ನು ಟ್ರೈ ಮಾಡಿನೋಡಿ.
ಇದನ್ನೂ ಓದಿ: ಮುಖದ ಸೌಂದರ್ಯಕ್ಕೆ ತುಳಸಿ ಎಲೆ ನೈಸರ್ಗಿಕ ಟೋನರ್
(Beauty Tips with Carrott)