ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಸತತ ಸೋಲುಗಳಿಂದ ಏಕದಿನ ಸರಣಿಯನ್ನು ಕೈಬಿಟ್ಟಿದೆ. ಟಿ20 ಸರಣಿಯುದ್ದಕ್ಕೂ ಹೀನಾಯ ಸೋಲು ಕಂಡಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯನ್ನು ಗೆದ್ದು ನಿಟ್ಟುಸಿರು ಬಿಟ್ಟಿದೆ. ಆದರೆ 2ನೇ ಪಂದ್ಯದಲ್ಲಿ ಆಟಗಾರರ ಕೊರತೆಯಿಂದ ನ್ಯೂಜಿಲೆಂಡ್ ತಂಡದ ಕೋಚ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಿ ಇದೀಗ ಸುದ್ದಿಯಲ್ಲಿದ್ದಾರೆ.

ಇದೇನಪ್ಪಾ ಕೋಚ್ ಮೈದಾನಕ್ಕೆ ಇಳಿದಿದ್ದಾ ಅಂತಾ ಆಶ್ವರ್ಯ ಪಡಬೇಡಿ. 2ನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಮಿಚೆಲ್ ಸ್ಯಾಟ್ನರ್ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಮೈದಾನದಿಂದ ಹೊರ ನಡೆದಿದ್ದಾರೆ. ಬದಲಿ ಆಟಗಾರನನ್ನು ಮೈದಾನಕ್ಕೆ ಇಳಿಸೋಣಾವೆಂದ್ರೆ ನಾಯಕ ಕೇನ್ ವಿಲಿಯಂಸನ್ ಭುಜದ ನೋವಿನಿಂದ ಬಳಲುತ್ತಿದ್ರೆ, ಕುಗ್ಗಿಲಝ್ನೆ ಜ್ವರದಿಂದ ಬಳಲುತ್ತಿದ್ರು. ಹೀಗಾಗಿ ಬದಲಿ ಆಟಗಾರರ ಕೊರತೆ ಎದುರಾಗಿತ್ತು. ಇದರಿಂದಾಗಿ ನ್ಯೂಜಿಲೆಂಡ್ ತಂಡದ ಫೀಲ್ಡಿಂಗ್ ಕೋಚ್ ಲ್ಯೂಕ್ ರೊಂಚಿ ಸ್ವತಃ ಕ್ರೀಡಾಂಗಣಕ್ಕೆ ಇಳಿದು ಫೀಲ್ಡಿಂಗ್ ಮಾಡಿದ್ದಾರೆ.

2017ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರೋ ರೊಂಚಿ ಸದ್ಯ ನ್ಯೂಜಿಲೆಂಡ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೊಂಚಿ ಫೀಲ್ಡಿಂಗ್ ಮಾಡಿರೋದು ಬಾರೀ ಸುದ್ದಿಯಾಗುತ್ತಿದೆ. ಹಾಗೆ ನೋಡಿದ್ರೆ ನ್ಯೂಜಿಲೆಂಡ್ ತಂಡಕ್ಕೆ ಇದು ಹೊಸತೇನಲ್ಲಾ. ಈ ಹಿಂದೆ ಬ್ಯಾಟಿಂಗ್ ಕೋಚ್ ಆಗಿದ್ದ ಪೀಟರ್ ಪುಲ್ಟನ್ ಕೂಡ ಆಸ್ಟ್ರೇಲಿಯಾ ವಿರುದ್ದ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಿದ್ದರು.