ದುಬೈ : ಟಿ 20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬರೋಬ್ಬರಿ 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ T20 World Cup ಅನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಚೊಚ್ಚಲ T20 World Cup ಗೆಲ್ಲುವ ನ್ಯೂಜಿಲೆಂಡ್ ಕನಸು ಭಗ್ನವಾಗಿದೆ.

ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿತ್ತು. ಮಾರ್ಟಿನ್ ಗುಫ್ಟಿಲ್ ಹಾಗೂ ಡಿ ಮಿಚಲ್ 28 ರನ್ ಜೊತೆಯಾಟ ನಡೆಸಿದಾಗಲೇ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಆಘಾತ ಎದುರಾಗಿತ್ತು. ನಂತರ ನಾಯಕ ವಿಲಿಯಂಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. 48 ಎಸೆತಗಳಲ್ಲಿ ೮೫ರನ್ ಬಾರಿಸಿದ್ರೆ ಗುಫ್ಟಿಲ್ 28, ಗ್ಲೇನ್ ಫಿಲಿಪ್ 18, ನಿಶಮ್ 13ರನ್ ನೆರವಿನಿಂದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಹಜಲ್‌ವುಡ್ 3 ಹಾಗೂ ಜಂಪಾ 1 ವಿಕೆಟ್ ಪಡೆದುಕೊಂಡಿದ್ದರು.

ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. 5 ರನ್ ಗಳಿಸಿ ಆಟವಾಡುತ್ತಿದ್ದ ನಾಯಕ ಆರೋನ್ ಪಿಂಚ್ ಬೌಲ್ಟ್ ಎಸೆತಕ್ಕೆ ಕೆಟ್ಟ ಹೊಡೆತದ ಮೂಲಕ ವಿಕೆಟ್ ಒಪ್ಪಿಸಿದ್ರು. ನಂತರ ಡೇವಿಡ್ ಮಿಲ್ಲರ್ ಹಾಗೂ ಮಿಚಲ್ ಮಾರ್ಶ್ ಜೋಡಿ ಉತ್ತಮ ಜೊತೆಯಾಟ ನೀಡಿದೆ. ಡೇವಿಡ್ ಮಿಲ್ಲರ್ 53 ರನ್‌ಗಳಿಸಿ ಔಟಾದ್ರೆ ಮಾರ್ಶ್ 50 ಎಸೆತಗಳಲ್ಲಿ 77 ರನ್ ಸಿಡಿಸಿದ್ದಾರೆ. ಅಲ್ಲದೇ ಮ್ಯಾಕ್ಸ್‌ವೆಲ್ 28 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡ 18.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ನ್ಯೂಜಿಲೆಂಡ್ ಪರ ಬೌಲ್ಟ್ 2 ವಿಕೆಟ್ ಪಡೆದುಕೊಂಡಿದ್ದಾರೆ.
👑 𝑪𝑯𝑨𝑴𝑷𝑰𝑶𝑵𝑺 👑 #T20WorldCup #T20WorldCupFinal pic.twitter.com/ip8vSnupO7
— T20 World Cup (@T20WorldCup) November 14, 2021