ಹಾಲಾಡಿ: (Marikanu Temple) ಶ್ರೀ ಕ್ಷೇತ್ರ ಮಾರಿಕಾನು ದುರ್ಗಾಪರಮೇಶ್ವರಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಹಾಲಾಡಿಯಲ್ಲಿ ಮುಷ್ಠಿ ಕಾಣಿಕೆ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ.
ಕುಂದಾಪುರ ತಾಲೂಕಿನ ಮಾರಿಕಾನು ದುರ್ಗಾಪರಮೇಶ್ವರಿ ದೇವಾಲಯವು (Marikanu Temple) ತುಂಬಾ ಹಳೆಯ ದೇವಸ್ಥಾನವಾಗಿದ್ದು, ದುರ್ಗಾಪರಮೇಶ್ವರಿ ದೇವರು ಇಲ್ಲಿ ನೆಲೆಸಿದ್ದಾಳೆ. ಹಲವು ವರ್ಷಗಳಿಂದಲೂ ದೇವಸ್ಥಾನವ ಶಿಥಿಲಾವಸ್ಥೆಯಲ್ಲಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದೇವಸ್ಥಾನ ಮಂಡಳಿಯವರು ಆಲೋಚನೆಗಳನ್ನು ನಡೆಸುತ್ತಿದ್ದು, ಈ ಭಾರೀ ದೇವಸ್ಥಾನವನ್ನು ನೂತನವಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಹಿಂದೆ ಚಂತಿಸಲ್ಪಟ್ಟ ಅಷ್ಟಮಂಗಲ ಪ್ರಶ್ನೆಯ ರೀತ್ಯಾ ಪ್ರಾಯಶ್ಚಿತ ಕರ್ಮಾಂಗಗಳನ್ನು ನಡೆಸುವುದಾಗಿ ದೇವಿಯ ಪ್ರೇರಣೆಯಂತೆ ದೇವಸ್ಥಾನ ಮಂಡಳಿಯ ಅರ್ಚಕ ವೃಂದದವರು ಸಂಕಲ್ಪಿಸಿದ್ದು, ಇದರ ಅಂಗವಾಗಿ 04-12-2022 ರ ಭಾನುವಾರದಂದು ಮುಷ್ಠಿ ಕಾಣಿಕೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರುತ್ತಿದೆ.

ಇದನ್ನೂ ಓದಿ : Shri Kshetra Kamalashile: ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರವಾದ ಈ ಕ್ಷೇತ್ರದ ಬಗ್ಗೆ ನೀವು ತಿಳಿಯಲೇ ಬೇಕು
ಇದನ್ನೂ ಓದಿ : Neelavara kshethra: ಶಂಕಚೂಡನ ಪಂಚಮ ಪುತ್ರಿಯಾದ ನಾಗರತಿ ಮಹಿಷಮರ್ಧಿನಿಯಾಗಿ ನೆಲೆನಿಂತ ಕಥೆ..!
ಇದನ್ನೂ ಓದಿ : Idagunji ganapathi: 1500 ವರ್ಷಕ್ಕೂ ಹಳೆಯದಾದ ದೇವಾಲಯದ ಪೌರಾಣಿಕ ಹಿನ್ನಲೆಯನ್ನು ನೀವು ಬಲ್ಲಿರಾ..?
ಇದನ್ನೂ ಓದಿ : Indrani Shakthi peeta: ಉಡುಪಿಯ ಶಕ್ತಿ ಪೀಠಗಳಲ್ಲೊಂದಾದ ಇಂದ್ರಾಣಿ ಶಕ್ತಿಪೀಠದ ಬಗ್ಗೆ ಒಂದಿಷ್ಟು ಮಾಹಿತಿ ನಿಮ್ಮ ಮುಂದೆ…
ಇನ್ನೂ ಇದೇ ಶುಕ್ರವಾರ ಹಾಗೂ ಶನಿವಾರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಅಂಗವಾಗಿ ಹಲವು ಪೂಜಾ ಕೈಂಕರ್ಯಗಲೂ ಕೂಡ ನೆರವೇರಲಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಯು ಊರ ಹಾಗೂ ಪರ ಊರ ಭಕ್ತರಿಂದ ಸಹಾಯ ಹಸ್ತವನ್ನು ಅಪೇಕ್ಷಿಸುತ್ತಿದ್ದಾರೆ.
(Marikanu Temple) As part of the comprehensive restoration of Sri Kshetra Marikanu Durgaparameshwari Temple, a fist offering program will be held in Haladi and a food offering program will be held in the afternoon.