ಸೋಮವಾರ, ಏಪ್ರಿಲ್ 28, 2025
Homeautomobileಮನೆಯಂತೆ ಬದಲಾಯ್ತು ಟೊಯೊಟಾ ಹಯೇಸ್ : ಈ ಕಾರಿನಲ್ಲಿದೆ ಎಲ್ಲಾ ಸೌಲಭ್ಯ

ಮನೆಯಂತೆ ಬದಲಾಯ್ತು ಟೊಯೊಟಾ ಹಯೇಸ್ : ಈ ಕಾರಿನಲ್ಲಿದೆ ಎಲ್ಲಾ ಸೌಲಭ್ಯ

- Advertisement -

Toyota Hiace ಎಂಪಿವಿ ಮಾದರಿಯ ವಾಹನವಾಗಿದ್ದು, ಒಳಗೆ ಸಾಕಷ್ಟು ಸ್ಥಳವನ್ನು ಹೊಂದಿದೆ. ಅನೇಕ ಹಯೇಸ್ ಬಳಕೆದಾರರು ಈ ವಾಹನವನ್ನು ತಮ್ಮ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಮಾಡಿಫೈ ಮಾಡುತ್ತಿದ್ದಾರೆ. ಈ ವಾಹನವು ಹೆಚ್ಚು ಜಾಗವನ್ನು ಹೊಂದಿರುವುದೇ ಇದಕ್ಕೆ ಕಾರಣ.

ಅದರಂತೆಯೇ ಕೇರಳದ ಟೊಯೊಟಾ ಹಯೇಸ್‌ ಬಳಕೆದಾರರೊಬ್ಬರು ತಮ್ಮ ಎಂಪಿವಿಯನ್ನು ಸಣ್ಣ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಟೊಯೊಟಾ ಹಯೇಸ್ ವಾಹನವನ್ನು ಮೋಟಾರ್ ಹೋಮ್ ನಂತೆ ಮಾಡಿಫೈ ಮಾಡಲಾಗಿದೆ. ಇದರಿಂದ ಟೊಯೊಟಾ ಹಯೇಸ್ ಎಂಪಿವಿಯು ಮನೆಯ ಎಲ್ಲಾ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

ಈ ಕಾರಣಕ್ಕೆ ಈ ಟೊಯೊಟಾ ಹಯೇಸ್ ಎಂಪಿವಿಯನ್ನು ನೋಡಿದವರು ಚಿಕ್ಕ ಮನೆ ಎಂದು ಕರೆಯುತ್ತಿದ್ದಾರೆ. ಈ ವಾಹನವು ಅಡುಗೆ ಮನೆ, ಶೌಚಾಲಯ ಹಾಗೂ ಆರಾಮದಾಯಕ ಆಸನ ಸೌಲಭ್ಯಗಳಂತಹ ವಿವಿಧ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಇದರ ಜೊತೆಗೆ ಈ ಟೊಯೊಟಾ ಹಯೇಸ್ ಹಲವು ಅದ್ಭುತ ಫೀಚರ್ ಗಳನ್ನು ಸಹ ಹೊಂದಿದೆ.

ಟೊಯೊಟಾ ಹಯೇಸ್ ಎಂಪಿವಿಯು ಆಂಬಿಯೆಂಟ್ ಲೈಟ್, ಪ್ರೀಮಿಯಂ ಗುಣ ಮಟ್ಟದ ಸ್ಪೀಕರ್‌, ಎಲ್‌ಇಡಿ ಟಿವಿ ಹಾಗೂ ಸಣ್ಣ ರೆಫ್ರಿಜರೇಟರ್ ಸೇರಿದಂತೆ ಹಲವು ವಿಶೇಷ ಫೀಚರ್ ಗಳನ್ನು ಹೊಂದಿದೆ. ಇದರ ಜೊತೆಗೆ ಈ ಹಯೇಸ್ ವಾಹನವು ಅಡುಗೆ ಮನೆಯ ಪಾತ್ರೆ ಹಾಗೂ ಗ್ಯಾಸ್ ಶೇಖರಣಾ ಜಾಗವನ್ನು ಸಹ ಹೊಂದಿದೆ.

ಇದರ ಜೊತೆಗೆ ಇಂಟಿರಿಯರ್ ಪ್ರೀಮಿಯಂ ಅನ್ನು ಮತ್ತಷ್ಟು ಹೆಚ್ಚಿಸಲು ಟೊಯೊಟಾ ಹಯೇಸ್ ಎಂಪಿವಿಯ ಹೊರಭಾಗದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಕಾನ್ ಫ್ಲಿಕ್ಟ್ ಎಸ್ಕೇಪ್ ಕ್ವಾರ್ಟ್‌, ಹೊಸ ಎಲ್‌ಇಡಿ ಮುಂಭಾಗದ ಹೆಡ್‌ಲೈಟ್‌, ಆಫ್ಟರ್ ಮಾರ್ಕೆಟ್ ಎಲ್‌ಇಡಿ ಟೇಲ್ ಲೈಟ್‌, ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳನ್ನು ಬದಲಾಯಿಸಲಾಗಿದೆ.

ಮಾಡಿಫೈಗೊಂಡಿರುವ ಈ ಟೊಯೊಟಾ ಹಯೇಸ್ 2016 ರ ಮಾದರಿಯಾಗಿದೆ. ಆಧುನಿಕ ವಿನ್ಯಾಸದ ಫೀಚರ್ ಗಳೊಂದಿಗೆ ಈ ವಾಹನವನ್ನು ಭಾರತದಲ್ಲಿ ಮರು ಬಿಡುಗಡೆ ಮಾಡಲು Toyota ಕಂಪನಿಯು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಸದ್ಯಕ್ಕೆ Toyota Innova Crysta ಮಾತ್ರ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಂಪನಿಯ ಎಂಪಿವಿ ಆಗಿದೆ.

RELATED ARTICLES

Most Popular