ಬುಧವಾರ, ಜೂನ್ 18, 2025
HomeSpecial StoryLife Styleಆಲೋವೆರಾದಲ್ಲಿ ಅಡಗಿದೆ ಕೂದಲಿನ ಸೌಂದರ್ಯ ರಹಸ್ಯ

ಆಲೋವೆರಾದಲ್ಲಿ ಅಡಗಿದೆ ಕೂದಲಿನ ಸೌಂದರ್ಯ ರಹಸ್ಯ

- Advertisement -

ಆಲೋವೆರಾ ಅಥವಾ ಲೋಳೆರಸ ಎಂದು ಕರೆಯುವ ಈ ಸಸ್ಯದ ಮೂಲ ಆಫ್ರಿಕಾ ಖಂಡ. ಅಮಿನೋ ಆಸಿಡ್‌, ಎ, ಎಫ್‌, ಸಿ ಹಾಗೂ ಬಿ ಅಲೋವೆರಾದಲ್ಲಿ ಹೇರಳವಾಗಿದೆ. ಆಲೋವೆರಾವನ್ನು ಮುಖ್ಯವಾಗಿ ಔಷದೀಯ ಗಿಡಮೂಲಿಕೆಯಾಗಿ ಬಳಸಲಾಗುತಿತ್ತು ಇದರಲ್ಲಿ 100ಕ್ಕೂ ಹೆಚ್ಚು ಔಷದೀಯ ಗುಣಗಳಿವೆ. ಆದರೂ ಆಲೋವೆರಾ ಸೌಂದರ್ಯ ವೃದ್ಧಿಸುವ ವಿಷಯದಲ್ಲೂ ಸೈ ಎನಿಸಿಕೊಂಡಿದೆ.

Aloe Vera Is The Beauty Secret Of Hair 1

ಆಲೋವೆರಾವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಮೇಲೆ ತೊಳೆಯುವುದರಿಂದ ಕೂದಲು ಸೊಂಪಾಗಿ ನಯವಾಗಿ ಕಾಣುತ್ತದೆ. ತಲೆ ಹೊಟ್ಟಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಇದರ ರಸವನ್ನು ಪ್ರತೀನಿತ್ಯ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಲೆಯುವುದರಿಂದ ಮುಖದ ಭಂಗು ಹೋಗುತ್ತದೆ.

ಇದನ್ನೂ ಓದಿ: Mint leaf : ಪುದೀನಾ ಎಲೆಯಲ್ಲಿ ಅಡಗಿದೆ ಮುಖದ ಕಲೆಯನ್ನು ನೀವಾರಿಸುವ ಔಷಧೀಯ ಗುಣ

Alovera

ಆಲೋವೆರಾದ ರಸದ ಜೊತೆಗೆ ಮೆಂತ್ಯೇ ಬೀಜವನ್ನು 2 ದಿನ ನೆನೆಸಿ ಇಡಬೇಕು. ನಂತರ 2 ದಿನ ಬಿಟ್ಟು ಅದನ್ನು ಒಣಗಿಸಿ ಪುಡಿಮಾಡಿ ಕೊಬ್ಬರಿ ಎಣ್ನೆಯ ಜೊತೆಯಲ್ಲಿ ಹಾಕಿಇಟ್ಟಿಎರಬೇಕು. ನಂತರ ಈ ಎಣ್ಣೆಯನ್ನು ಪ್ರತೀದಿನ ತಲೆಗೆ ಹಚ್ಚಿಕೊಳ್ಳುವುದರಿಂದ ನೆತ್ತಿ ತಂಪಾಗಿರುತ್ತದೆ ಜೊತೆಗೆ ಕೂದಲು ಕಪ್ಪಾಗಿ, ಮೃದುವಾಗಿ, ಸೊಂಪಾಗಿ ಬೆಳೆಯುತ್ತದೆ.

Aloe Vera

ಆಲೋವೆರಾವನ್ನು ವಣಗಿಸಿ ಚೂರ್ಣ ತಯಾರಿಸಿಕೊಂಡು ಅದಕ್ಕೆ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ಸೇರಿಸಿ ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಮೃದುವಾಗಿ ಹೊಳಪಿನಿಂದ ಕಾಣಿಸುತ್ತದೆ. ಅಲ್ಲದೇ ಆಲೋವೆರಾದ ರಸವನ್ನು ಶೇವಿಂಗ್‌ ಕ್ರೀಮ್‌ ಆಗಿ ಕೂಡ ಬಳಸ ಬಹುದು.

ಇದನ್ನೂ ಓದಿ: ಇನ್ನೇನು ಶುರುವಾಯ್ತು ಚಳಿಗಾಲ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ

(Hidden in aloe vera is the beauty secret of hair)

RELATED ARTICLES

Most Popular