AFG vs NZ : ಗಯಾನ: ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC t20 World Cup 2024) ಮತ್ತೊಂದು ಅಪ್ ಸೆಟ್’ಗೆ ಸಾಕ್ಷಿಯಾಗಿದೆ. ಮೊನ್ನೆಯಷ್ಟೇ ಕ್ರಿಕೆಟ್ ಶಿಶು ಅಮೆರಿಕ, ಪಾಕಿಸ್ತಾನ ತಂಡಕ್ಕೆ ಆಘಾತ ನೀಡಿತ್ತು. ಇದೀಗ ಅಪಾಯಕಾರಿ ಅಫ್ಘಾನಿಸ್ತಾನ ತಂಡ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಶಾಕ್ ಕೊಟ್ಟಿದೆೆ. ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆದ 14ನೇ ಲೀಗ್ ಪಂದ್ಯದಲ್ಲಿ ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ತಂಡ, ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲೆಂಡಿ ತಂಡವನ್ನು 84 ರನ್’ಗಳಿಂದ ಬಗ್ಗು ಬಡಿಯಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ಓಪನರಿ ರಹಿಮನುಲ್ಲಾ ಗುರ್ಬಾಜ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆ ಹಾಕಿತು. ಕಿವೀಸ್ ದಾಳಿಗೆ ಸಡ್ಡು ಹೊಡದು ನಿಂತ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸದಸ್ಯ ರಹ್ಮನುಲ್ಲಾ ಗುರ್ಬಾಜ್ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ 80 ರನ್ ಗಳಿಸಿದರು.
ಇದನ್ನೂ ಓದಿ : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!
ರಹ್ಮನುಲ್ಲಾ ಮತ್ತು ಇಬ್ರಾಹಿಂ ಜದ್ರಾನ್ (41 ಎಸೆತಗಳಲ್ಲಿ 44 ರನ್) ಮೊದಲ ವಿಕೆಟ್’ಗೆ 103 ರನ್ ಸೇರಿಸಿದ್ದರಿಂದ ಅಫ್ಘಾನಿಸ್ತಾನ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಂತಾಯಿತು. ನಂತರ 160 ರನ್’ಗಳ ಸಾಧಾರಣ ಸವಾಲು ಬೆನ್ನಟ್ಟಿದ್ದ ಕಿವೀಸ್ ಪಡೆ ಇನ್ನಿಂಗ್ಸ್’ನ ಮೊದಲ ಎಸೆತದಲ್ಲೇ ಫಜಲ್ ಹಕ್ ಫರೂಕಿ ಬೌಲಿಂಗ್’ನಲ್ಲಿ ಫಿನ್ ಅಲೆನ್ ವಿಕೆಟ್ ಕಳೆದುಕೊಂಡಿತು. ಈ ಆಘಾತದಿಂದ ಚೇತರಿಸಿಕೊಳ್ಳದ ನ್ಯೂಜಿಲೆಂಡ್ ಅಂತಿಮವಾಗಿ 15.2 ಓವರ್’ಗಳಲ್ಲಿ ಕೇವಲ 75 ರನ್’ಗಳಿಗೆ ಆಲೌಟಾಗಿ 84 ರನ್’ಗಳ ಹೀನಾಯ ಸೋಲು ಅನುಭವಿಸಿತು.

ಅಫ್ಘಾನಿಸ್ತಾನ ಪರ ಎಡಗೈ ಮಧ್ಯಮ ವೇಗಿ ಫಜಲ್ ಹಕ್ ಫರೂಕಿ 17 ರನ್ನಿಗೆ 4 ವಿಕೆಟ್ ಉರುಳಿಸಿದರೆ, ನ್ಯೂಜಿಲೆಂಡ್’ನ ಮಧ್ಯಮ ಕ್ರಮಾಂಕದ ಮೇಲೆ ಮಾರಕವಾಗಿ ಎರಗಿದ ನಾಯಕ ರಶೀದ್ ಖಾನ್ 4 ಓವರ್’ಗಳಲ್ಲಿ ಕೇವಲ 17 ರನ್ನಿತ್ತು 4 ವಿಕೆಟ್ ಕಬಳಿಸಿದರು. ಹಿರಿಯ ಆಲ್ರೌಂಡರ್ ಮೊಹಮ್ಮದ್ ನಬಿ 4 ಓವರ್’ಗಳಲ್ಲಿ 16 ರನ್ನಿತ್ತು 2 ವಿಕೆಟ್ ಪಡೆದರು.
ಇದನ್ನೂ ಓದಿ : Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಬುಧವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್’ನಲ್ಲಿ ಶುಭಾರಂಭ ಮಾಡಿದ್ದು, ನಾಳೆ (ಭಾನುವಾರ) ನ್ಯೂ ಯಾರ್ಕ್’ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India Vs Pakistan) ತಂಡವನ್ನು ಎದುರಿಸಲಿದೆ.
Afghanistan beat New Zealand Another big shock in the ICC T20 World Cup 2024