ನ್ಯೂಜಿಲ್ಯಾಂಡ್ : ನ್ಯೂಜಿಲ್ಯಾಂಡ್ ವಿರುದ್ದ ಎರಡನೇ ಟಿ20 ಪಂದ್ಯದಲ್ಲಿಯೂ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಅರ್ಧ ಶತಕದ ನೆರವಿನಿಂದ ಭಾರತ ಕಿವಿಸ್ ತಂಡವನ್ನು ಬಗ್ಗು ಬಡಿದಿದ್ದು, ಸರಣಿಯನ್ನು 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಆಕ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 132 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕಿವೀಸ್ ಗೆ ಉತ್ತಮ ಆರಂಭ ದೊರಕಿದರೂ ಮಧ್ಯಮ ಕ್ರಮಾಂಕದಲ್ಲಿ ಮಂದಗತಿಯ ಆಟ ನ್ಯೂಜಿಲ್ಯಾಂಡ್ ತಂಡಕ್ಕೆ ಮುಳುವಾಗಿದೆ.

ಆರಂಭಿಕ ಮಾರ್ಟಿನ್ ಗಫ್ಟಿಲ್ 33, ಕೊಲಿನ್ ಮುನ್ರೋ 26, ಟಿಮ್ ಸೈಫರ್ಟ್ 33 ಉತ್ತಮ ಆಟ ಪ್ರದರ್ಶಿಸಿದರು. ಪಂದ್ಯದ ಆರಂಭದಿಂದಲೂ ಭಾರತೀಯ ಬೌಲರ್ ಗಳು ನ್ಯೂಜಿಲ್ಯಾಂಡ್ ಆಟಗಾರರನ್ನು ಇನ್ನಿಲ್ಲದಂತೆ ಕಾಡಿದ್ದರು. ಜಡೇಜಾ 2, ಶರ್ದೂಲ್ ಠಾಕೂರ್, ಬೂಮ್ರಾ, ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದುಕೊಂಡ್ರು.

`ಸುಲಭ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಟೀಮ್ ಸೌಥಿ ಆರಂಭಿಕ ಹೊಡೆತ ನೀಡಿದ್ರು. 8 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ವಿಕೆಟ್ ಪಡೆದ ಸೌಥಿ, 11 ರನ್ ಗಳಿಸಿದ್ದ ವಿರಾಟ್ ಕೊಯ್ಲಿಗೂ ಪೆವಿಲಿಯನ್ ಹಾದಿ ತೋರಿಸಿದ್ದರು. ನಂತರ ಶ್ರೇಯಸ್ ಅಯ್ಯರ್ ಜೊತೆಗೂಡಿದ ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು.

ಕೆ.ಎಲ್.ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿದ್ರೆ, ಶ್ರೇಯಸ್ ಅಯ್ಯರ್ 44 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ 2 ವಿಕೆಟ್ ಪಡೆದುಕೊಂಡ್ರೆ, ಇಶಾ ಸೋದಿ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಭಾರತ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.
ಸಂಕ್ಷಿಪ್ತ ಸ್ಕೋರ್ : ಭಾರತ : ಕೆ.ಎಲ್.ರಾಹುಲ್ 55* (50), ರೋಹಿತ್ ಶರ್ಮಾ 8(6), ಕೊಯ್ಲಿ 11( 12), ಶ್ರೇಯಸ್ ಅಯ್ಯರ್ 44 (33), ಶಿವಂ ದುಬೆ 8 (4), ಟೀಮ್ ಸೌಥಿ 20/2, ಇಶಾ ಸೋದಿ 33/1
ನ್ಯೂಜಿಲ್ಯಾಂಡ್ : ಮಾರ್ಟಿನ್ ಗುಪ್ಟಿಲ್ 33 (20), ಕೊಲಿನ್ ಮುನ್ರೋ 26 (25), ಕೆನ್ ವಿಲಿಯಂಸನ್ 14 (20), ಕೊಲಿನ್ ಡಿ ಗ್ರ್ಯಾಂಡ್ ಹೋಮ್ 3 (5). ರಾಸ್ ಟೇಲರ್ 18 (24), ಟೀಮ್ ಸೈಫರ್ಟ್ 33 (26), ರವೀಂದ್ರ ಜಡೇಜಾ 18/2, ಶಾರ್ದೂಲ್ ಠಾಕೂರ್ 21/1, ಜಸ್ಪ್ರಿತ್ ಬೂಮ್ರಾ 21/1. ಶಿವಂ ದುಬೆ 16/1