ಭಾನುವಾರ, ಏಪ್ರಿಲ್ 27, 2025
HomeSpecial StoryTirupati Govindaraja Temple : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

Tirupati Govindaraja Temple : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

- Advertisement -
  • ಹೇಮಂತ್ ಚಿನ್ನು

 ನಾವೆಲ್ಲಾ ತಿರುಪತಿಗೆ ಹೋಗಿದ್ದೇವೆ. ತಿರುಮಲದಲ್ಲಿ ದೇವರ ದರುಶನ ಪಡೆದು ಹಾಗೆಯೇ ತಿರುಪತಿಯಲ್ಲಿ ವೆಂಕಟರಮಣ ಸ್ವಾಮಿಯ ಅಣ್ಣನೆಂದು ಭಾವಿಸುವ ಗೋವಿಂದರಾಜ ದೇವಾಲಯಕ್ಕೆ (Tirupati Govindaraja Temple) ಹೋಗಿ ದರುಶನ ಪಡೆದಿದ್ದೇವೆ.

ಆದರೆ ನಮಗೆ ತಿಳಿಯದ ವಿಷಯ ವೆಂದರೆ ಗೋವಿಂದರಾಜ ದೇವಾಲಯ ದಲ್ಲಿರುವ ಗೋವಿಂದರಾಯರ (Govindaraja Temple)ಮೂಲ ವಿಗ್ರಹಕ್ಕೆ ಎಂದಿಗೂ ಅಭಿಷೇಕ ನಡೆಯುವುದಿಲ್ಲ. ಏಕೆಂದರೆ ಈ ವಿಗ್ರಹ ಸುದ್ದೇಮಣ್ಣು (ಶೇಡಿಮಣ್ಣು)ನಿಂದ ಮಾಡಿರುವುದು. ಸಾಮಾನ್ಯವಾಗಿ ಎಲ್ಲಾ ದೇಗುಲದಲ್ಲಿ ಮೂಲವಿಗ್ರಹ ಗಳು ಕಲ್ಲು,ಅಮೃತಶಿಲೆ ಯವು ಕೆಲವು ಕಡೆಯಲ್ಲಿ ಪಂಚಲೋಹದ್ದೂ ಇದೆ. ಆದರೆ ಸುದ್ದೆ ಮಣ್ಣಿನದ್ದು ಅಪರೂಪವೇ.

ಇದರ ಹಿಂದೆ ಒಂದು ರೋಚಕ ಕಥೆ ಇದೆ. ರಾಮಾನು ಜಾಚಾರ್ಯರು ವೈಷ್ಣವ ಮತದ ಪ್ರವರ್ತಕ ರಾಗಿ ವಿಷ್ಣುವಿನ ಆರಾಧಕರಾಗಿದ್ದರು. ಇವರು ಚಿದಂಬರಂ ನಲ್ಲಿ ತಾವೇ ಖುದ್ದಾಗಿ ನಿಂತು ಶಿಲ್ಪಿಗಳಿಗೆ ಸಲಹೆ ಸೂಚನೆ ಕೊಟ್ಟು ಸುಂದರ ಕಲಾತ್ಮಕ ಗೋವಿಂದರಾಜ (ಅನಂತಪದ್ಮನಾಭ) ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಟಿಸಿದರು. ಅಲ್ಲಿ ವೈಭವೋಪೇತ ವಾಗಿ ಪೂಜೆಗಳು ನಡೆಯುತ್ತಿದ್ದವು. ತನ್ನ ಕೆಲವು ಶಿಷ್ಯರನ್ನು ಅಲ್ಲಿ ಪೂಜೆಗೆ ನೇಮಿಸಿ ತಾವು ತಿರುಪತಿಗೆ (Tirupati ) ಬಂದು ನೆಲೆಸಿದರು.

ಆಗ ಚಿದಂಬರಂನಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಲೋತ್ತುಂಗ ಚೋಳನು ಪರಮಶಿವಭಕ್ತನಾಗಿದ್ದು ವೈಷ್ಣವ ಭಕ್ತರನ್ನು ಸಹಿಸದಾಗಿದ್ದನು ತನ್ನ ರಾಜ್ಯ ದಾದ್ಯಂತ ವೈಷ್ಣವ ದೇಗುಲ ಗಳನ್ನು ನಾಶ ಮಾಡುತ್ತಾ ಬಂದ ಈ ಕ್ರಮದಲ್ಲಿ ಚಿದಂಬರಂ ನಲ್ಲಿ ರಾಮಾನುಜಾ ಚಾರ್ಯರು ಪ್ರತಿಷ್ಟೆ ಮಾಡಿದ್ದ ಗೋವಿಂದರಾಜ ವಿಗ್ರಹವನ್ನು ಧ್ವಂಸ ಮಾಡಲು ಬರುತ್ತಾನೆ ಆಗ ಅಲ್ಲಿ ಪೂಜೆ ಮಾಡುತ್ತಿದ್ದ ರಾಮಾನು ಜಾಚಾರ್ಯರ ದಷ್ಟಪುಷ್ಟನಾದ ಶಿಷ್ಯನು ಅದನ್ನು ಹಾಳು ಮಾಡಲು ಬಿಡದೆ ಅವರೊಂದಿಗೆ ಹೋರಾಡುತ್ತಾನೆ. ಕಡೆಗೆ ಆತನಿಗೆ ಕೊಡಬಾರದ ಹಿಂಸೆ ಕೊಟ್ಟು ಆ ವಿಗ್ರಹಕ್ಕೇ ಆತನನ್ನು ಕಟ್ಟಿ ಸಮುದ್ರಕ್ಕೆ ಎಸೆಯುತ್ತಾರೆ. (ಈ ದೃಶ್ಯವನ್ನು ನಾವು ಕಮಲಹಾಸನ್ ರ ದಶಾವತಾರಂ ಚಿತ್ರದಲ್ಲಿ ನೋಡಿದ್ದೇವೆ).

ಕೆಲವು ದಿನಗಳ ನಂತರ ರಾಮಾನುಜಾಚಾರ್ಯರ ಶಿಷ್ಯರಿಗೆ ಸಮುದ್ರದಲ್ಲಿ ಈ ವಿಗ್ರಹ ಕಾಣಿಸುತ್ತದೆ. ಶಿಷ್ಯರು  ತಿರುಪತಿ (Tirupati ) ಯಲ್ಲಿದ್ದ ರಾಮಾನುಜಾಚಾರ್ಯರಿಗೆ ಸುದ್ದಿ ಮುಟ್ಟಿಸುತ್ತಾರೆ. ಆಗ ಇವರು ನಾನು ತಿರುಪತಿ ಯಲ್ಲೇ ಈ ದೇವರಿಗೆ ಗುಡಿ ನಿರ್ಮಿಸುತ್ತೇನೆ ಅಂತ ಹೇಳಿ ಈಗ ಗೋವಿಂದರಾಜರ ಗುಡಿ ಇರುವ ಸ್ಥಳದಲ್ಲಿಯೇ ಎಲ್ಲ ಸಿದ್ಧ ಮಾಡಿ ದೇವರ ಪ್ರತಿಷ್ಠೆಗೆ ಮುಹೂರ್ತವನ್ನೂ ನಿಗದಿ ಪಡಿಸುತ್ತಾರೆ. ಇನ್ನೇನು ನಾಳೆ ಪ್ರತಿಷ್ಠಾಪನಾ ಮಹೋತ್ಸವ ಇದೆ ಎನ್ನುವಾಗ ರಾಮಾನು ಜಾಚಾರ್ಯರ ಶಿಷ್ಯರು ವಿಗ್ರಹವನ್ನು ತಿರುಪತಿಗೆ ತರುತ್ತಾರೆ. ವಿಗ್ರಹ ಕಂಡ ರಾಮಾನುಜಾಚಾರ್ಯರಿಗೆ ಆಶಾಭಂಗ ವಾಗುತ್ತದೆ.

ಹಲವಾರು ದಿನ ಸಮುದ್ರದಲ್ಲಿ ಇದ್ದುದಕ್ಕೆ ಹಾಗೂ ಕಲೋತ್ತುಂಗನ ದಾಳಿಗೆ ವಿಗ್ರಹ ಅಲ್ಲಲ್ಲಿ ಭಿನ್ನವಾಗಿರುತ್ತದೆ. ಭಿನ್ನವಾದ ವಿಗ್ರಹಕ್ಕೆ ಪೂಜೆ ಸಲ್ಲುವುದಿಲ್ಲ ಅಲ್ಲವೇ ??? ಹಾಗಾಗಿ ಈಗ ಆಚಾರ್ಯರಿಗೆ ಚಿಂತೆಯಾಗುತ್ತದೆ. ಮುಹೂರ್ತ ಮೀರಬಾರದೆಂಬ ಆಶಯದಿಂದ ಚಂದ್ರಗಿರಿಯ ರಾಜರ ಸಹಕಾರದಿಂದ ಶಿಲ್ಪಿಗಳನ್ನು ಕರೆಸಿ ಒಂದೇ ರಾತ್ರಿಯಲ್ಲೇ ಸುದ್ದೆ ಮಣ್ಣಿನಿಂದ ವಿಗ್ರಹ ತಯಾರು ಮಾಡಿ ಪ್ರತಿಷ್ಟೆ ಮಾಡುತ್ತಾರೆ. ನೀರು ತಗುಲಿದರೆ ಸುದ್ದೆ ಮಣ್ಣು ಕರಗುತ್ತದೆ ಆದುದರಿಂದ ಈ ಗೋವಿಂದರಾಜನಿಗೆ ಅಭಿಷೇಕವೇ ನಡೆಯುವುದಿಲ್ಲ.

ಬರೀ ಪೂಜೆಯಷ್ಟೇ. ಇಲ್ಲಿ ಪೂಜೆಗೊಳ್ಳುತ್ತಿರುವ ಉತ್ಸವ ವಿಗ್ರಹಗಳು ಸಹ ರಾಮಾನುಜಾಚಾರ್ಯರ ಶಿಷ್ಯರು ಚಿದಂಬರಂ ನಿಂದ ತಂದಿರುವವೇ ಆಗಿದೆ. ಸಮುದ್ರದಿಂದ ತಂದ ಗೋವಿಂದರಾಜರ ವಿಗ್ರಹವನ್ನು ತಿರುಪತಿಯ (Tirupati ) ಮಹತಿ ಆಡಿಟೋರಿಯಂ ಬಳಿಯ ಮಂಚಿನೀಳ್ಳಗುಂಟ ಎನ್ನುವ ಚಿಕ್ಕ ಕೊಳದ ಬಳಿ ಇಡಲಾಗಿದೆ ಈ ಸಲ ತಿರುಪತಿಗೆ ಹೋದಾಗ ನಯನ ಮನೋಹರ ಮಂಗಳಮೂರ್ತಿಯನ್ನು ನೋಡಿರಿ.

ಗೋವಿಂದರಾಜ ದೇವಾಲಯದ (Tirupati Govindaraja Temple) ಮತ್ತೊಂದು ಆಸಕ್ತಿಕರ ವಿಷಯವೆಂದರೆ ಈ ದೇವಾಲಯ ಗೋವಿಂದರಾಜರಿಗಾಗಿ ನಿರ್ಮಾಣವಾದದ್ದಲ್ಲ. ಇದು ಪಾರ್ಥಸಾರಥಿ(ಕೃಷ್ಣನ) ದೇಗುಲ. ಈ ವಿಷಯ ಬೆಳಕಿಗೆ ಬಂದಿದ್ದು 1979ರಲ್ಲಿ. ಆಗ ಟಿ ಟಿ ಡಿ ಮುಖ್ಯ ಅಧಿಕಾರಿಯಾಗಿದ್ದ PVRK ಪ್ರಸಾದ್ ಅವರು ಈ ದೇಗುಲದ ಮೇಲ್ವಿಚಾರಣೆಗೆ ಬಂದು ಹೋಗುವಾಗ ಸಿಂಹದ್ವಾರದ ಬಲಕ್ಕೆ ಗೋವಿಂದರಾಜರ ಗುಡಿ ಎಡಕ್ಕೆ ಆಂಡಾಳ್ ಗುಡಿ ಸಿಂಹದ್ವಾರದ ಎದುರಿಗೆ ಬರೀ ಗೋಡೆ ಇತ್ತು. ಹಿಂದೆ ಹೋಗಿ ನೋಡಿದರೆ ಒಂದು ಕೋಣೆ ಇದ್ದ ಹಾಗೆ ಇತ್ತು. ಪುರೋಹಿತ ರನ್ನು ವಿಚಾರಿಸಲಾಗಿ ಅವರಿಗೆ ಏನೂ ತಿಳಿದಿರಲಿಲ್ಲ, ಆಗ ಪ್ರಸಾದ್ ಅವರು ಹಲವಾರು ಪುರಾತನ ಗ್ರಂಥಗಳನ್ನು ಅಭ್ಯಾಸ ಮಾಡಲಾಗಿ ಅಲ್ಲಿ ಪಾರ್ಥಸಾರಥಿ ಗುಡಿ ಇರಬೇಕೆಂದು ತಿಳಿಯಿತು. ನಂತರ ಅವರು ಟಿ ಟಿ ಡಿ ಅಧಿಕಾರಿಗಳು ಹಾಗೂ ಪುರೋಹಿತರ ಅಪ್ಪಣೆ ಪಡೆದು ಆ ಗೋಡೆಯನ್ನು ಒಡೆದು ಹಾಕಿದಾಗ ಒಳಗೆ ರುಕ್ಮಣಿ ಸತ್ಯಭಾಮಾ ಸಮೇತ ಪಾರ್ಥಸಾರಥಿಯ ಆಳೆತ್ತರದ ವಿಗ್ರಹ ಗಳು ಕಂಡುಬಂದವು.

ಸಂಭ್ರಮಾಶ್ಚರ್ಯದಿಂದ ಪ್ರಸಾದ್ ರವರು ಆ ವಿಗ್ರಹ ಗಳನ್ನು ಪುನರ್ ಪ್ರತಿಷ್ಠೆ ಮಾಡಿಸಿದರು. ನಂತರ ತಿಳಿದು ಬಂದ ವಿಷಯವೆಂದರೆ ಮುಸ್ಲಿಂದಾಳಿಗೆ ಹೆದರಿ ವಿಗ್ರಹಗಳನ್ನು ಕಾಪಾಡಲು ಈ ರೀತಿ ಗೋಡೆ ಕಟ್ಟಿದ್ದರು ಎಂದು. ನಾವಿಂದು ಈ ಗುಡಿಯಲ್ಲಿ ಸಿಂಹದ್ವಾರದ ಎದುರಿಗೆ ಪಾರ್ಥಸಾರಥಿ, ಬಲಕ್ಕೆ ಗೋವಿಂದರಾಜರು , ಎಡಕ್ಕೆ ಆಂಡಾಳ್ ಅಮ್ಮನ ವರು ಇನ್ನೂ ಮುಂತಾದ ದೇವರುಗಳನ್ನು ದರ್ಶಿಸಬಹುದು. ನಾನು ಈ ದೇಗುಲಕ್ಕೆ (Tirupati Govindaraja Temple) ಭೇಟಿ ನೀಡಿದಾಗ ಮತ್ತೊಂದು ವಿಷಯವೆಂದರೆ ಅಲ್ಲಿ ಮೆರವಣಿಗೆ ಮಾಡಲು ಬಳಸುವ ವಾಹನಗಳು ಗರುಡ, ಶೇಷ ಎಲ್ಲವೂ ಮರದಿಂದ ಮಾಡಿರುವವು, ಬೇರೆಡೆಯೆಲ್ಲಾ ನಾವು ಪಂಚಲೋಹಗಳಿಂದ ಮಾಡಿದ ವಾಹನಗಳನ್ನು ನೋಡುತ್ತೇವೆ. ನಮ್ಮ ದೇಗುಲಗಳು ಇಂತಹ ಇನ್ನೆಷ್ಟು ವಿಶೇಷಗಳನ್ನು ತನ್ನ ಉಡಿಯಲ್ಲಿ ಇಟ್ಟುಕೊಂಡಿದೆಯೋ.

ಇದನ್ನೂ ಓದಿ : ದುರಿತಗಳ ಅಳಿಸಿ ಭಕ್ತಕೋಟಿಯ ಬೆಳೆಸಿದ ಯತಿ ಶ್ರೀಶ್ರೀಧರರು

ಇದನ್ನೂ ಓದಿ : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

(An idol that has not been anointed: A rare shrine in Tirupati Govindaraja Temple)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular