ಸೋಮವಾರ, ಏಪ್ರಿಲ್ 28, 2025
HomeSpecial StoryLife StyleWinter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

Winter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

- Advertisement -

Winter Hair Care Tips :ಚಳಿಗಾಲದಲ್ಲಿ ನೀವು ಕೂದಲಿನ ಆರೈಕೆಯನ್ನು ಎಷ್ಟು ಮಾಡಿದರೂ ಸಹ ಅದು ಕಡಿಮೆಯೇ. ಕೂದಲಿನ ಆರೈಕೆ ಸರಿಯಾಗಿ ಆಗದೇ ಇದ್ದಲ್ಲಿ ಕೂದಲು ಉದುರುವಿಕೆ ಪ್ರಮಾಣ ಕಡಿಮೆಯಾಗುತ್ತಲೇ ಹೋಗುತ್ತದೆ. ಹೀಗಾಗಿ ನೀವು ಹೇರ್​ ಕೇರ್​ ಮಾಡುವುದು ತುಂಬಾನೇ ಮುಖ್ಯವಾಗಿದೆ. ಇದಕ್ಕಾಗಿ ನೀವು ಕೂದಲಿಗೆ ಬಳಸುವ ಉತ್ಪನ್ನ ಹಾಗೂ ಆಹಾರ ಕ್ರಮದ ಬಗ್ಗೆ ಅತಿಯಾಗಿ ಎಚ್ಚರಿಕೆ ವಹಿಸುವುದು ಅಗತ್ಯ.
ಆದರೆ ಚಳಿಗಾಲದಲ್ಲಿ ಕೂದಲಿನ ನಿರ್ವಹಣೆ ಇನ್ನಷ್ಟು ಕಷ್ಟವಾಗಿದೆ. ಚಳಿಗಾಲಯದ ಸಮಯದಲ್ಲಿ ಹೆಚ್ಚಾಗಿ ಕಾಡುವ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಪಾರಾಗಲು ನೀವು ಟ್ರೈ ಮಾಡಬಹುದಾದ ಕೆಲವು ಮನೆ ಮದ್ದುಗಳು ಇಲ್ಲಿವೆ ನೋಡಿ.


ಕೊಬ್ಬರಿ ಎಣ್ಣೆ ಬಳಸಿ :
ಆರೋಗ್ಯಕರ ಕೂದಲಿಗಾಗಿ ನೀವು ಮೊದಲು ಹಾಗೂ ಅವಶ್ಯಕವಾಗಿ ಮಾಡಬೇಕಾದ ಕೆಲಸವೆಂದರೆ ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡುವುದು. ನೀವು ಕೊಬ್ಬರಿ ಎಣ್ಣೆ, ನಾಲ್ಕೈದು ಹನಿ ನಿಂಬೆ ರಸ ಹಾಗೂ ಲ್ಯಾವೆಂಡರ್​ ಎಣ್ಣೆಯನ್ನು ಮಿಶ್ರಣ ಮಾಡಿ ಹೇರ್​ ಪ್ಯಾಕ್​ ಮಾಡಿಕೊಳ್ಳಿ. ಇದನ್ನು ನಿಮ್ಮ ತಲೆಗೆ ಹಚ್ಚಿಕೊಂಡು ನಾಲ್ಕೈದು ಗಂಟೆಗಳ ಕಾಲ ಹಾಗೆಯೇ ಬಿಡಿ. ಬಳಿಕ ಅದನ್ನು ಶುದ್ಧವಾದ ಹಾಗೂ ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.


ಶುಷ್ಕವಾದ ಕೂದಲನ್ನು ಹೊಂದಿರುವವರಂತೆಯೇ ಎಣ್ಣೆಯುಕ್ತ ಕೂದಲನ್ನು ಹೊಂದಿರುವವರೂ ಸಹ ಕಂಡಿಷನರ್​ ಬಳಕೆ ಮಾಡುವುದು ಅವಶ್ಯಕವಾಗಿದೆ . ಇದಕ್ಕಾಗಿ ನೀವು ರಾತ್ರಿ ವೇಳೆ ತಾಮ್ರದ ಪಾತ್ರೆಯಲ್ಲಿ ಎಲೆಕೋಸು ಹಾಗೂ ಈರುಳ್ಳಿಯನ್ನು ತುರಿದು ಇಡಿ. ಈರುಳ್ಳಿ ವಾಸನೆಯನ್ನು ಹೋಗಲಾಡಿಸಲು ನೀವು ಬೇಕಾದಲ್ಲಿ ಗಿಡಮೂಲಿಕೆಯ ಎಣ್ಣೆಯನ್ನು ಹಾಕಬಹುದು. ಇದನ್ನು ಬೆಳಗ್ಗೆ ತಲೆಗೆ ಹಚ್ಚಿಕೊಳ್ಳಿ. ಮೂವತ್ತು ನಿಮಿಷ ಬಿಟ್ಟು ಕೂದಲನ್ನು ತೊಳ್ಳೆಯಿರಿ. ವಾರದಲ್ಲಿ ಒಂದು ಬಾರಿಯಾದರೂ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.


ಮನೆಯಲ್ಲೇ ತಯಾರಿಸಿ ಹೇರ್ ಕ್ಲೆನ್ಸರ್​:
2 ಚಮಚ ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಇದನ್ನು ಪೇಸ್ಟ್​ ಮಾಡಿ. ಈ ಪೇಸ್ಟ್​​ಗೆ ನಿಂಬೆ ರಸವನ್ನು ಸೇರಿಸಿ ಹಾಗೂ ತಲೆಗೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಸೀಗೆಕಾಯಿ ಪುಡಿಯನ್ನು ಬಳಸಿ ಕೂದಲನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿ.

Winter Hair Care Tips: Home Remedies to Deal With Oily Hair

ಇದನ್ನು ಓದಿ : Skincare Tips : ತ್ವಚೆಯನ್ನು ಕಾಂತಿಯುತಗೊಳಿಸಲು ಬಳಕೆ ಮಾಡಿ ‘ಮೊಸರು’

ಇದನ್ನೂ ಓದಿ : Coffee Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು

RELATED ARTICLES

Most Popular