ಭಾನುವಾರ, ಏಪ್ರಿಲ್ 27, 2025
HomeSportsCricketAvesh Khan : ಮಧ್ಯಪ್ರದೇಶದ ಪಾನ್’ವಾಲಾನ ಮಗ ಟೀಮ್ ಇಂಡಿಯಾಗೆ ಆಯ್ಕೆಯಾದ ರೋಚಕ ಕಥೆ

Avesh Khan : ಮಧ್ಯಪ್ರದೇಶದ ಪಾನ್’ವಾಲಾನ ಮಗ ಟೀಮ್ ಇಂಡಿಯಾಗೆ ಆಯ್ಕೆಯಾದ ರೋಚಕ ಕಥೆ

- Advertisement -

ಬೆಂಗಳೂರು: ಮುಂಬರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತ ಟಿ20 ತಂಡದಲ್ಲಿ ಮಧ್ಯಪ್ರದೇಶದ ಯುವ ಬಲಗೈ ವೇಗದ ಬೌಲರ್ ಆವೇಶ್ ಖಾನ್ (Avesh Khan) ಸ್ಥಾನ ಪಡೆದಿದ್ದಾರೆ. ಈಗಾಗಲೇ ಭಾರತ ಪರ 5 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿರುವ ಆವೇಶ್ ಖಾನ್, ಒಂದು ವರ್ಷದ ನಂತರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಐಪಿಎಲ್’ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುವ ಆವೇಶ್ ಖಾನ್ ಬೆಂಕಿಯಲ್ಲಿ ಅರಳಿದ ಹೂವು.

ಆವೇಶ್ ಖಾನ್ ಅವರ ತಂದೆ ಮಧ್ಯಪ್ರದೇಶದ ಇಂದೋರ್’ನಲ್ಲಿ ಪಾನ್ ಶಾಪ್ ನಡೆಸುತ್ತಾರೆ. ಪಾನ್ ಬೀಡಾ ಮಾರಿಯೇ ಪುತ್ರನ ಕ್ರಿಕೆಟ್ ಭವಿಷ್ಯವನ್ನು ಕಟ್ಟಿದ ತಂದೆ. ಇಂದೋರ್’ನ ರಸ್ತೆ ಬದಿಯಲ್ಲಿ ಸಣ್ಣದೊಂದು ಪಾನ್ ಶಾಪ್ ಇಟ್ಟಿರುವ ಆವೇಶ್ ಖಾನ್ ಅವರ ತಂದೆ, ಅತ್ಯಂತ ಕಷ್ಟದ ಸನ್ನಿವೇಶದಲ್ಲೂ ಮಗನ ಕ್ರಿಕೆಟ್ ಪ್ರೀತಿಗೆ ನೀರೆರೆದು ಪೋಷಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಪಾನ್ ಶಾಪ್ ಅನ್ನು ತೆರವುಗೊಳಿಸಿದಾಗಲೂ ಎದೆಗುಂದದ ತಂದೆ, ಮಗನ ಕ್ರಿಕೆಟ್ ಭವಿಷ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ, ಆವೇಶ್ ಖಾನ್ ಅವರನ್ನು ಬರೋಬ್ಬರಿ 10 ಕೋಟಿ ರೂ.ಗಳಿಗೆ ಖರೀದಿಸಿತ್ತು.

ಟೀಮ್ ಇಂಡಿಯಾದಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ತಿರಸ್ಕರಿಸಲ್ಪಟ್ಟಿದ್ದ ಆವೇಶ್ ಖಾನ್ ಅವರನ್ನು ಏಷ್ಯನ್ ಗೇಮ್ಸ್’ನಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯ ನೂತನ ಮುಖ್ಯಸ್ಥ ಅಜಿತ್ ಅಗರ್ಕರ್, ಮಧ್ಯಪ್ರದೇಶ ವೇಗಿಯ ಸಾಮರ್ಥ್ಯದ ಮೇಲೆ ಭರವಸೆ ಇಟ್ಟು ಮತ್ತೆ ಟೀಮ್ ಇಂಡಿಯಾಗೆ ಆಯ್ಕೆ ಮಾಡಿದ್ದಾರೆ.

ಏಷ್ಯನ್ ಗೇಮ್ಸ್ 2023 (Asian Games 2023) ಇದೇ ವರ್ಷದ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಾಂಗ್’ಜೌನಲ್ಲಿ (Hangzhou, China) ನಡೆಯಲಿದ್ದು, ಭಾರತ ಪುರುಷರ (India men’s cricket team) ಮತ್ತು ಮಹಿಳೆಯರ ಕ್ರಿಕೆಟ್ ತಂಡಗಳು (India Women’s cricket team) ಏಷ್ಯನ್ ಗೇಮ್ಸ್’ನಲ್ಲಿ ಭಾಗವಹಿಸಲಿದೆ.

ಇದನ್ನೂ ಓದಿ : Ishan Kishan – Virat Kohli : ಕೊಹ್ಲಿ ಕೃಪೆಯಿಂದ ಟೆಸ್ಟ್’ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತದ ಪುರುಷರ ಕ್ರಿಕೆಟ್ ತಂಡ:
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಬ್ ಸಿಮ್ರನ್ ಸಿಂಗ್ (ವಿಕೆಟ್ ಕೀಪರ್).
ಮೀಸಲು ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡ, ಸಾಯಿ ಸುದರ್ಶನ್.

Avesh Khan: The son of Panwala from Madhya Pradesh is the exciting story of being selected for Team India

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular