ನವದೆಹಲಿ : ಆತಂಕಕಾರಿ ಪರಿಸ್ಥಿತಿಯ ನಡುವೆ, ಹದಗೆಡುತ್ತಿರುವ ಹವಾಮಾನ ಬದಲಾವಣೆಯ ಪ್ರಾಮುಖ್ಯತೆ ಮತ್ತು ನಮ್ಮ ಪರಿಸರವನ್ನು ರಕ್ಷಿಸುವ ಅಂತಿಮ ಗುರಿಯತ್ತ ಮಾನವರನ್ನು ಆಕರ್ಷಿಸುವ ಮತ್ತು ಒಗ್ಗೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ ನಾಲ್ಕನೇ ವಾರದಂದು ಅಂದರೆ ಈ ವರ್ಷ ಏಪ್ರಿಲ್ 22 ರಂದು (World Earth Day 2023) “ವಿಶ್ವ ಭೂಮಿ ದಿನ ” ಭೂ ದಿನವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೇ ವಿಶ್ವ ಭೂಮಿ ದಿನವನ್ನು “ಅಂತರರಾಷ್ಟ್ರೀಯ ಮಾತೃಭೂಮಿ ದಿನ” ಎಂದೂ ಕರೆಯಲಾಗುತ್ತದೆ. ಈ ದಿನವು ಪ್ರಕೃತಿ ಹಾಗೂ ಗೃಹಗಳನ್ನು ರಕ್ಷಿಸುವ ಪ್ರಯತ್ನಗಳ ಮೇಲೂ ಕೇಂದ್ರಿಕರಿಸುತ್ತದೆ.
ಹೆಚ್ಚುತ್ತಿರುವ ಜನಸಂಖ್ಯೆ, ಮಣ್ಣಿನ ಸವಕಳಿ, ಕ್ಷೀಣಿಸುತ್ತಿರುವ ಪರಿಸರ, ಅರಣ್ಯನಾಶ ಹಾಗೂ ನೀರಿನ ಮಾಲಿನ್ಯದಂತಹ ಹಲವಾರು ಸಮಸ್ಯೆಗಳು ಭೂಮಿಯ ವಿನಾಶಕ್ಕೆ ಕಾರಣವಾಗುತ್ತಿದೆ. ಆ ಕಾರಣಕ್ಕೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ರಕ್ಷಣೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಏಪ್ರಿಲ್ 22 ರಂದು ಆಚರಿಸುವ ಭೂಮಿ ದಿನದ ಕುರಿತು ಇನ್ನಷ್ಟು ವಿಚಾರವನ್ನು ನಿಮ್ಮಗಾಗಿ ಈ ಕೆಳಗೆ ತಿಳಿಸಲಾಗಿದೆ.
ಪ್ರಧಾನಿ ಮೋದಿ ಟ್ವೀಟ್‌ನಲ್ಲಿ, “ಭೂಮಿಯ ದಿನದಂದು, ನಮ್ಮ ಗ್ರಹವನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವ ಎಲ್ಲರನ್ನು ನಾನು ಶ್ಲಾಘಿಸುತ್ತೇನೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಭಾರತ ಬದ್ಧವಾಗಿದೆ.” ಎಂದು ಹೇಳಿದ್ದಾರೆ.
On Earth Day, I laud all those working to make our planet better. India is committed to furthering sustainable development in line with our culture of living in harmony with nature. pic.twitter.com/c1qgSU76IG
— Narendra Modi (@narendramodi) April 22, 2023
ವಿಶ್ವ ಭೂಮಿ ದಿನದ ಇತಿಹಾಸ :
1970 ಏಪ್ರಿಲ್ 22 ರಂದು ಮೊದಲ ಬಾರಿಗೆ ಭೂಮಿ ದಿನವನ್ನು ಆಚರಿಸಲಾಗಿತ್ತು. 1969ರಲ್ಲಿ ಸ್ಯಾನ್‌ಫ್ರಾನಿಸ್ಕೊದಲ್ಲಿ ನಡೆದ ಯುನೆಸ್ಕೊ ಸಮ್ಮೇಳನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ವಿಶ್ವ ಶಾಂತಿಗಾಗಿ ಹೋರಾಟ ನಡೆಸಿದ್ದ ಜಾನ್ ಮೆಕ್ ಕಾನ್ನೆಲ್ ಮಾತೃಭೂಮಿ ಹಾಗೂ ಶಾಂತಿಯ ಪರಿಕಲ್ಪನೆಯನ್ನು ಗೌರವಿಸುವ ಉದ್ದೇಶದಿಂದ ಈ ವಿಷಯನ್ನು ಪ್ರಸ್ತಾಪಿಸಿದ್ದರು.
ಮೊದಲು ವಿಶ್ವ ಭೂಮಿ ದಿನವನ್ನು ಮಾರ್ಚ್ 21 ರಂದು ನಡೆಸಲು ಪ್ರಸ್ತಾಪಿಸಲಾಗಿತ್ತು. ಯಾಕೆಂದರೆ ಆ ದಿನ ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಮೊದಲ ದಿನ. ಆದರೆ ನಂತರದಲ್ಲಿ ಅಮೆರಿಕದ ಸೆನೆಟರ್, ಗೇಲಾರ್ಡ್ ನೆಲ್ಸನ್ ಪ್ರಪಂಚದಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 22, 1970 ರಂದು ಈ ದಿನವನ್ನು ಆಚರಿಸಲು ಪ್ರಸ್ತಾಪಿಸಿದರು. ಅಲ್ಲದೆ ಈ ದಿನಕ್ಕೆ “ಭೂಮಿ ದಿನ” ಎಂದು ಮರುನಾಮಕರಣ ಮಾಡಿದರು.
ವಿಶ್ವ ಭೂಮಿ ದಿನದ ಮಹತ್ವ :
ಭೂಮಿಯ ಸುರಕ್ಷತೆಯಲ್ಲಿ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ. ಹವಾಮಾನ ಬದಲಾವಣೆಯನ್ನು ಅಂಗೀಕರಿಸಲು ಮತ್ತು ಅದರ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸಲು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಜಲ, ವಾಯು ಮಾಲಿನ್ಯ, ಅರಣ್ಯನಾಶ ಹಾಗೂ ಇನ್ನೂ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಒಟ್ಟಾಗಿ ಮಾತನಾಡಬೇಕು, ಅಲ್ಲದೆ ಈ ಬಗ್ಗೆ ಜನರಲ್ಲಿ ಸ್ವಯಂ ಜಾಗೃತಿ ಮೂಡಬೇಕು ಎಂಬುದು ಈ ದಿನದ ಮಹತ್ವವಾಗಿದೆ.
ವಿಶ್ವ ಭೂಮಿ ದಿನ 2023ರ ಥೀಮ್ :
ಪ್ರತಿವರ್ಷ ವಿಶ್ವ ಭೂಮಿ ದಿನವನ್ನು ಒಂದೊಂದು ಥೀಮ್ ಅಥವಾ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತದೆ. ಈ ವರ್ಷದ ಪರಿಕಲ್ಪನೆ “ನಮ್ಮ ಗ್ರಹದ ಮೇಲೆ ಹೂಡಿಕೆ ಮಾಡಿ” ಎನ್ನುವುದಾಗಿದೆ. 2022ರ ಥೀಮ್ ಕೂಡ ಇದೇ ಆಗಿತ್ತು. ಈ ವರ್ಷ ನಾವು 53ನೇ ವಿಶ್ವ ಭೂಮಿ ದಿನವನ್ನು ಆಚರಿಸುತ್ತಿದ್ದೇವೆ.
ಇದನ್ನೂ ಓದಿ : ರಂಜಾನ್ ಮುಬಾರಕ್ 2023 : ಈದ್-ಉಲ್-ಫಿತರ್ ದಿನದಂದು ರಾಷ್ಟ್ರಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಇದನ್ನೂ ಓದಿ : ಅಕ್ಷಯ ತೃತೀಯ 2023 : ಮಾರುಕಟ್ಟೆಯಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ
ವಿಶ್ವ ಭೂಮಿ ದಿನ 2023ರ ಆಚರಣೆ :
ವಿಶ್ವ ಭೂ ದಿನದ ಆಚರಣೆಗಳು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಸುತ್ತ ಸುತ್ತುತ್ತವೆ. ಪ್ರಪಂಚದಾದ್ಯಂತ 190ಕ್ಕೂ ಹೆಚ್ಚು ದೇಶದಲ್ಲಿ ಪರಿಸರ ಪ್ರಜ್ಞೆಯ ಕುರಿತು ಜಾಗೃತಿ ಮೂಡಿಸುವ ಈ ದಿನವನ್ನು ಆಚರಿಸಲಾಗುತ್ತದೆ.
World Earth Day 2023: Prime Minister Modi informed about living in harmony with nature