(Sonithapura) ಇದು ಇತಿಹಾಸ ಪ್ರೀಯರಿಗಷ್ಟೇ , ಶಿಲ್ಪಕಲೆಗಳ ತವರು ಎಂದೇ ಪ್ರಸಿದ್ಧಿಯಾದ ನಾಡು ನಮ್ಮದು .ಅಂತೆಯೆ ಅನೇಕ ರೀತಿಯ ವಿಚಿತ್ರವಾದ , ಅಪರೂಪವಾದ ಕಲಾಕ್ರತಿಗಳು , ಶಾಸನಗಳು ಈ ಮಣ್ಣಿನಲ್ಲಿವೆ . ಅಂತಹದೆ ಒಂದು ವಿಶೇಷವಾದ ಶಾಸನವೊಂದನ್ನು ಹೊಂದಿದ ಒಂದು ದೇವಸ್ಥಾನದ ಬಗ್ಗೆ ಇಲ್ಲಿ ತಿಳಿಯೋಣ .
ಇದು ಪ್ರಕೃತಿಯ ಮಡಿಲಲ್ಲಿ ಗುಡ್ಡ ಕಾಡುಗಳ ಮದ್ಯೇ ಒಂದು ಚಿಕ್ಕ ಹಳ್ಳಿ(Sonithapura)ಯಲ್ಲಿರುವ ಅತೀ ಪುರಾತನ ದೇವಾಲಯ . ಪರಶುರಾಮನ ಕ್ಷೇತ್ರದಲ್ಲಿ ಬಬ್ರುವಾಹನನ ಆಳ್ವಿಕೆಯ ಕಾಲದಲ್ಲಿ ಅಂದರೆ ಸುಮಾರು 500 ತಲೆಮಾರುಗಳ ಹಿಂದೆ ನಿರ್ಮಾಣವಾದ ಅತ್ಯಂತ ಹಳೆಯ ದೇವಾಲಯ ಇದಾಗಿದೆ. ಶ್ರೀ ವಿಷ್ಣುಮೂರ್ತಿ ದೇವರು ತನ್ನ ಸಹಪರಿವಾರದೊಂದಿಗೆ ನೆಲೆಸಿದ ಅತೀ ಪುರಾತನ ಕ್ಷೇತ್ರ ಇದಾಗಿದ್ದು, ಗಣಪತಿ, ಬೊಬ್ಬರ್ಯ ಹಾಗೂ ಅನೇಕ ಗಣಗಳು ಇಲ್ಲಿ ನೆಲೆಸಿದ್ದಾರೆ.

ಇಲ್ಲಿನ ಒಂದು ವಿಶೇಷತೆ ಏನೆಂದರೆ , ಈ ದೇವಾಲಯದ ಹೊರ ವಲಯದಲ್ಲಿ ಒಂದು ಬಲಿಕಲ್ಲು ಇದೆ . ಇದರ ಮೇಲೆ ಶಿಲ್ಪಿಗಳು ಶಾಸನವನ್ನು ಕೆತ್ತಿದ್ದಾರೆ. ವಿಶೇಷವೇನೆಂದರೆ ಈ ಶಾಸನವನ್ನು ಯಾರಿಗೂ ಓದಲಾಗುವುದಿಲ್ಲ .ಕೆಲವೇ ಕೆಲವರಿಗೆ ಮಾತ್ರ ಈ ಶಾಸನವನ್ನು ಓದಲಾಗುವುದು . ಹಲವಾರು ಮಂದಿ ಈ ಶಾಸನವನ್ನು ಓದಲು ಪ್ರಯತ್ನ ಪಟ್ಟಿದ್ದು ಯಾರಿಗೂ ಆ ಶಾಸನ ಕಾಣಿಸಿಕೊಂಡಿಲ್ಲ ಎಂದು ಇಲ್ಲಿನ ಸ್ಥಳೀಯರು ತಿಳಿಸಿದ್ದಾರೆ . ಆ ಶಾಸನವನ್ನು ಓದಿದವರು ನೂರರಲ್ಲಿ ಒಂದಿಬ್ಬರು ಮಾತ್ರ . ಆದರೆ ಅದಕ್ಕೆ ಕಾರಣ ಇನ್ನೂ ಯಾರಿಗೂ ತಿಳಿಯದಿರುವುದು ಆಶ್ಚರ್ಯ. ಇದು ದೇವರ ಪವಾಡವೋ ಅಥವಾ ಶಿಲ್ಪಿಗಳ ಬುದ್ಧಿವಂತಿಕೆಯ ಪರಾಕಾಷ್ಟೆಯೋ ತಿಳಿದಿಲ್ಲ .

1992 ರಲ್ಲಿ ವಿಶ್ವೇಶ್ವರ ಸೋಮಯಾಜಿ ಮತ್ತು ದಂಪತಿಗಳು ಈ ದೇವಾಲಯದ ಪುನರ್ ಪ್ರತಿಷ್ಠೆಯನ್ನು ಮಾಡಿದ್ದು, ನಂತರ 2020 ರಲ್ಲಿ ಇನ್ನೊಂದು ಬಾರಿ ಇದರ ಪುನರ್ ಪ್ರತಿಷ್ಠೆಯನ್ನು ಊರ ಜನರು ಮುಂದಾಗಿ ನೆರವೇರಿಸಿದ್ದಾರೆ .
ಈ ದೇವಾಲಯದ ಪಕ್ಕದಲ್ಲಿ ಒಂದು ಕೆರೆ ಕೂಡ ಇದ್ದು, ಇದು ತುಂಬಾ ವಿಶಾಲವಾದದ್ದು. ಎಕರೆಗಟ್ಟಲೆ ಜಾಗವನ್ನು ಆಕ್ರಮಿಸಿಕೊಂಡಿದೆ . ಸೋಣುಕೆರೆ ಅಂತ ಕರೆಸಿಕೊಳ್ಳುವ ಈ ಕೆರೆಯ ಇತಿಹಾಸ ಹಿರಿದು , ಮತ್ತು ಇದು ಕಂಚಿನ ಕೊಳವೆ ಅಳವಡಿಸಿದ ಕೆರೆಯಾಗಿದೆ. ಆದರೆ ಇದೀಗ ಕೆರೆಯಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಕೆರೆಯ ಸೌಂದರ್ಯ ಹಾಳಾಗಿರುವುದು ವಿಷಾದದ ವಿಷಯ.

ಈ ದೇವಸ್ಥಾನಕ್ಕೆ ಸಂಬಂಧ ಪಟ್ಟಂತೆ ಮಾರ್ಲಾಡಿ ಗುಡ್ಡೆಯ ಮೇಲೆ ಒಬ್ಬ ಖರೇಶ್ವರ ದೇವರು ನೆಲೆಸಿದ್ದಾನೆ. ಡೀಮ್ಡ್ ಫಾರೇಸ್ಟ್ ನಡುವೆ ಒಬ್ಬ ಅನಾಥ ಶಿವ . ಬಯಲನ್ನೇ ಆಲಯ ಮಾಡಿಕೊಂಡು ಕಲ್ಲಿನೊಳಗರಳಿದ ಶಿವನ ಬಗ್ಗೆ ಅಧ್ಯಯನ ಪ್ರೀಯರು ಅಧ್ಯಯನ ನಡೆಸಿದರೆ ಹಲವು ಮಹತ್ವದ ವಿಷಯಗಳು ಸಿಗಬಹುದು . ಅರೆಕಲ್ಲಿನ ಮೇಲೆ ಅರಳಿದ ಶಿವ ಪ್ರಕೃತಿ ಪ್ರೀಯರು ಕಲ್ಲನ್ನು ಕಡಿಯಬಾರದೆಂದು ಕೆತ್ತಿದ ಶಿಲ್ಪವೋ , ದನ ಮೇಯಿಸಲು ಬಂದ ಮಕ್ಕಳಾಡಿದ ಆಟವೋ , ಪರಿಸರ ಕಾಳಜಿಯಿಂದ ಮೂಡಿದ ದೇವನೋ ತಿಳಿದಿಲ್ಲ. ಈ ಲಿಂಗದ ಹಿಂದೆ ಒಂದು ಸಣ್ಣ ನೀರಿನ ಚಿಲುಮೆಯೊಂದು ಇದ್ದು ಅದು ಮಣ್ಣಿನಿಂದ ಮುಚ್ಚಿದೆ . ಇದರ ಪಕ್ಕದಲ್ಲಿ ನೀರಿನ ಒರತೆಯಿದ್ದು , ಈ ಜಾಗವನ್ನು ಹಾರೆ ಗುದ್ದಲಿಯಿಂದ ಅಗೆಯುವಂತಿಲ್ಲ ಎಂಬುದು ಸ್ಥಳೀಯರ ನಂಬಿಕೆ . ಸ್ಥಳೀಯರ ಬಾಯಲ್ಲಿ ಇದರ ಬಗ್ಗೆ ಹಲವು ಕತೆಗಳಿವೆ. ಪುರಾಣೋಕ್ತ, ಹಿನ್ನಲೆಯ ಕತೆಗಳೂ ಇವೆ .

ಇನ್ನು ವಿಷ್ಣುಮೂರ್ತಿ ದೇವಾಲಯದಲ್ಲಿ ಬಹಳ ಹಿಂದೆ ವರ್ಷಂಪ್ರತಿ ಜಾತ್ರೆ ಕೂಡ ನಡೆಯುತಿತ್ತು. ಅದೇ ಜಾತ್ರಾ ಸಮಯದಲ್ಲಿ ಜಾತ್ರೆಯ ತೇರು ಆಕಸ್ಮಿಕವಾಗಿ ಸೋಣು ಕೆರೆಗೆ ಬಿದ್ದು ಅಂದಿನಿಂದ ಕ್ಷೇತ್ರದಲ್ಲಿ ಜಾತ್ರೆಯನ್ನು ನಡೆಸಲಾಗುವುದಿಲ್ಲ. ಇಂದಿಗೂ ಕೂಡ ಆ ತೇರು ಅದೇ ಕೆರೆಯಲ್ಲಿ ಇದೆ ಎಂದು ಊರಿನವರು ತಿಳಿಸಿದ್ದಾರೆ. ಇದರ ಬಗ್ಗೆ ಮಾಹಿತಿ ಹುಡುಕಲು ಹೊರಟರೆ ಹಲವಾರು ಪ್ರಶ್ನೆಗಳಿಗೆ ಅನುವು ಮಾಡಿ ಕೊಡುತ್ತದೆ . ಹಾಗಾಗಿ ಇಲ್ಲಿನ ಕೆಲವು ವಿಷಯಗಳು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ. ಇನ್ನೂ ಈ ದೇವಾಲಯದಲ್ಲಿ ಪ್ರತಿ ಸಂಕ್ರಾಂತಿಗೆ ಸಂಕ್ರಾಂತಿ ಪೂಜೆ, ರಂಗಪೂಜೆ ಹಾಗೂ ವಿಶೇಷ ದಿನಗಳಲ್ಲಿ ವಿಶೇಷವಾಗಿ ಪೂಜೆಯನ್ನು ನೆರವೇರಿಸಲಾಗುತ್ತದೆ . ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಇಲ್ಲಿ ಯಕ್ಷಗಾನ ಸೇವೆ ಕೂಡ ವಿಜೃಂಭಣೆಯಿಂದ ನಡೆಯುತ್ತದೆ .

ಇದು ಇರುವುದು ಸಿದ್ಧಾಪುರ ಗ್ರಾಮದ ಒಂದು ಪುಟ್ಟ ಊರು ಸೋಣಿ ಎಂಬಲ್ಲಿ . ಶಂಕರನಾರಾಯಣದಿಂದ 7 ಕಿ.ಮೀ. ದೂರದಲ್ಲಿ ಗುಡ್ಡಗಾಡು ಪ್ರದೇಶಗಳ ಮಧ್ಯೆ ಈ ದೇವಾಲಯವಿದೆ. ಶಂಕರನಾರಾಯಣದಿಂದ ಸಿದ್ಧಾಪುರ ಮಾರ್ಗವಾಗಿ ಹೋಗುವಾಗ ಶಂಕರನಾರಾಯಣ ಕಾಲೇಜು ಎದುರುಗಡೆ ಅಡ್ಡ ದಾರಿ ಹಿಡಿದು ಮುಂದೆ ಶ್ರೀ ವಿಷ್ಣುಮೂರ್ತಿ ಸಹಪರಿವಾರ ದೇವಸ್ಥಾನ ಸೋಣಿತಾಪುರ ದೇವಾಲಯ ಸಿಗುತ್ತದೆ .
ಇದನ್ನೂ ಓದಿ : History of Barkur: ಒಂದೊಂದು ಕಲ್ಲುಗಳು ಸಾರುತ್ತವೆ ಬಾರ್ಕೂರಿನ ಇತಿಹಾಸ
ಇದನ್ನೂ ಓದಿ : Special Story: ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಣ್ಣು ತೆರೆದ ಶಿವ: ಹರಿದು ಬರುತ್ತಿದೆ ಜನಸಾಗರ
ನೀವೂ ಒಮ್ಮೆ ಬೇಟಿ ಕೊಡಿ , ನಿಮ್ಮವರನ್ನು ಕರೆತನ್ನಿ.
(Sonithapura) This is a land known only for history lovers, as the home of sculptures. There are many types of strange, rare artefacts and inscriptions in this soil. Let us know about a temple with such a special inscription here.