ಬಿಳಿಯಾಗ ಬೇಕೆಂಬುದು ಬಹುತೇಕರ ಬಯಕೆ. ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುವವರನ್ನು ನೋಡಿರುತ್ತೀರಿ. ದುಬಾರಿ ಕ್ರೀಮ್ ಗಳಿಗೆ ದುಡ್ಡು ಸುರಿದು ಫಲಿತಾಂಶ ಸಿಗದೆ ಕೈ ಸುಟ್ಟುಕೊಂಡಿರುತ್ತಾರೆ. ಇದನೆಲ್ಲಾ ಬಿಟ್ಟು ಒಂದು ಸುಲಭ ಉಪಾಯ ಇದೆ. ಅದು ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್ ಮಾಡಿಕೊಂಡರೆ ಹೊಳೆಯುವ ಮುಖ ಪಡೆದುಕೊಳ್ಳಬಹುದು.

ನೈಸರ್ಗಿಕವಾಗಿ ಸಿಗುವ ಕೊತ್ತೊಂಬರಿ ಸೊಪ್ಪಿನಲ್ಲಿ ಹಲವಾರು ಆರೋಗ್ಯ ಹಾಗೂ ಸೌಂದರ್ಯ ವೃದ್ದಿಸುವ ಗುಣ ಅಡಗಿದೆ. ಕೊತ್ತೊಂಬರಿ ಸೊಪ್ಪಿನಿಂದ ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಬಹುದು. ಇದನ್ನ ಬಳಸಿದರೆ ತ್ವಚೆ ಬಿಳಿಯಾಗುತ್ತದೆ.

ಇದನ್ನೂ ಓದಿ: Beauty Tips : ಮೆಂತೆಯಲ್ಲಿದೆ ಸೌಂದರ್ಯದ ಗುಟ್ಟು
ಎಲ್ಲಾ ವಿಧದಿಂದ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಆದರೆ ಸೂಕ್ಷ್ಮ ವಿಧದ ಚರ್ಮ ಹೊಂದಿದವರು ಇದನ್ನು ಬಳಸುವಾಗ ಎಚ್ಚರ ವಹಿಸಬೇಕು. ಮೊಡವೆ ಕಪ್ಪುಕಲೆ ಮತ್ತು ಸೋಂಕುಗಳಿಗೆ ಈ ಕೊತ್ತೊಂಬರಿ ಸೊಪ್ಪು ಲಾಭದಾಯಕ.

ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಬಳಿಕ ಅದಕ್ಕೆ 5 ರಿಂದ 6 ಚಮಚ ಟೊಮೊಟೊ ರಸ ಮತ್ತು ನಿಂಬೆರಸ ಹಾಗೂ ಅರ್ಧ ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಕಲಸಿ ಫೇಸ್ ಪ್ಯಾಕ್ ತಯಾರಿಸಿ. ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅದು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ ಒಮ್ಮೆ ಮಾಡುವುದರಿಂದ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಇದನ್ನೂ ಓದಿ: Tomato Beauty : ಟೊಮ್ಯಾಟೋ ಬರೀ ತಿನ್ನೋದಕ್ಕಷ್ಟೆ ಅಲ್ಲಾ ಸೌಂದರ್ಯಕ್ಕೂ ದಿವ್ಯ ಔಷಧ
(Coriander leaves Facepack)