ಸೋಮವಾರ, ಏಪ್ರಿಲ್ 28, 2025
HomeSportsCricketArjun Tendulkar : ಕನ್ನಡಿಗರೊಂದಿಗೆ ಒಂದೇ ತಂಡದಲ್ಲಿ ಆಡುತ್ತಿದ್ದಾರೆ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್

Arjun Tendulkar : ಕನ್ನಡಿಗರೊಂದಿಗೆ ಒಂದೇ ತಂಡದಲ್ಲಿ ಆಡುತ್ತಿದ್ದಾರೆ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್

- Advertisement -

ಪುದುಚೇರಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರ ಹುಟ್ಟೂರು ಮುಂಬೈ. ಹೀಗಾಗಿ ಅವರು ಮುಂಬೈಕರ್. ಆದರೆ ಅರ್ಜುನ್ ತೆಂಡೂಲ್ಕರ್, ಕರ್ನಾಟಕದ ಕ್ರಿಕೆಟಿಗರ ಜೊತೆ ಆಡುತ್ತಿದ್ದಾರೆ. ಮುಂಬೈ ಆಟಗಾರ ಅರ್ಜುನ್ ತೆಂಡೂಲ್ಕರ್, ನಮ್ಮ ಕನ್ನಡಿಗರ ಜೊತೆ ಒಂದೇ ತಂಡದಲ್ಲಿ ಆಡಲು ಹೇಗೆ ಸಾಧ್ಯ? ಮ್ಯಾಟರ್ ಇರೋದೇ ಅಲ್ಲಿ.

24 ವರ್ಷದ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಮುಂಬೈನವರಾದರೂ ಅವರು ದೇಶೀಯ ಕ್ರಿಕೆಟ್’ನಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬೈ ತಂಡದಲ್ಲಿ ಅವಕಾಶದ ಕೊರತೆಯ ಕಾರಣ ಅರ್ಜುನ್ ತೆಂಡೂಲ್ಕರ್, ಕ್ರಿಕೆಟ್ ಭವಿಷ್ಯವನ್ನು ಅರಸಿ ಗೋವಾಗೆ ವಲಸೆ ಬಂದಿದ್ದಾರೆ. ಗೋವಾ ಪರ ಕಳೆದ ಸಾಲಿನಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟೂರ್ನಿ ಪಂದ್ಯಗಳನ್ನಾಡಿದ್ದ ಅರ್ಜುನ್ ತೆಂಡೂಲ್ಕರ್, ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಆಡುತ್ತಿರುವ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕದ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಅರ್ಜುನ್ ತೆಂಡೂಲ್ಕರ್ ದಕ್ಷಿಣ ವಲಯ ಪರ ಆಡುತ್ತಿದ್ದಾರೆ. ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ ಕುಮಾರ್ ಹಾಗೂ ವಿ.ಕೌಶಿಕ್ ಕೂಡ ಇದ್ದಾರೆ.

ಶುಕ್ರವಾರ ಪುದುಚೇರಿಯಲ್ಲಿ ನಡೆದ ಈಶಾನ್ಯ ವಲಯ ವಿರುದ್ಧದ ಪಂದ್ಯದ ಮೂಲಕ ದೇವಧರ್ ಟ್ರೋಫಿ ಟೂರ್ನಿಗೆ ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ ಮಾಡಿದ್ದಾರೆ. ಆಡಿದ ಚೊಚ್ಚಲ ಪಂದ್ಯದಲ್ಲೇ 7 ಓವರ್ ಬೌಲಿಂಗ್ ಮಾಡಿದ ಸಚಿನ್ ಪುತ್ರ 2 ಮೇಡನ್’ಗಳೊಂದಿಗೆ 21 ರನ್ ನೀಡಿ 1 ವಿಕೆಟ್ ಉರುಳಿಸಿದರು.

ಇದನ್ನೂ ಓದಿ : Jasprit Bumrah : ಟೀಮ್ ಇಂಡಿಯಾಗೆ ಗುಡ್ ನ್ಯೂಸ್, ಜಸ್ಪ್ರೀತ್ ಬುಮ್ರಾ ಕಂಬ್ಯಾಕ್ ಮುಹೂರ್ತ ಫಿಕ್ಸ್

ಇದನ್ನೂ ಓದಿ : Sanju Samson : ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡಿದ ಸಂಜು ಸ್ಯಾಮ್ಸನ್ ಜರ್ಸಿ

ಒಟ್ಟು 7 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ 12 ವಿಕೆಟ್ ಪಡೆದಿದ್ದಾರೆ. 8 ಲಿಸ್ಟ್ ಎ ಪಂದ್ಯಗಳಿಂದ 9 ವಿಕೆಟ್ ಹಾಗೂ 13 ಟಿ20 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಒಂದು ಶತಕ ಬಾರಿಸಿರುವ ಅರ್ಜುನ್, 7 ಪಂದ್ಯಗಳಿಂದ 223 ರನ್ ಕಲೆ ಹಾಕಿದ್ದಾರೆ.

Arjun Tendulkar: Sachin’s son Arjun Tendulkar is playing in the same team with Kannadigas

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular