ಭಾನುವಾರ, ಏಪ್ರಿಲ್ 27, 2025
HomeSpecial StoryLife StyleTomato Beauty : ಟೊಮ್ಯಾಟೋ ಬರೀ ತಿನ್ನೋದಕ್ಕಷ್ಟೆ ಅಲ್ಲಾ ಸೌಂದರ್ಯಕ್ಕೂ ದಿವ್ಯ ಔಷಧ

Tomato Beauty : ಟೊಮ್ಯಾಟೋ ಬರೀ ತಿನ್ನೋದಕ್ಕಷ್ಟೆ ಅಲ್ಲಾ ಸೌಂದರ್ಯಕ್ಕೂ ದಿವ್ಯ ಔಷಧ

- Advertisement -

ಟೊಮ್ಯಾಟೋವನ್ನು ಅಡುಗೆಗೆ ಬಳಸಿದ್ದಿರಿ. ಆದರೆ ಸೌಂದರ್ಯವನ್ನು ಹೆಚ್ಚಿಸಲು ಟೊಮ್ಯಾಟೋವನ್ನು ಬಳಸಿದ್ದೀರಾ ? ಹಾಗಾದರೆ ಒಮ್ಮೆ ಟೊಮ್ಯಾಟೋವನ್ನು ಸೌಂದರ್ಯ ಹೆಚ್ಚಿಸಲು ಬಳಸಿ ನೋಡಿ ಇದರ ಉವಯೋಗ ನಿಮಗೆ ತಿಳಿಯುತ್ತದೆ. ಟೊಮ್ಯಾಟೋವನ್ನು ಯಾವರೀತಿ ಬಳಸಬಹುದು ಎಂದು ನಾವು ಹೇಳತ್ತೀವಿ.

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮ್ಯಾಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ ಮಾಡುವ ಮತ್ತು ಚರ್ಮಕ್ಕೆ ಹೊಳಪು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಟೊಮ್ಯಾಟೋ ಹಣ್ಣಿನಲ್ಲಿರುವ ಈ ಗುಣದಿಂದಾಗಿ ಕಣ್ಣಿನ ಸುತ್ತ ಆಗುವ ಕಪ್ಪು ವರ್ತುಲವನ್ನು ನಿವಾರಿಸಬಹುದು.

ಇದನ್ನೂ ಓದಿ: Tips for Hair : ಕೂದಲು ನಯವಾಗಿ ಸೊಂಪಾಗಿ ಬೆಳೆಯಲು ಇಲ್ಲಿದೆ ಟಿಪ್ಸ್

ಟೊಮ್ಯಾಟೋ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ತ್ವಚೆಯನ್ನು ಆಕರ್ಷಕವಾಗಿಸುತ್ತದೆ. ಟೊಮೆಟೋ ರಸಕ್ಕೆ ಅಲೋವೆರಾ ರಸ ಬೆರೆಸಿ ಕಣ್ಣಿನ ತಳಭಾಗಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಯಾಗಿ ಕಣ್ಣುಗಲು ಸುಂದರವಾಗಿ ಕಾಣುತ್ತವೆ.

ಟೊಮ್ಯಾಟೋವನ್ನು ಲಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಳಿಕ ತೊಳೆಯುವುದರಿಂದ ತ್ವಚೆಯ ಸತ್ತ ಕೋಶಗಳು ತೊಲಗಿ ಮುಖ ಹೊಳೆಯುತ್ತದೆ. ಟೊಮ್ಯಾಟೋ ಮತ್ತು ಆಲೂಗಡ್ಡೆಯ ಪೇಸ್ಟ್ ಫೇಶಿಯಲ್ ನಂತೆ ಕೆಲಸ ಮಾಡುತ್ತದೆ. ಇದನ್ನು ವಾರಕ್ಕೊಮ್ಮೆ ಬಳಸಬಹುದು.

ಇದನ್ನೂ ಓದಿ: Beauty Tips with Carrott : ಕ್ಯಾರೆಟ್‌ಗೂ ಸೌಂದರ್ಯಕ್ಕೂ ಇದೆ ನಂಟು : ಅದೇನು ಗೊತ್ತಾ ?

RELATED ARTICLES

Most Popular