White hair Beauty Tips :ಮುಖದ ಸೌಂದರ್ಯ ಎದ್ದು ಕಾಣಬೇಕು ಅಂದರೆ ಅಲ್ಲಿ ಕೂದಲಿನ ಪಾತ್ರ ಕೂಡ ಬಹುಮುಖ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಕೂದಲು ನೀಳವಾಗಿ, ದಪ್ಪವಾಗಿ ಹಾಗೂ ಕಪ್ಪಾಗಿ ಇರಬೇಕೆಂದು ಬಯಸುತ್ತಾರೆ. ಈ ರೀತಿಯ ಕೂದಲು ಇದ್ದರೆ ಮಾತ್ರ ಮುಖ ಕೂಡ ಸುಂದರವಾಗಿ ಕಾಣಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕೂದಲಿನ ಸಮಸ್ಯೆಯು ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುವುದು ಮಾತ್ರವಲ್ಲದೇ ಕೂದಲಿನ ಹೊಳಪನ್ನು ಸಹ ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಂತೂ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ನೀವು ಸಹ ಬಿಳಿ, ದುರ್ಬಲ ಅಥವಾ ಡ್ರೈ ಹೇರ್ ಹೊಂದಿದ್ರೆ ನೀವು ಚಳಿಗಾಲದಲ್ಲಿ ಈ ಒಂದು ಆಹಾರ ಪದಾರ್ಥವನ್ನು ಸೇವಿಸಿವುದು ಒಳ್ಳೆಯದು.
ಬೆಲ್ಲದ ರುಚಿ ಅಂದರೆ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಚಳಿಗಾಲದಲ್ಲಿ ದೇಹವು ಬೆಚ್ಚಗೆ ಇರಲಿ ಅಂತಾ ಬೆಲ್ಲ ಸೇವಿಸುತ್ತಾರೆ. ಈ ಬೆಲ್ಲವು ಅನೇಕ ಆರೋಗ್ಯ ಸಮಸ್ಯೆ ಗಳನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಬೆಲ್ಲವನ್ನು ಯಾವ ರೀತಿಯಲ್ಲಿ ಸೇವನೆ ಮಾಡಿದರೆ ಏನೆಲ್ಲ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ :
- ಬೆಲ್ಲ ಹಾಗೂ ಮೆಂತೆಯನ್ನು ಒಂದಾಗಿ ಸೇವಿಸಿದರೆ ಕೂದಲು ಬಿಳಿಯಾಗುವುದು ಕಡಿಮೆಯಾಗುತ್ತದೆ.
- ಬೆಲ್ಲ ಹಾಗೂ ಮೆಂತೆಯನ್ನು ತಿನ್ನುವುದರಿಂದ ಕೂದಲು ಬಲವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಅಲ್ಲದೇ ನಿಮ್ಮ ಕೂದಲು ರೇಷ್ಮೆಯಂತೆ ಹೊಳೆಯುತ್ತದೆ. ಅಲ್ಲದೇ ಅತಿ ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಸಹ ಕಡಿಮೆಯಾಗುತ್ತದೆ.
- ಚಳಿಗಾಲದಲ್ಲಿ ಶೀತ ಹಾಗೂ ಜ್ವರವನ್ನು ಕಡಿಮೆ ಮಾಡುವಲ್ಲಿ ಬೆಲ್ಲವು ತುಂಬಾನೇ ಸಹಕಾರಿಯಾಗಿದೆ. ಬೆಲ್ಲ ಹಾಗೂ ಎಳ್ಳು ತಿನ್ನುವುದರಿಂದ ನೀವು ಶೀತದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ. ಬೆಲ್ಲದ ಲಡ್ಡು ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತದೆ.
- ಬೆಲ್ಲ, ಕಲ್ಲುಪ್ಪನ್ನು ಒಟ್ಟಾಗಿ ಸೇವನೆ ಮಾಡುವುದರಿಂದ ಮಲಬದ್ಧತೆ ಅಥವಾ ಆ್ಯಸಿಡಿಟಿಯನ್ನು ಕಡಿಮೆ ಮಾಡಬಹುದಾಗಿದೆ.
- ಬೆಲ್ಲದೊಂದಿಗೆ ಅರಿಶಿಣವನ್ನು ಬೆರೆಸಿ ತಿನ್ನುವುದರಿಂದ ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಆಕ್ಸಿಡಂಟ್ ಲಕ್ಷಣಗಳು ದೇಹದಲ್ಲಿ ಹೆಚ್ಚಾಗುತ್ತದೆ. ಇದು ನಿಮ್ಮನ್ನು ಅನಾರೋಗ್ಯಕ್ಕೆ ಒಳಗಾಗದಂತೆ ರಕ್ಷಿಸುತ್ತದೆ.
ಇದನ್ನು ಓದಿ : celebrates purchase of smartphone : ಮೊಬೈಲ್ ಖರೀದಿಸಿದ ಖುಷಿಗೆ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ..!
ಇದನ್ನೂ ಓದಿ : Skincare Tips : ತ್ವಚೆಯನ್ನು ಕಾಂತಿಯುತಗೊಳಿಸಲು ಬಳಕೆ ಮಾಡಿ ‘ಮೊಸರು’
White hair Beauty Tips : If the hair is turning white before time, then mix it with jaggery and eat this thing,