(Oats Beauty Tips)ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನವರಲ್ಲಿ ಮುಖದ ಮೇಲೆ ಮೊಡವೆ, ಕಲೆ, ಡಾರ್ಕ್ ಸ್ಪಾಟ್ಸ್ ,ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗಳಿಂದ ಹೊರಬರಲು ಓಟ್ಸ್ ಫೇಸ್ ಪ್ಯಾಕ್ ಒಮ್ಮೆ ಟ್ರೈ ಮಾಡಿ ನೋಡಿ. ಈ ಓಟ್ಸ್ ಫೇಸ್ ಫ್ಯಾಕ್ ತಯಾರಿಸಲು ಏನೇನು ಬೇಕು ಮತ್ತು ಹೇಗೆ ತಯಾರಿಸುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.
(Oats Beauty Tips)ಬೇಕಾಗುವ ಸಾಮಾಗ್ರಿಗಳು:
- ಓಟ್ಸ್
- ಹೆಸರುಕಾಳು
- ಬಡೆಸೊಪ್ಪು
- ಕಡ್ಲೆ ಹಿಟ್ಟು
- ಕೇಸರಿ
- ಚಂದನ ಪುಡಿ
- ಅರಿಶಿಣ
- ಗುಲಾಬಿ ಎಸಳಿನ ಪುಡಿ
- ಬೀಟ್ರೂಟ್ ಪುಡಿ
ಮಾಡುವ ವಿಧಾನ:
ಮೊದಲಿಗೆ ಮಿಕ್ಸಿ ಜಾರಿಯಲ್ಲಿ ಓಟ್ಸ್, ಹೆಸರು ಕಾಳು, ಬಡೆ ಸೊಪ್ಪು , ಕೇಸರಿ ಹಾಕಿ ಪುಡಿಮಾಡಿಕೊಳ್ಳಬೇಕು ಬೌಲ್ ನಲ್ಲಿ ಹಾಕಿಕೊಳ್ಳಬೇಕು ನಂತರ ಅದಕ್ಕೆ ಕಡ್ಲೆ ಹಿಟ್ಟು, ಚಂದನ ಪುಡಿ, ಅರಿಶಿಣ, ಗುಲಾಬಿ ಎಸಳಿನ ಪುಡಿ,ಬೀಟ್ರೂಟ್ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಫೇಸ್ ಫ್ಯಾಕ್ ಪುಡಿಯನ್ನು ಹೇಗೆ ಬಳಸಬೇಕು ಎಂಬ ಮಾಹಿತಿಯ ಕುರಿತು ಈ ಕೆಳಗೆ ನೀಡಲಾಗಿದೆ.
ಸತತವಾಗಿ ಎಳು ದಿನಗಳ ವರೆಗೆ ಈ ಪುಡಿಯಿಂದ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಲೇಪನ ಮಾಡಬೇಕು. ಫೇಸ್ ಫ್ಯಾಕ್ ಪುಡಿಯನ್ನು ನಿಮಗೆ ಬೇಕಾದ ಪ್ರಮಾಣದಲ್ಲಿ ಬೌಲ್ ಗೆ ಹಾಕಿಕೊಂಡು ಅದಕ್ಕೆ ರೋಸ್ ವಾಟರ್ ಅಥವಾ ನೀರು ಹಾಕಿ ಮಿಶ್ರಣ ಮಾಡಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಮುಖಕ್ಕೆ ಹಚ್ಚಿಕೊಳ್ಳಬೇಕು. ಅರ್ಧ ಗಂಟೆ ಬಿಟ್ಟು ಮುಖ ತೊಳೆಯುವುದರಿಂದ ಮುಖದಲ್ಲಿರುವ ಮೊಡವೆ, ಕಪ್ಪು ಕಲೆ, ಡಾರ್ಕ್ ಸ್ಪಾರ್ಟ್, ಚರ್ಮದ ಸಮಸ್ಯೆ ಗುಣವಾಗುತ್ತದೆ.
ಇದನ್ನೂ ಓದಿ:Doddapatre Gojju Recipe:ಮನೆಯ ಹಿತ್ತಲಲ್ಲಿ ಬೆಳೆಯುವ ದೊಡ್ಡ ಪತ್ರೆಯ ಗೊಜ್ಜು ಮಾಡುವುದು ಹೇಗೆ?
ಇದನ್ನೂ ಓದಿ:Dates And Almond Recipe:ಖರ್ಜೂರ, ಬಾದಾಮಿ ಉಂಡೆ ಟ್ರೈ ಮಾಡಿ : ಆರೋಗ್ಯ ವೃದ್ದಿಸಿಕೊಳ್ಳಿ
ಇದನ್ನೂ ಓದಿ:Home Remedy:ಮಂಡಿ,ಸೊಂಟ, ಭುಜ ನೋವು ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಮನೆಮದ್ದು ಮಾಹಿತಿ
ಓಟ್ಸ್
ಹೆಂಗಳೆಯರು ತೂಕ ಕಳೆದುಕೊಳ್ಳಲು ಕೆಲವು ಆಹಾರ ಸೇವನೆ ಮಾಡುವ ಹವ್ಯಾಸವನ್ನು ರೂಡಿಸಿಕೊಂಡಿರುತ್ತಾರೆ. ಹೆಚ್ಚಿನವರು ತೂಕ ಇಳಿಸಲು ಪ್ರತಿದಿನ ಓಟ್ಸ್ ತಿನ್ನುತ್ತಾರೆ. ಓಟ್ಸ್ ನಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಫೈಬರ್ ಅಂಶ ಸಮೃದ್ದವಾಗಿರುವುದರಿಂದ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಉತ್ತಮ ಜೊತೆಗೆ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ರಾತ್ರಿ ನೀರಲ್ಲಿ ನೆನಸಿಟ್ಟುಕೊಂಡು ಬೆಳಿಗ್ಗೆ ಮುಖ ತೊಳೆಯುವಾಗ ಈ ಬಾದಾಮಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಅದಕ್ಕೆ ಪುಡಿಮಾಡಿಕೊಂಡ ಓಟ್ಸ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದರೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
Oats Beauty Tips Oats face pack increases the beauty of the face