ಮಂಗಳವಾರ, ಜೂನ್ 17, 2025
HomeSpecial Storyಈ ಮಹಾತಾಯಿಗೆ 22 ಮಕ್ಕಳು ! ಹೇಗಿದೆ ಗೊತ್ತಾ ಇವರ ಐಷಾರಾಮಿ ಬದುಕು ...

ಈ ಮಹಾತಾಯಿಗೆ 22 ಮಕ್ಕಳು ! ಹೇಗಿದೆ ಗೊತ್ತಾ ಇವರ ಐಷಾರಾಮಿ ಬದುಕು ?

- Advertisement -

ಇತ್ತೀಚಿನ ದಿನದಲ್ಲಿ 2 ಮಕ್ಕಳು ಸಾಕು ಎಂದು ಸರ್ಕಾರವೇ ಹೇಳಿದೆ. ಆದರೂ ಹೆಚ್ಚಿನ ಜನರು ಒಂದೇ ಮಗು ಸಾಕು ಸಾಕಪ್ಪ ಸಾಕು ಅಂತಿದೆ. ಅದ್ರಲ್ಲೂ ವಿದ್ಯಾವಂತರಂತೂ ಚಿಕ್ಕ ಕುಟುಂಬವನ್ನೇ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ಮಹಾತಾಯಿ ಒಂದಲ್ಲಾ ಎರಡಲ್ಲಾ ಬರೊಬ್ಬರೀ 22 ಜನ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲಾ ಎಲ್ಲರೂ ಇಂದಿಗೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ.

ಸ್ಯೂ ರಾಡ್‌ಫೋರ್ಡ್

ಈಕೆ ಬ್ರಿಟನ್‌ನ ಅತಿದೊಡ್ಡ ಕುಟುಂಬದ ಮಾಲೀಕಳು. 22 ಮಕ್ಕಳ ತಾಯಿಯಾಗಿರುವ ಸ್ಯೂ ರಾಡ್‌ಫೋರ್ಡ್ ಸುದ್ದಿಯಲ್ಲಿದ್ದಾಳೆ. ಆಕೆ ಐಷಾರಾಮಿ ಜೀವನಶೈಲಿ ಎಲ್ಲರ ಗಮನ ಸೆಳೆದಿದೆ. ಮನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. 4 ಅಂತಸ್ತಿನ ಮನೆಯಲ್ಲಿ, ಹೊಟೇಲ್ ನಂತಹ ಬಾತ್ರೂಮ್ ನಿರ್ಮಿಸಿದ್ದಾಳೆ. ಸದ್ಯ 19 ಮಕ್ಕಳು ಮತ್ತು ಪತಿ ನೋಯೆಲ್ ರಾಡ್‌ಫೋರ್ಡ್‌ನೊಂದಿಗೆ ಸ್ಯೂ ವಾಸಿಸುತ್ತಿದ್ದಾಳೆ.

ಇದನ್ನೂ ಓದಿ: ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

Ma Bathroom

22 ಮಕ್ಕಳನ್ನು ಹೊಂದಿರುವ ಸ್ಯೂ, ಸದಾ ಸಕ್ರಿಯವಾಗಿರ್ತಾಳೆ. ತಾನು ಹಾಗೂ ತನ್ನ ಕುಟುಂಬದ ಐಷಾರಾಮಿ ಜೀವನ ಶೈಲಿಯಲ್ಲಿ ಆಕೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೋಟ್ಯಾಂತರ ರೂಪಾಯಿ ಮೌಲ್ಯದ ಆಕೆ ಮನೆಯಲ್ಲಿ ಎಲ್ಲವೂ ಇದೆ.

Radford Family

ಸ್ಯೂ, ಆಗಾಗ್ಗ, ತನ್ನ ಮನೆಯ ಫೋಟೋಗಳು ಮತ್ತು ಐಷಾರಾಮಿ ಜೀವನಶೈಲಿಯನ್ನು ಹಂಚಿಕೊಳ್ಳುತ್ತಾಳೆ. ಮನೆಯಲ್ಲಿ ಖಾಸಗಿ ಬಾರ್ ನಿಂದ ಹಿಡಿದು ಹಾಟ್ ಟಬ್ ವರೆಗೆ ಎಲ್ಲವೂ ಇದೆ. ಇದ್ರ ಫೋಟೋವನ್ನು ಸ್ಯೂ ಹಂಚಿಕೊಳ್ಳುತ್ತಿರುತ್ತಾಳೆ. ಕೊನೆಯ ಲಾಕ್ ಡೌನ್ ನಲ್ಲಿ ಇವರು ಗಾರ್ಡನ್ ಸೌಂದರ್ಯ ಹೆಚ್ಚಿಸಲು ಮುಂದಾಗಿದ್ದರು.

̄̄ಸ್ಯೂ ರಾಡ್‌ಫೋರ್ಡ್̤̤̤̤

ಸ್ಯೂ ಮತ್ತು ನೊಯೆಲ್ ರೆಡ್ ಫೋರ್ಡ್ ಮನೆಯಲ್ಲಿ 10 ಬೆಡ್ ರೂಮಿದೆ. ಈ ಕಾರಣಕ್ಕೆ ಮಕ್ಕಳು ರೂಮ್ ಹಂಚಿಕೊಂಡಿದ್ದಾರೆ. ದೊಡ್ಡ ಬೇಕರಿ ವ್ಯಾಪಾರವನ್ನು ಸ್ಯೂ ಕುಟುಂಬ ಮಾಡ್ತಿದೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲ ಮಕ್ಕಳು ಮನೆಯಲ್ಲಿದ್ದಾರೆ. ಸ್ಯೂ ನ ಹೊಸ ಬಾತ್ರೂಮ್, ಸುಂದರ ಮತ್ತು ಐಷಾರಾಮಿಯಾಗಿದೆ. ಸ್ಯೂ ತನ್ನ 22 ಮಕ್ಕಳನ್ನು ಬೆಳೆಸಲು 10 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾಳೆ.

ಇದನ್ನೂ ಓದಿ: US Airlift : ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್ ! 24 ಗಂಟೆಗಳಲ್ಲಿ 19,000 ಜನರ ಏರ್ ಲಿಫ್ಟ್

RELATED ARTICLES

Most Popular