ಮಂಗಳವಾರ, ಏಪ್ರಿಲ್ 29, 2025
HomeSpecial StoryViral Video : ಮಾಸ್ಕ್‌ ಧರಿಸದೇ ಇರುವವರು ಈ ಕೋತಿಯನ್ನು ನೋಡಿ ಕಲಿಯಬೇಕು !

Viral Video : ಮಾಸ್ಕ್‌ ಧರಿಸದೇ ಇರುವವರು ಈ ಕೋತಿಯನ್ನು ನೋಡಿ ಕಲಿಯಬೇಕು !

- Advertisement -

ಕೊರೊನಾ ಅಬ್ಬರ ಶುರುವಾದ ಬಳಿಕ ಫೇಸ್‌ ಮಾಸ್ಕ್‌ ಎಂಬುದು ಎಲ್ಲರ ಬದುಕಿನ ಮುಖ್ಯ ಭಾಗವಾಗಿದೆ. ಮನೆಯಿಂದ ಆಚೆ ಹೋಗುವಾಗ ಫೇಸ್‌ ಮಾಸ್ಕ್‌ ಧರಿಸುವುದನ್ನು ಎಲ್ಲರೂ ರೂಢಿಸಿಕೊಳ್ಳುತ್ತಿದ್ದಾರೆ. ಜತೆಗೆ, ಮಾಸ್ಕ್‌ ಧರಿಸುವುದು ಕಡ್ಡಾಯ ಕೂಡಾ ಆಗಿದೆ. ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಮಾಸ್ಕ್ ಧರಿಸುವುದು ಒಳ್ಳೆಯದು ಅನ್ನೋ ಸಂದೇಶವನ್ನು ಕೋತಿಯೊಂದು ನೀಡಿದ್ದು, ಮಾಸ್ಕ್‌ ಧರಿಸುವ ಕೋತಿಯ ವಿಡಿಯೋ ವೈರಲ್‌ ಆಗಿದೆ.

ಒಂದಷ್ಟು ಮಂದಿ ಮಾಸ್ಕ್‌ ಧರಿಸದೇ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ, ಹೀಗೆ ನಿರ್ಲಕ್ಷ್ಯ ವಹಿಸುವವರಿಗೆ ಇಲ್ಲೊಂದು ಕೋತಿ ಪಾಠ ಕಲಿಸುತ್ತಿದೆ. ಅಲ್ಲದೇ ಧರಿಸಿದ ಮಾಸ್ಕ್‌ ಅನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂಬ ಸಂದೇಶವೂ ಈ ದೃಶ್ಯದಲ್ಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ತಟ್ಟನೆ ನಮ್ಮ ಮೊಗದಲ್ಲಿ ನಗುವರಳಿಸುತ್ತದೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಕೋತಿಯೊಂದು ಫೇಸ್‌ಮಾಸ್ಕ್‌ನಿಂದ ಮುಖ ಮುಚ್ಚಿಕೊಂಡು ಓಡಾಡುವ ದೃಶ್ಯ ಇದು.

ಇದನ್ನೂ ಓದಿ: Guinness Records : ಸೋಡಾ ಕುಡಿದು ಗಿನ್ನೆಸ್​ ರೆಕಾರ್ಡ್​ ಬರೆದ ಭೂಪ ..!!

ರಸ್ತೆ ಬದಿಯಲ್ಲಿ ಬಿದ್ದಿದ್ದ ಫೇಸ್‌ ಮಾಸ್ಕ್‌ ಅನ್ನು ಕೋತಿಯೊಂದು ಎತ್ತಿಕೊಳ್ಳುವ ದೃಶ್ಯದ ಮೂಲಕ 22 ಸೆಕೆಂಡಿನ ಈ ವಿಡಿಯೋ ಕ್ಲಿಪ್ ಶುರುವಾಗುತ್ತದೆ. ಇದಾದ ಬಳಿಕ ಈ ಕೋತಿ ಆ ಮಾಸ್ಕ್‌ನಿಂದ ತನ್ನ ಮುಖ ಮುಚ್ಚಿಕೊಂಡು ಓಡಾಡಲು ಯತ್ನಿಸುತ್ತದೆ. ಸದ್ಯ ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Trending : ಗ್ರಾಮದೊಳಗೆ ಮೊಸಳೆಯ ವಾಕಿಂಗ್ : ವೈರಲ್ ಆಯ್ತು ವೀಡಿಯೋ

RELATED ARTICLES

Most Popular