ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ, ಶೇನ್ ವಾರ್ನ್ ಅವರು 52 ನೇ ವಯಸ್ಸಿನಲ್ಲಿ (Shane Warne expired) ನಿಧನರಾಗಿದ್ದಾರೆ. ಶೇನ್ ವಾರ್ನ್ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಮಾಧ್ಯಮಗಳ ವರದಿಯ ಪ್ರಕಾರ ಅವರು ಥಾಯ್ಲೆಂಡ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಥಾಯ್ಲೆಂಡ್‌ನ ವಿಲ್ಲಾದಲ್ಲಿ ಶೇನ್ ವಾರ್ನ್ ನೆಲೆಸಿದ್ದರು. ಶನಿವಾರ ಬೆಳಿಗ್ಗೆ (ಆಸ್ಟ್ರೇಲಿಯನ್ ಸಮಯ) ಅವರು ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ವೈದ್ಯಕೀಯ ತಂಡದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದು ವಾರ್ನ್ ಅವರ ಆಪ್ತ ವಲಯ ಮಾಹಿತಿ ನೀಡಿದೆ.
ಸುದೀರ್ಘ ಅವಧಿಯ ವರೆಗೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಶೇನ್ ವಾರ್ನ್ (Shane Warne) ಸ್ಪಿನ್ ಮೋಡಿಗೆ ಕ್ರಿಕೆಟ್ ದಿಗ್ಗಜರೇ ಕಂಗಾಲಾಗಿದ್ದರು. ಆಸ್ಟ್ರೇಲಿಯಾ ತಂಡವನ್ನು ಸುಧೀರ್ಘ 15 ವರ್ಷಗಳಿಂದ ಆಸ್ಟ್ರೇಲಿಯಾ ಪರ ಶ್ರೇಷ್ಠ ಬೌಲರ್ ಆಗಿದ್ದು 708 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ನಂತರದಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
Cannot believe it.
— Virender Sehwag (@virendersehwag) March 4, 2022
One of the greatest spinners, the man who made spin cool, superstar Shane Warne is no more.
Life is very fragile, but this is very difficult to fathom. My heartfelt condolences to his family, friends and fans all around the world. pic.twitter.com/f7FUzZBaYX
ಸ್ಪಿನ್ ಮಾಂತ್ರಿಕ Shane Warne ಸಾವಿನ ಸುದ್ದಿ ತಿಳಿಯುತ್ತಲೇ ಕ್ರಿಕೆಟ್ ಜಗ್ಗತ್ತು ಮೌನವಾಗಿದೆ. ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು ಕಂಬನಿ ಮಿಡಿಯುತ್ತಿದ್ದಾರೆ. ಭಾರತದ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಕೂಡ ಟ್ವೀಟ್ ಮಾಡಿದ್ದಾರೆ.
Former Australian Cricketer Shane Warne dies of ‘suspected heart attack’, aged 52, says Fox Sports pic.twitter.com/cgocTvhLCC
— ANI (@ANI) March 4, 2022
ಇದನ್ನೂ ಓದಿ : Divya Deshmukh : ಕಿರಿಯ ವಯಸ್ಸಿನಲ್ಲೇ ಹಿರಿಯರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆದ ಯುವ ಆಟಗಾರ್ತಿ ದಿವ್ಯಾ ದೇಶಮುಖ್
ಇದನ್ನೂ ಓದಿ : BCCI Central Contract List 2022 : ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರಗೆ ಹಿಂಬಡ್ತಿ
(Australian cricket legend Shane Warne expired)