ಸೋಮವಾರ, ಏಪ್ರಿಲ್ 28, 2025
HomeSportsCricketBig Exclusive : ಇದೇ ವರ್ಷ ಸುನಿಲ್ ಶೆಟ್ಟಿ ಮಗಳೊಂದಿಗೆ ಕೆ.ಎಲ್ ರಾಹುಲ್ ಮದುವೆ ?

Big Exclusive : ಇದೇ ವರ್ಷ ಸುನಿಲ್ ಶೆಟ್ಟಿ ಮಗಳೊಂದಿಗೆ ಕೆ.ಎಲ್ ರಾಹುಲ್ ಮದುವೆ ?

- Advertisement -


ಬೆಂಗಳೂರು: (Big Exclusive
) ಗಾಯದ ಕಾರಣ ಟೀಮ್ ಇಂಡಿಯಾದಿಂದ (India Cricket Team) ಹೊರ ಬಿದ್ದಿರುವ ಕರ್ನಾಟಕದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಇದೇ ವರ್ಷ ಮದುವೆಯಾಗಲಿದ್ದಾರಾ? ಹೌದು ಅಂತಿವೆ ರಾಹುಲ್ ಅವರ ಆಪ್ತಮೂಲಗಳು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ (India Vs South Africa T20 weries) ಟೀಮ್ ಇಂಡಿಯಾ ನಾಯಕತ್ವ ವಹಿಸಬೇಕಿದ್ದ ರಾಹುಲ್, ತೊಡೆಸಂಧು (Groin Injury) ಗಾಯದ ಕಾರಣ ಸರಣಿಯಿಂದ ಹೊರ ಬಿದ್ದಿದ್ದರು. ಗಾಯಕ್ಕೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿರುವ ಕಾರಣ ಇಂಗ್ಲೆಂಡ್ ಪ್ರವಾಸಕ್ಕೂ ರಾಹುಲ್ ಅಲಭ್ಯರಾಗಲಿದ್ದಾರೆ.

ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದ ನಂತರ 3ರಿಂದ 4 ವಾರಗಳಲ್ಲಿ ರಾಹುಲ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ರಾಹುಲ್ ಆಡಲಿದ್ದಾರೆ. ಅದಕ್ಕೂ ಮೊದಲು ಅಥವಾ ಈ ವರ್ಷಾಂತ್ಯದಲ್ಲಿ ರಾಹುಲ್ ಗೃಹಸ್ಥಾಶ್ರಮಕ್ಕೆ ಕಾಲಿಡುವ ಸಾಧ್ಯತೆಗಳಿವೆ.

30 ವರ್ಷದ ರಾಹುಲ್, ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ (Suniel Shetty Daughter) ಮಗಳು ಆತಿಯಾ ಶೆಟ್ಟಿ (Athiya Shetty) ಅವರನ್ನು ಪ್ರೀತಿಸುತ್ತಿದ್ದಾರೆ. ಇವರಿಬ್ಬರ ಪ್ರೀತಿಗೆ ಸುನಿಲ್ ಶೆಟ್ಟಿಯವರ ಒಪ್ಪಿಗೆಯೂ ಇದೆ. ಕಳೆದ 3 ವರ್ಷಗಳಿಂದ ರಾಹುಲ್ ಹಾಗೂ ಆತಿಯಾ ಶೆಟ್ಟಿ ಪ್ರೀತಿಸುತ್ತಿದ್ದು, ಈ ವರ್ಷ ಮದುವೆಯಾಗುವ ಸಾಧ್ಯತೆಯಿದೆ (Rahul Athiya Shetty Marriage). ರಾಹುಲ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಸುನಿಲ್ ಶೆಟ್ಟಿ ತಮ್ಮ ಭಾವೀ ಅಳಿಯನ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

“ನನಗೆ ಆ ಹುಡುಗನೆಂದರೆ ತುಂಬಾ ಇಷ್ಟ. ಇನ್ನು ಅವರಿಬ್ಬರ ಮದುವೆಯ ಬಗ್ಗೆ ಮಾತನಾಡುವುದಾದರೆ, ಅದು ಅವರ ಇಷ್ಟ. ಸಮಯ ಬದಲಾಗಿದೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತ ವ್ಯಕ್ತಿಗಳು. ಹೀಗಾಗಿ ಮದುವೆಯ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ”.

  • ಸುನಿಲ್ ಶೆಟ್ಟಿ, ಬಾಲಿವುಡ್ ನಟ.

ಮಂಗಳೂರು ಮೂಲದ ಕೆ.ಎಲ್ ರಾಹುಲ್, ಕರಾವಳಿ ಮೂಲದವರೇ ಆಗಿರುವ ಸುನಿಲ್ ಶೆಟ್ಟಿಯವರ ಪುತ್ರಿಯನ್ನೇ ಮದುವೆಯಾಗುತ್ತಿದ್ದಾರೆ. ರಾಹುಲ್ ಈ ಬಾರಿಯ ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದ ವೇಳೆ ಕ್ರೀಡಾಂಗಣಕ್ಕೆ ಬಂದು ತಂಡದ ಜರ್ಸಿ ಧರಿಸಿ ತಮ್ಮ ಪ್ರಿಯತಮನಿಗೆ ಆತಿಯಾ ಶೆಟ್ಟಿ ಚಿಯರ್ ಮಾಡಿದ್ದರು.

ಇದನ್ನೂ ಓದಿ : acb officers raid : 21 ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್​ : ರಾಜ್ಯದ 80 ಕಡೆಗಳಲ್ಲಿ ದಾಳಿ

ಇದನ್ನೂ ಓದಿ : ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?

Big Exclusive Sunil Shetty’s daughter KL Rahul marries same year

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular