ಸೋಮವಾರ, ಏಪ್ರಿಲ್ 28, 2025
HomeSpecial StoryTirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

- Advertisement -

ತಿರುಪತಿ ತಿಮ್ಮಪ್ಪ ಎಂದರೇ ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ. ತಿಮ್ಮಪ್ಪನ ದರ್ಶನ ಭಾಗ್ಯ ಒಮ್ಮೆ ಸಿಕ್ಕಿದರೆ ಸಾಕು ಎಂದು ಭಕ್ತರು ಕಾದು ಕುಳಿತಿರುತ್ತಾರೆ. ಆಡು ಮಾತೇ ಇದೆಯಲ್ಲಾ ತಿರುಪತಿಗೆ ಹೊಗಿ ವೆಂಕಟೇಶ್ವರನ ದರ್ಶನ ಮಾಡಲು ಯೋಗ ಬೇಕು ಅದು ಎಲ್ಲರಿಗೂ ಸಿಗುವುದಿಲ್ಲಾ ಅಂತ. ಅದ್ರಲ್ಲೂ ತಿರುಪತಿ ತಿಮ್ಮಪ್ಪನ ವಿಗ್ರಹದಲ್ಲಿರುವ ವಿಸ್ಮಯಗಳು ನಿಮಗೆ ಗೊತ್ತಿದೆಯಾ ?

ಲಕ್ಷಾಂತರ ಭಕ್ತರ ಪಾಲಿಗೆ ಇಷ್ಟಾರ್ಥಗಳನ್ನು ಕರುಣಿಸುವ ತಿರುಪತಿಯ ಶ್ರೀನಿವಾಸನ ಮೂರ್ತಿಯನ್ನುಯಾರು ಪ್ರತಿಷ್ಠಾಪನೆಯನ್ನು ಮಾಡಿಲ್ಲ. ಶ್ರೀನಿವಾಸ ಉದ್ಬವ ಮೂರ್ತಿಯ ರೂಪದಲ್ಲಿ ತಿರುಪತಿಯಲ್ಲಿ ನೆಲೆ ಕಂಡಿದ್ದಾರೆ. ಈ ವಿಗ್ರಹದ ಪ್ರತಿಯೊಂದು ಅಂಗಾಂಗವೂ ಕೂಡ ಪ್ರಮಾಣ ಬದ್ದವಾಗಿದೆ. ಅಲ್ಲದೇ ತಿರುಪತಿಯಲ್ಲಿರುವ ವೆಂಕಟೇಶ್ವರನ ವಿಗ್ರಹ ಜಗತ್ತಿನಲ್ಲಿ ಬೇರೆಲ್ಲೂ ಕಾಣಲು ಸಾಧ್ಯವೇ ಇಲ್ಲ.

ಪಚ್ಚೆ ಕರ್ಪೂರ ಹಚ್ಚಿದರೆ ಯಾವ ಕಲ್ಲೇ ಆದರೂ ಆಗಲಿ ಕರಗಿ ಹೋಗುತ್ತೆ. ಆದರೆ ತಿರುಪತಿಯ ಶ್ರೀನಿವಾಸನ ವಿಗ್ರಹಕ್ಕೆ ನಿತ್ಯವೂ ಈ ಪಚ್ಚೆ ಕರ್ಪೂರವನ್ನೇ ಬಳಿದು ನಂತರದಲ್ಲಿ ಅದನ್ನು ತೊಳೆದು ಅಭಿಷೇಕವನ್ನು ಮಾಡಲಾಗುತ್ತದೆ. ಶತ ಶತಮಾನಗಳಿಂದಲೂ ಪಚ್ಚೆ ಕರ್ಪೂರದ ಅಭಿಷೇಕವನ್ನು ಮಾಡಲಾಗುತ್ತಿದ್ದರೂ ವಿಗ್ರಹ ಇದುವರೆಗೂ ತನ್ನ ಹೊಳಪನ್ನೇ ಕಳೆದುಕೊಂಡಿಲ್ಲ.

ತಿರುಪತಿಯಲ್ಲಿರುವ ವೆಂಕಟೇಶ್ವರನಿಗೆ ಬೆಳಿಗ್ಗೆ ನೀರು ಮತ್ತು ಹಸುವಿನ ಹಾಲಿನಿಂದ ಅಭಿಷೇಕ ಮಾಡಲಾಗುತ್ತದೆ. ಈ ಅಭಿಷೇಕ ನಡೆದ ನಂತರದಲ್ಲಿ ಮೂರ್ತಿಯ ಮೇಲೆ ಬೆವರಿನ ಹನಿಗಳು ಕಾಣಸಿಗುತ್ತವೆ. ಅಲ್ಲದೇ ಅನೇಕ ಜನ ಅರ್ಚಕರಿಗೆ ವಿಗ್ರಹದ ಪಾದವನ್ನುಸ್ಪರ್ಷಿಸುವಾಗ ಜೀವಂತ ಕಾಲುಗಳನ್ನು ಸ್ಪರ್ಷಿಸಿದ ಅನುಭವಗಳಾಗಿವೆಯಂತೆ.

ಇಷ್ಟೇ ಅಲ್ಲಾ ಈ ವಿಗ್ರಹದ ಬಗ್ಗೆ ಇನ್ನಷ್ಟು ಕುತೂಹಲಕಾರಿ ಸಂಗತಿಗಳಿವೆ. ಪುರಾಣಗಳ ಪ್ರಕಾರ ಈ ವಿಗ್ರಹದ ಶಿಲೆಯನ್ನುದೇವಾನು ದೇವತೆಗಳು ಕೂಡ ನಿರ್ಮಿಸಿದ ಶಿಲೆಯಲ್ಲಾ. ಇದೊಂದು ಉದ್ಬವ ಮೂರ್ತಿಯಾಗಿದ್ದು ಇದು ನೋಡಲು ಮಾತ್ರ ಶಿಲೆಯ ರೀತಿ ಕಾಣುತ್ತದೆ. ಆದರೆ ಒಳಗಿನಿಂದ ಇದು ಶಿಲೆಯಲ್ಲಾ ಎನ್ನುತ್ತೆ ಪುರಾಣ.

ತಜ್ಞರ ಪ್ರಕಾರ ಈ ವಿಗ್ರಹದ ಶಿಲೆ ಭೂಮಿ ಮೇಲಿನ ಯಾವ ಶಿಲೆಗೂ ಹೋಲುವುದಿಲ್ಲಾ. ಇದು ಭೂಮಿಯ ತಳಭಾಗದಲ್ಲಿನ ಒತ್ತಡದಿಂದ ಉಂಟಾದ ಶಿಲೆಯಾಗಿರ ಬಹುದು ಅಥವ ಇದು ಅನ್ಯ ಗ್ರಹದಿಂದ ಬಂದ ಶಿಲೆಯಾಗಿರ ಬಹುದು ಎಂದು ತಜ್ಞರು ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಮುನ್ನ ವಿಗ್ರಹದ ಮಹತ್ವದ ಅರಿತುಕೊಳ್ಳುವುದು ಒಳಿತು.

ಇದನ್ನೂ ಓದಿ : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

RELATED ARTICLES

Most Popular