ಬೆಂಗಳೂರು : ಆಸ್ಟ್ರೇಲಿಯಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಆರೋನ್ ಪಿಂಚ್ ಭರ್ಜರಿ ಆರಂಭವೊದಗಿಸೋದಕ್ಕೆ ಮುಂದಾದ್ರು. ಆದ್ರೆ ಮೊಹಮ್ಮದ್ ಸೆಮಿ 3 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಗೆ ಪೆವಿಲಿಯನ್ ಹಾದಿ ತೋರಿಸಿದ್ರು. ಪಿಂಚ್ ಜೊತೆಯಾದ ಸ್ಟೀವನ್ ಸ್ಮಿತ್ ಒಂದಿಷ್ಟು ಹೊತ್ತು ಆಟ ಮುಂದುವರಿಸಿದರಾದ್ರೂ, ಪಿಂಚ್ ರನೌಟ್ ಗೆ ಬಲಿಯಾದ್ರು. ಸ್ಟೀವನ್ ಸ್ಮಿತ್ 131, ಲಬುಶಂಗೆ 54 ಹಾಗೂ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 35 ರನ್ ನೆರವಿನಿಂದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 286 ರನ್ ಗಳಿಸಿತ್ತು. ಮಾರಕ ಬೌಲಿಂಗ್ ನಡೆಸಿದ ಮೊಹಮದ್ ಸೆಮಿ 4 ವಿಕೆಟ್ ಪಡೆದ್ರೆ, ರವೀಂದ್ರ ಜಡೇಜಾ 2, ನವದೀಪ್ ಸೈನಿ 1 ಹಾಗೂ ಕುಲದೀಪ್ ಯಾದವ್ 1 ವಿಕೆಟ್ ಪಡೆದ್ರು.

ಪೀಲ್ಡಿಂಗ್ ನಡೆಸೋ ವೇಳೆಯಲ್ಲಿ ಗಾಯಗೊಂಡಿದ್ದ ಶಿಖರ್ ಧವನ್ ಬದಲು ಕನ್ನಡಿಗ ಕೆ.ಎಲ್.ರಾಹುಲ್ ರೋಹಿತ್ ಶರ್ಮಾ ಜೊತೆಗೆ ಕ್ರಿಸ್ ಗೆ ಇಳಿದಿದ್ರು. 286 ರನ್ ಗಳ ಬೆನ್ನತ್ತಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು.

ಆದ್ರೆ ರಾಹುಲ್ 19 ರನ್ ಗಳಿಸಿದ್ದ ವೇಳೆಯಲ್ಲಿ ಅಗರ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ರು. ನಂತರ ಬ್ಯಾಟಿಂಗ್ ಗೆ ಇಳಿದ ನಾಯಕ ವಿರಾಟ್ ಕೊಯ್ಲಿ ಹಾಗೂ ರೋಹಿತ್ ಶರ್ಮಾ ಶತಕದ ಜೊತೆಯಾಟ ನಡೆಸಿದ್ರು.

ರೋಹಿತ್ ಶರ್ಮಾ ಭರ್ಜರಿ ಶತಕ ಬಾರಿಸಿದ್ರೆ, ಕೊಯ್ಲಿ ಅರ್ಧ ಶತಕ ಗಳಿಸೋ ಮೂಲಕ ತಂಡಕ್ಕೆ ನೆರವಾದ್ರು. ರೋಹಿತ್ ಶರ್ಮಾ 188, ವಿರಾಟ್ ಕೊಯ್ಲಿ 89, ಶ್ರೇಯಸ್ ಐಯ್ಯರ್ 44, ಕೆ.ಎಲ್.ರಾಹುಲ್ 19 ಹಾಗೂ ಮನೀಶ್ ಪಾಂಡೆ 8 ರನ್ ನೆರವಿನೊಂದಿಗೆ ಭಾರತ ಗೆಲುವಿನ ನಗೆ ಬೀರಿದೆ. ಆಸ್ಟ್ರೇಲಿಯಾ ಪರ ಅಸ್ಟೋನ್ ಅಗರ್, ಜೋಸ್ ಹಜಲ್ವುಡ್ ಹಾಗೂ ಅಡಮ್ ಜಂಪಾ ತಲಾ ಒಂದು ವಿಕೆಟ್ ಪಡೆದುಕೊಂಡ್ರು.

ಮೊದಲ ಪಂದ್ಯದಲ್ಲಿ ಸೋಲಿನ ರುಚಿಕಂಡಿದ್ದ ಭಾರತ ಮುಂದಿನ ಎರಡು ಪಂದ್ಯಗಳಲ್ಲಿಯೂ ಭರ್ಜರಿಗೆ ಆಟ ಪ್ರದರ್ಶಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲೋ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2 – 1 ಅಂತರದಿಂದ ಗೆಲುವು ಸಾಧಿಸಿದೆ.