ಭಾನುವಾರ, ಜೂನ್ 15, 2025
HomeSpecial StoryLife StyleCucumber For Skin: ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸೌತೆಕಾಯಿ ಪಾತ್ರ ಎಂತದ್ದು ಗೊತ್ತಾ..?

Cucumber For Skin: ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸೌತೆಕಾಯಿ ಪಾತ್ರ ಎಂತದ್ದು ಗೊತ್ತಾ..?

- Advertisement -

Cucumber For Skin: ನೀವು ಸೇವಿಸುವ ಸೌತೆಕಾಯಿಯಲ್ಲಿ 96 ಪ್ರತಿಶತ ನೀರಿನ ಅಂಶವೇ ಇದೆ ಎಂಬುದು ನಿಮಗೆ ತಿಳಿದಿದೆಯೇ…? ಇಷ್ಟೊಂದು ಪ್ರಮಾಣದಲ್ಲಿ ನೀರಿನ ಅಂಶ ಇರುವ ಕಾರಣ ಇದು ನಿಮ್ಮ ಚರ್ಮದ ಆರೈಕೆಯಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ. ಚರ್ಮದ ವಿಚಾರಕ್ಕೆ ಬಂದರೆ ಸೌತೆಕಾಯಿ ಒಂದು ಬೆಸ್ಟ್​ ಮೆಡಿಸಿನ್ ಆಗಿದೆ. ಇದರಲ್ಲಿರುವ ಪೋಷಕಾಂಶ, ಸತ್ವಗಳು ನಿಮ್ಮ ತ್ವಚೆಯನ್ನು ಯಾವೆಲ್ಲ ರೀತಿಯಲ್ಲಿ ಆರೈಕೆ ಮಾಡುತ್ತದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ :

ಹೈಡ್ರೇಷನ್​ : ಚರ್ಮವು ಶುಷ್ಕವಾಯ್ತು ಅಂದರೆ ಏನೆಲ್ಲ ಪ್ರತಿಕೂಲ ಪರಿಣಾಮ ಬೀರುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ ಸರಿ. ನಿಮ್ಮ ತ್ವಚೆಯು ಡ್ರೈ, ರಫ್​ ಹಾಗೂ ಪ್ಯಾಚಿ ಆಗುತ್ತದೆ. ಹೀಗಾಗಿ ಚರ್ಮವು ಸರಿಯಾಗಿ ಉಸಿರಾಡಬೇಕು ಅಂದರೆ ಹೈಡ್ರೇಷನ್​ ಅತ್ಯಂತ ಮುಖ್ಯವಾಗಿದೆ. ಇದಕ್ಕಾಗಿ ನೀವು ಸೌತೆಕಾಯಿಯನ್ನು ಬಳಕೆ ಮಾಡಬಹುದಾಗಿದೆ.

ಸನ್​​ ಬರ್ನ್​ ಕಡಿಮೆ ಮಾಡುತ್ತದೆ :ಸೌತೆಕಾಯಿ ಚರ್ಮದ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ. ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ನಿಮ್ಮ ಚರ್ಮವು ಸುಟ್ಟುಹೋದಾಗ, ಸ್ವಲ್ಪ ಪ್ರಮಾಣದ ಸೌತೆಕಾಯಿ ಜೆಲ್ ನಿಮಗೆ ಪರಿಹಾರವನ್ನು ನೀಡುತ್ತದೆ. ಸುಟ್ಟು ಹೋದ ಭಾಗಗಳನ್ನು ಗುಣಪಡಿಸುವಲ್ಲಿ ಸೌತೆಕಾಯಿ ಪ್ರಮುಖ ಪಾತ್ರ ವಹಿಸುತ್ತದೆ.

ಮೊಡವೆ ಸಮಸ್ಯೆಗೆ ಪರಿಹಾರ: ನಿಮ್ಮ ತ್ವಚೆಯಲ್ಲಿ ಎಣ್ಣೆಯ ಅಂಶವನ್ನು ಸರಿದೂಗಿಸುವಲ್ಲಿ ಸೌತೆಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮ್ಮ ಸ್ಕಿನ್​ ಪೋರ್ಸ್​ನ್ನು ಟೈಟ್​ ಮಾಡುತ್ತದೆ ಇದರಿಂದ ಮೊಡವೆ ನಿಮ್ಮ ಮುಖದತ್ತ ಸುಳಿಯುವುದಿಲ್ಲ.

ತ್ವಚೆಯನ್ನು ಕಾಂತಿಯುತಗೊಳಿಸಲು ಬಳಕೆ ಮಾಡಿ ‘ಮೊಸರು’

ನೀವು ಆಕರ್ಷಕವಾಗಿ ಕಾಣಬೇಕು ಅಂದರೆ ತ್ವಚೆಯ ಆರೈಕೆ ಮಾಡೋದು ಕೂಡ ಅಷ್ಟೇ ಮುಖ್ಯ. ತ್ವಚೆಯನ್ನು ಆರೈಕೆ ಮಾಡೋದು ಕಷ್ಟದ ಕೆಲಸವಾದರೂ ಸಹ ಅದನ್ನು ಅನಿವಾರ್ಯವಾಗಿ ಮಾಡಲೇಬೇಕು. ನಿಮ್ಮ ಒತ್ತಡದ ಜೀವನದ ನಡುವೆಯೂ ತ್ವಚೆಯ ಆರೈಕೆಗೂ ಒಂದಷ್ಟು ಸಮಯ ಮೀಸಲಿಡಬೇಕು. ತ್ವಚೆಯ ಆರೈಕೆಗಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಮೊಸರು ಮಾತ್ರ. ಹೌದು..! ಈ ಸೂಪರ್​ ಫುಡ್​ ತ್ವಚೆಯ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೊಸರಿನಲ್ಲಿರುವ ಲ್ಯಾಕ್ಟಿಕ್​ ಆ್ಯಸಿಡ್​ ತ್ವಚೆಯನ್ನು ಕಾಂತಿಯುತ ಹಾಗೂ ಮೃದುವಾಗಿ ಮಾಡಲು ಸಹಕಾರಿಯಾಗಿದೆ. ಮೊಸರಿನಲ್ಲಿರುವ ಕೊಬ್ಬಿನ ಅಂಶವು ಮುಖದ ಮೇಲಿರುವ ಟ್ಯಾನ್​ ಹಾಗೂ ಸುಕ್ಕುಗಳನ್ನು ನಿವಾರಿಸುತ್ತದೆ. ಅಲ್ಲದೇ ಮೊಡವೆಯನ್ನು ಶಮನ ಮಾಡುವಲ್ಲಿಯೂ ಮೊಸರು ಪ್ರಮುಖ ಪಾತ್ರ ವಹಿಸುತ್ತದೆ.

ಮೊಸರು ಹಾಗೂ ಜೇನುತುಪ್ಪದ ಫೇಸ್​ಪ್ಯಾಕ್​ :
ಜೇನುತುಪ್ಪದಲ್ಲಿ ಚರ್ಮವನ್ನು ಮಾಯಶ್ಚುರೈಸ್​ ಮಾಡುವ ಸಾಮರ್ಥ್ಯವಿದೆ. ಹೀಗಾಗಿ ಮೊಸರನ್ನು ಜೇನುತುಪ್ಪದಲ್ಲಿ ಮಿಶ್ರಣ ಮಾಡಿದರೆ ಇದೊಂದು ಸ್ಕಿನ್​ಕೇರ್​ ಪ್ರಾಡಕ್ಟ್​ ಆಗಲಿದೆ. ನಾರ್ಮಲ್​ ಹಾಗೂ ಡ್ರೈ ಸ್ಕಿನ್​ ಹೊಂದಿರುವವರು ಇದನ್ನು ಫೇಸ್​ ಪ್ಯಾಕ್​ ಆಗಿ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ನೀವು 2 ಚಮಚ ಮೊಸರಿಗೆ 1 ಚಮಚ ಜೇನುತುಪ್ಪವನ್ನು ಹಾಕಿ ಕಲಿಸಿಕೊಳ್ಳಿ. ಈ ಪೇಸ್ಟ್​ನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಮೊಸರು ಹಾಗೂ ಕಡಲೆಹಿಟ್ಟಿನ ಫೇಸ್​ ಪ್ಯಾಕ್​:
ಕಡಲೆ ಹಿಟ್ಟಿಗೆ ತ್ವಚೆಯಲ್ಲಿರುವ ಎಲ್ಲಾ ಕೊಳೆಯನ್ನು ನಿವಾರಿಸುವ ಸಾಮರ್ಥ್ಯವಿದೆ. ಅಲ್ಲದೇ ಇದನ್ನು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ನಾರ್ಮಲ್​ ಅಥವಾ ಆಯಿಲ್​ ಸ್ಕಿನ್​ ಇರುವವರು ಈ ಫೇಸ್ ಪ್ಯಾಕ್​ ಬಳಸಬಹುದು. ಇದಕ್ಕಾಗಿ ನೀವು 2 ಚಮಚ ಮೊಸರಿಗೆ 1 ಚಮಚ ಕಡ್ಲೆ ಹಿಟ್ಟನ್ನು ಹಾಕಿ ಕಲಸಿ. ಇದನ್ನು ದಪ್ಪನೆಯ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.

ಇದನ್ನು ಓದಿ : Coffee Powder Facial: ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ ‘ಕಾಫಿಪೌಡರ್ ಫೇಶಿಯಲ್’

ಇದನ್ನೂ ಓದಿ : ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

Cucumber For Skin: 6 Benefits of Cucumber For Soothing And Hydrating Skin

RELATED ARTICLES

Most Popular