ಸೋಮವಾರ, ಏಪ್ರಿಲ್ 28, 2025
HomeSpecial StoryVinayaki temple : ನಮಗೆಲ್ಲಾ ವಿನಾಯಕ ಗೊತ್ತು. ಆದರೆ ವಿನಾಯಕಿ ಯಾರು?

Vinayaki temple : ನಮಗೆಲ್ಲಾ ವಿನಾಯಕ ಗೊತ್ತು. ಆದರೆ ವಿನಾಯಕಿ ಯಾರು?

- Advertisement -
  • ಹೇಮಂತ್ ಚಿನ್ನು

Vinayaki temple : ಇದಕ್ಕೊಂದು ಕಥೆಯಿದೆ. ಹಿಂದೆ ಅಂಧಕಾಸುರನೆಂಬ ರಾಕ್ಷಸನು ಘೋರ ತಪಸ್ಸು ಮಾಡಿ ಬ್ರಹ್ಮನಿಂದ ಒಂದು ವಿಶಿಷ್ಟ ವರ ಪಡೆಯುತ್ತಾನೆ. ಅದೇನೆಂದರೆ ಯಾರಾದರೂ ತನ್ನನ್ನು ಸಾಯಿಸಲು ಬಂದಾಗ, ತನ್ನ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದರೆ ಆ ತೊಟ್ಟು ರಕ್ತ ಮತ್ತೊಂದು ಅಂಧಕಾಸುರನಾಗಲಿ ಎಂದು.

ಸ್ವಲ್ಪ ದಿನಗಳ ನಂತರ ಈತನು ಪಾರ್ವತಿಯ ಸೌಂದರ್ಯವನ್ನು ಕಂಡು ಮಾರು ಹೋಗಿ ಆಕೆಗೆ ತನ್ನ ಪ್ರೇಮನಿವೇದನೆ ಮಾಡಿ ಶಿವನನ್ನು ಬಿಟ್ಟು ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಾನೆ. ಆಗ ಪಾರ್ವತಿಯು ಈ ವಿಷಯವನ್ನು ಶಿವನ ಗಮನಕ್ಕೆ ತರಲು ಶಿವ ಅಂಧಕಾಸುರನನ್ನು ಸಂಹರಿಸಲು ಹೊರಡುತ್ತಾನೆ. ತ್ರಿಶೂಲದಿಂದ ವಧಿಸಲು ಹೋದಾಗ ಅತನ ರಕ್ತ ಕೆಳಗೆ ಬಿದ್ದು ಮತ್ತಷ್ಟು ಅಂಧಕಾಸುರರು ಹುಟ್ಟಿ ಶಿವನ ಜೊತೆ ಯುದ್ಧಕ್ಕೆ ನಿಲ್ಲುತ್ತಾರೆ.

ಅಂಧಕಾಸುರನ ಶಾಪದ ವಿಷಯ ಪಾರ್ವತಿಗೆ ತಿಳಿಯುತ್ತದೆ. ಹಾಗೂ ಈ ರಕ್ಕಸನನ್ನು ಸಂಹರಿಸಲು ಸ್ತ್ರೀ ಶಕ್ತಿ ಅವಶ್ಯಕತೆ ಎಂದರಿತ ಪಾರ್ವತಿ ಎಲ್ಲಾ ದೇವತೆಗಳ ಸ್ತ್ರೀ ರೂಪಗಳನ್ನು ಕಳುಹಿಸಲು ಕೋರುತ್ತಾಳೆ. ಆಗ ಇಂದ್ರಾಣಿಯಾಗಿ ಇಂದ್ರನ ಸ್ತ್ರೀ ರೂಪ, ವೈಷ್ಣವಿಯಾಗಿ ವಿಷ್ಣುವಿನ ಸ್ತ್ರೀ ರೂಪ, ಬ್ರಹ್ಮಿಣಿಯಾಗಿ ಬ್ರಹ್ಮನ ಸ್ತ್ರೀರೂಪಗಳು ಬಂದು ಅಸುರನ ರಕ್ತ ನೆಲಕ್ಕೆ ಬೀಳುವ ಮೊದಲೇ ರಕ್ತ ಹೀರಲು ಪ್ರಾರಂಭ ಮಾಡಿದರು. ಆದರೂ ಶಕ್ತಿ ಸಾಲದಾದಾಗ ಗಣೇಶನನ್ನು ಪ್ರಾರ್ಥಿಸಲು ಆತನೂ ತನ್ನ ಸ್ತ್ರೀ ರೂಪವಾದ ವಿನಾಯಕಿಯನ್ನು ಕಳುಹಿಸುತ್ತಾನೆ.

ನಂತರ ವಿನಾಯಕಿಯ ಚಾಕಚಕ್ಯತೆಯಿಂದ ಅಂಧಕಾಸುರನ ಒಂದು ತೊಟ್ಟು ರಕ್ತ ಸಹ ನೆಲಕ್ಕೆ ಬೀಳದಂತೆ ಪಾನಮಾಡಿ ಅಸುರ ಸಂಹಾರ ಮಾಡುತ್ತಾರೆ. ವಿನಾಯಕಿಯ ಉಲ್ಲೇಖ ಮತ್ಸ್ಯ ಪುರಾಣ ಹಾಗೂ  ವಿಷ್ಣು ಧರ್ಮೋತ್ತರ ಪುರಾಣಗಳಲ್ಲಿ ಇದೆ. ವಿನಾಯಕಿ ಯಾರು ಎಂಬುದರ ಬಗ್ಗೆ ವಿವಿಧ ಶಾಸ್ತ್ರಜ್ಞರಲ್ಲಿ ವಿವಿಧ ಅಭಿಪ್ರಾಯಗಳು ಇದ್ದರೂ ಭೇದಾಘಾಟ್ ಮಧ್ಯಪ್ರದೇಶ, ಮಧುರೈನ ಮೀನಾಕ್ಷಿ ದೇಗುಲ, ರಾಜಸ್ಥಾನದ ಚೆರಿಯಾಬಾದ್ ನಲ್ಲಿ, ಹಾಗೂ ಜಬಲ್ಪುರದ ಚೌತಸ್ ಯೋಗಿನಿ ಮಂದಿರದಲ್ಲಿ 41ನೇ ಯೋಗಿನಿಯಾಗಿ ನಾವು ಶತಮಾನಗಳ ಹಳೆಯ ವಿನಾಯಕಿ ವಿಗ್ರಹಗಳನ್ನು ನೋಡಬಹುದು.

ಇದನ್ನೂ ಓದಿ : small plants : ಮನೆಯ ಈ ದಿಕ್ಕಿನಲ್ಲಿ ಗಿಡವನ್ನು ನೆಟ್ಟರೆ ಸಿಗುತ್ತದೆ ಶುಭಯೋಗ

ಇದನ್ನೂ ಓದಿ : broom on the roof : ಯಾವುದೇ ಕಾರಣಕ್ಕೂ ಪೊರಕೆಯನ್ನು ಈ ಜಾಗದಲ್ಲಿ ಇಡಲೇಬೇಡಿ

(Vinayaki Temple Rajasthan)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular