ಸೋಮವಾರ, ಏಪ್ರಿಲ್ 28, 2025
HomeSportsPro Kabaddi 2022 : ಬೆಂಗಳೂರು ಬುಲ್ಸ್ ವಿರುದ್ಧ ಸೇಡು ತೀರಿಸಿಕೊಂಡ ಪುಣೇರಿ ಪಲ್ಟನ್, ರೋಚಕ...

Pro Kabaddi 2022 : ಬೆಂಗಳೂರು ಬುಲ್ಸ್ ವಿರುದ್ಧ ಸೇಡು ತೀರಿಸಿಕೊಂಡ ಪುಣೇರಿ ಪಲ್ಟನ್, ರೋಚಕ ಪಂದ್ಯದಲ್ಲಿ ಗೂಳಿಗೆ ಸೋಲು

- Advertisement -

ಹೈದರಾಬಾದ್: Pro Kabaddi 2022 : ರೋಚಕ ಕಾದಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಪುಣೇರಿ ಪಲ್ಟನ್ (puneri paltan) ವಿರುದ್ಧ ಬೆಂಗಳೂರು ಬುಲ್ಸ್ (bengaluru bulls) 33-35ರ ಅಂತರದಲ್ಲಿ ಸೋಲು ಕಂಡಿದೆ. ಇದರೊಂದಿಗೆ ಈ ಹಿಂದೆ ಬುಲ್ಸ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಪುಣೇರಿ ಪಲ್ಟನ್ ಪಡೆ ಸೇಡು ತೀರಿಸಿಕೊಂಡಿದೆ.

ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್’ನ (Pro Kabaddi League) 91ನೇ ಪಂದ್ಯ ರೋಮಾಂಚಕ ಕಾಳಗಕ್ಕೆ ಸಾಕ್ಷಿಯಾಯಿತು. ಪಂದ್ಯ ಮುಗಿಯಲು 5 ನಿಮಿಷಗಳು ಬಾಕಿ ಇದ್ದಾಗ 12 ಅಂಕಗಳ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್, ಅಂತಿಮ ಕ್ಷಣಗಳಲ್ಲಿ ಭರ್ಜರಿ ಕಂಬ್ಯಾಕ್ ಮಾಡಿತು. ಹೀಗಾಗಿ ಕೊನೆಯ 10 ಸೆಕೆಂಡ್’ಗಳು ಬಾಕಿ ಇದ್ದ ಹೊತ್ತಲ್ಲಿ ಪಂದ್ಯ 33-33ರಲ್ಲಿ ಸಮಬಲಗೊಂಡಿತ್ತು. ಈ ವೇಳೆ ಡು ಆರ್ ಡೈ ರೇಡ್’ಗಾಗಿ ಬುಲ್ಸ್ ಕೋಟೆಗೆ ನುಗ್ಗಿದ ಪುಣೇರಿ ಪಲ್ಟನ್’ನ ಯುವ ರೇಡರ್ ಅಸ್ಲಾಂ ಇನಾಮ್ದಾರ್, ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ಬೋನಸ್+ಟಚ್ ಪಾಯಿಂಟ್ ಗಳಿಸಿ ಪಲ್ಟನ್ ಪಡೆಗೆ 2 ಅಂಕಗಳ ಅತ್ಯಂತ ರೋಚಕ ಗೆಲುವು ತಂದುಕೊಟ್ಟರು. ಹೀನಾಯ ಸೋಲಿನತ್ತ ಮುಖಮಾಡಿದ್ದ ಬುಲ್ಸ್ ಕೊನೆಯಲ್ಲಿ ವೀರೋಚಿತ ಸೋಲು ಅನುಭವಿಸಿತು.

ಕನ್ನಡಿಗ ಬಿ.ಸಿ ರಮೇಶ್ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್, ಈ ಗೆಲುವಿನೊಂದಿಗೆ ಲೀಗ್’ನಲ್ಲಿ ಆಡಿದ 16 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ ಒಟ್ಟು 59 ಅಂಕ ಕಲೆ ಹಾಕಿ ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದ್ರೆ, ಬುಲ್ಸ್ ಬಳಗ 16 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ 57 ಅಂಕ ಗಳಿಸಿ 2ನೇ ಸ್ಥಾನಕ್ಕೆ ಕುಸಿಯಿತು. ದಿನದ ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ ತಂಡ ಹರ್ಯಾಣ ಸ್ಟೀಲರ್ಸ್ ವಿರುದ್ಧ 42-30ರ ಸುಲಭ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

ಪ್ರೊ ಕಬಡ್ಡಿ ಲೀಗ್-9 (Pro Kabaddi 2022 ) : ಸೋಮವಾರದ ಪಂದ್ಯಗಳು

  1. ತಮಿಳ್ ತಲೈವಾಸ್ Vs ಬೆಂಗಾಲ್ ವಾರಿಯರ್ಸ್
  2. ಯು.ಪಿ ಯೋಧಾ Vs ಗುಜರಾತ್ ಟೈಟನ್ಸ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Suryakumar Yadav century : ಕಿವೀಸ್ ನಾಡಿನಲ್ಲಿ ಸೂರ್ಯ ಶಿಕಾರಿ, ಟಿ20ಯಲ್ಲಿ 2ನೇ ಶತಕ ಬಾರಿಸಿದ ಸೂರ್ಯಕುಮಾರ್

ಇದನ್ನೂ ಓದಿ : IND vs NZ 2nd T20 : ಸೂರ್ಯ ಶತಕದ ಶಿಕಾರಿ, ಕಿವೀಸ್ ವಿರುದ್ಧ ಭಾರತದ ವಿಜಯದ ನಗಾರಿ

bengaluru bulls vs puneri paltan Pro Kabaddi 2022 Bulls Loss Match

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular