ಗಣಪತಿ, ಗಣೇಶ, ವಿಘ್ನವಿನಾಯಕ ಅದೆಷ್ಟು ಹೆಸರುಗಳೋ. ಯಾವುದೇ ಕಾರ್ಯ ಆರಂಭಕ್ಕೆ ಇವನ ಆಶೀರ್ವಾದ ಇಲ್ಲ ಅಂದ್ರೆ ಅಂತಹ ಕಾರ್ಯ ನಿರ್ವಿಘ್ನವಾಗಿ ನೆರವೇರಲ್ಲ ಅನ್ನೋದು ಮಾತು. ಆದ್ರೆ ಇವನ್ನನು ನೆನೆದ್ರೆ ವಿಘ್ನಗಳೆಲ್ಲಾ ಮಾಯವಾಗುತ್ತೆ.ಹೌದು , ಇಲ್ಲೊಂದು ವಿಘ್ನವಿನಾಯಕನ ದೇವಾಲಯವಿದೆ. ಆದ್ರೆ ಈ ದೇವಾಲಯ ಉಳಿದ ಗಣೇಶನ ದೇವಾಲಯಕ್ಕಿಂತ ಬಿನ್ನ. ಇಲ್ಲಿ ವಿಘ್ನ ವಿನಾಶಕ ಪ್ರಕೃತಿಯನ್ನೆ ಮನೆ ಮಾಡಿ ನೆಲೆಸಿದ್ದಾನೆ. ಬಯಲೇ ಇವನ ಗುಡಿ ( Sowthadka Shri Maha Ganapathi ). ಯಾಕಂದ್ರೆ ಈ ಗಣೇಶನಿಗೆ ಯಾವುದೇ ಗುಡಿ ಇಲ್ಲ.

ಈ ಗಣೇಶನ ಹಲವಾರು ವರ್ಷಗಳಿಂದ ಬಯಲಲ್ಲೇ ನೆಲೆಸಿದ್ದಾನೆ . ಅಲ್ಲೇ ಆತನಿಗೆ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಭಕ್ತರು ಅಲ್ಲೇ ಬಂದು ಆತನಲ್ಲಿ ತಮ್ಮ ಇಷ್ಟಾರ್ಥಗಳನ್ನು ಕೇಳುತ್ತಾರೆ. ಎಲ್ಲಾ ಋತುಗಳಲ್ಲಿ ಈತ ಪ್ರಕೃತಿಗೆ ಮೈಯೊಡ್ಡಿ ಇರುತ್ತಾನೆ.

ಈ ಗಣೇಶ ಹೀಗೆ ಇರೋದಕ್ಕೆ ಕಾರಣವಿದೆ ಸುಮಾರು 800 ವರ್ಷಗಳ ಹಿಂದೆ ರಾಜವಂಶವೊಂದಕ್ಕೆ ಈ ದೇವಾಲಯ ಸೇರಿತ್ತು . ಆದ್ರೆ ಶತ್ರುಗಳ ಆಕ್ರಮಣಕ್ಕೆ ತುತ್ತಾದ ಈ ದೇವಾಲಯ ನಾಶವಾಯಿತು. ಕಾಲಾನಂತರ ಸ್ಥಳೀಯ ಗೋಪಾಲಕರಿಗೆ ಈ ವಿಗ್ರಹವು ಕಾಣಿಸಿಕೊಂಡಿತು. ಅವರು ಮರದ ಕೆಳಗೆ ಇದನ್ನು ಪ್ರತಿಷ್ಟಾಪಿಸಿದರು. ನಂತರ ಅಲ್ಲೇ ಇದ್ದ ಸೌತೆ ಯನ್ನು ಪ್ರಸಾದವಾಗಿ ಅರ್ಪಿಸುತ್ತಿದ್ರು ಎನ್ನಲಾಗುತ್ತೆ.

ಕಾಲಾನಂತರ ಇಲ್ಲಿ ಸ್ಥಳೀಯರೊಬ್ಬರು ದೇವಾಲಯವನ್ನು ಕಟ್ಟಲು ನಿರ್ಧರಿಸಿದ್ರು. ಆದ್ರೆ ಅವರ ಕನಸಲ್ಲಿ ಗಣಪತಿಯು ದನಕಾಯುವ ಬಾಲಕನ ರೂಪದಲ್ಲಿ ಬಂದು ದೇವಾಲಯವನ್ನು ನಿರ್ಮಿಸುವುದೇ ಆದರೆ, ಅದರ ಗೋಪುರವನ್ನು ರಾತ್ರಿ ಬೆಳಗಾಗುವುದರೊಳಗೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣಿಸುವಷ್ಟು ಎತ್ತರಕ್ಕೆ ಕಟ್ಟಬೇಕು ‘ ಎಂದು ಹೇಳಿದನಂತೆ . ಹೀಗಾಗಿ ಇದು ಅಸಾಧ್ಯದ ಕೆಲಸ ಎಂದು ಮನಗಂಡ ಸ್ಥಳೀಯರು ದೇವಾಲಯ ಕಟ್ಟುವ ಯೋಜನೆಯನ್ನು ಕೈ ಬಿಟ್ಟರು.

ಗಂಟೆ ಕಟ್ಟಿದ್ರೆ ಇಷ್ಟಾರ್ಥ ಈಡೇರಿಸುತ್ತಾನೆ ಗಣೇಶ (Sowthadka Shri Maha Ganapathi )
ಇಲ್ಲಿನ ಮತ್ತೊಂದು ವಿಶೇಷವೆಂದ್ರೆ ದೇವಾಲಯದ ಆವರಣದಲ್ಲಿ ಕಾಣಸಿಗುವ ಗಂಟೆಗಳು . ಹೌದು ಇಲ್ಲಿ ಗಂಟೆಯೇ ಗಣೇಶನಿಗೆ ಹರಕೆ . ಇಲ್ಲಿ ಗಂಟೆಗಳನ್ನು ಕಟ್ಟಿದ್ರೆ ಎಲ್ಲಾ ಇಷ್ಟಾರ್ಥ ಈಡೇರುತ್ತೆ ಅನ್ನೋ ನಂಬಿಕೆ ಇದೆ. ಕೇವಲ ಎರಡು ತಿಂಗಳಲ್ಲೇ ಹರಕೆ ನಿಜವಾಗುತ್ತೆ ಅಂತಾರೆ ಭಕ್ತರು . ಹೀಗೆ ಭಕ್ತರು ಕಟ್ಟಿದ ಸಾವಿರಾರು ಗಂಟೆಗಳು ಗಣೇಶನ ಅನುಗ್ರಹಕ್ಕೆ ಸಾಕ್ಷಿಯಾಗಿದೆ.

ವಿದ್ಯೆ, ಹಣದ ಸಮಸ್ಯೆ, ಮನೆಕಟ್ಟುವ ಕನಸು, ಸಂತಾನ ಭಾಗ್ಯ ಹೀಗೆ ತಮ್ಮ ಕಷ್ಟಗಳನ್ನು ಹೇಳೋಕೆ ಭಕ್ತರು ಗಣೇಶನಲ್ಲಿಗೆ ಬರುತ್ತಾರೆ . ಇನ್ನು ನಿತ್ಯ ಪೂಜೆ ನಡೆಯುವುದು ಈ ಗಣೇಶನ ಬಯಲು ಆಲಯದಲ್ಲಿ ಆದ್ರಿಂದ ಅಲ್ಲಿ ಗಾಳಿ ಮಳೆ ಅಂತ ಇದ್ದೇ ಇರುತ್ತೆ .ಆದ್ರೂ ಇವತ್ತಿನ ವರೆಗೆ ಇಲ್ಲಿ ಆರತಿ ಮಾಡುವಾಗ ಒಂದು ದಿನವೂ ದೀಪ ಆರಿಲ್ಲ ಅಂತಾರೆ ಭಕ್ತರು.

ಇನ್ನು ಇಲ್ಲಿನ ಮತ್ತೊಂದು ವಿಶೇಷ ಅಂದ್ರೆ ಅವಲಕ್ಕಿ, ಎಳ್ಳು, ಬೆಲ್ಲ, ಜೇನುತುಪ್ಪ ಹಾಗೂ ಬಾಳೆಹಣ್ಣು ಹಾಕಿ ಮಾಡುವ ಪಂಚಕಜ್ಜಾಯ ಸೇವೆ. ಇಲ್ಲಿಗೆ ಬಂದವರು ಈ ಪ್ರಸಾದವನ್ನು ಸವಿಯದೇ ಹೋಗೋದಿಲ್ಲ . ಈ ಸೇವೆಯನ್ನು ಮಾಡಿಸುವವರು, ಪ್ರಸಾದಲ್ಲಿ ಅಲ್ಪವನ್ನು ಅಲ್ಲಿ ದನಕಾಯುವವರಿಗೂ ಹಂಚಬೇಕು.

ಅಂದಹಾಗೆ ಈ ದೇವಾಲಯವಿರೋದು ( Sowthadka Shri Maha Ganapathi) ಎಲ್ಲಿ ಗೊತ್ತಾ? ದಕ್ಷಿಣ ಕನ್ನಡದ ಧರ್ಮಸ್ಥಳದ ಸಮೀಪವಿರುವ ಸೌತಡ್ಕದಲ್ಲಿ . ಇದು ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯ.

ಧರ್ಮಸ್ಥಳದಿಂದ ಸುಮಾರು ೮ ಕಿಲೋ ಮೀಟರ್ ದೂರದಲ್ಲಿದೆ ಈ ದೇವಾಲಯ . ಇಲ್ಲಿಗೆ ಬಸ್ ವ್ಯವಸ್ಥೆ ಕೂಡಾ ಇದೆ. ಸಾಧ್ಯವಾದ್ರೆ ಧರ್ಮಸ್ಥಳಕ್ಕೆ ಹೋಗೋವಾಗ ಇಲ್ಲಿಗೂ ಭೇಟಿ ನೀಡಿ.
ಇದನ್ನೂ ಓದಿ : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ
ಇದನ್ನೂ ಓದಿ : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ : ನೋಡೋಕೆ ಹೋದವರಿಗೆ ಏನಾಗುತ್ತೆ ?
( Sowthadka Shri Maha Ganapathi Temple hour Ganesh fulfills his wish)