ರಾಯ್ಪುರ: ಚೊಚ್ಚಲ ಆವೃತ್ತಿ ಛತ್ತೀಸ್’ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಿ (Chhattisgarh Cricket Premier League – CCPL) ಆರಂಭಗೊಂಡಿದ್ದು, ರಾಯ್ಪುರ ರೈನೋಸ್ (Raipur Rhinos) ತಂಡಕ್ಕೆ ಕನ್ನಡಿಗ ಮುಕುಂದ್ ಗೌಡ (Mukund Gowda) ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಅಕಾಡೆಮಿಯಲ್ಲಿ ಕೋಚ್ ಆಗಿದ್ದ ಮುಕುಂದ್ ಗೌಡ ಅವರನ್ನು ರಾಯ್ಪುರ ರೈನೋಸ್ ಫ್ರಾಂಚೈಸಿ, ತನ್ನ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕ ಮಾಡಿದೆ.

ರಾಜ್ಯ ಕ್ರಿಕೆಟ್ ಸಂಸ್ಥೆಯ ಕಿರಿಯರ ತಂಡಗಳಿಗೆ ಮುಕುಂದ್ ಗೌಡ ತರಬೇತುದಾರನಾಗಿ ಜವಾಬ್ದಾರಿ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಛತ್ತೀಸ್’ಗಢ ಪ್ರೀಮಿಯರ್ ಲೀಗ್ ಟೂರ್ನಿ 10 ದಿನಗಳ ಕಾಲ ನಡೆಯಲಿದ್ದು, ಒಟ್ಟು 18 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಜೂನ್ ಆರರಂದು ರಾಯ್ಪುರ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಒಟ್ಟು ಆರು ತಂಡಗಳು ಟೂರ್ನಿಯಲ್ಲಿ ಆಡುತ್ತಿವೆ. ಟೂರ್ನಿಯ ಪಂದ್ಯಗಳು ಸೋನಿ ಸ್ಪೋಟ್ಸ್ ನೆಟ್ವರ್ಕ್’ನಲ್ಲಿ ನೇರ ಪ್ರಸಾರಗೊಳ್ಳಲಿವೆ.
ಇದನ್ನೂ ಓದಿ : T20 World Cup: ನಾಳೆ ಭಾರತ Vs ಅಮೆರಿಕ ಪಂದ್ಯ, ಮತ್ತೊಂದು ಶಾಕ್ ಕೊಡುತ್ತಾ ಕ್ರಿಕೆಟ್ ಶಿಶು ?
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, 2011ರ ವಿಶ್ವಕಪ್ ಹೀರೊ ಸುರೇಶ್ ರೈನಾ, ಮೊದಲ ಆವೃತ್ತಿಯ ಛತ್ತೀಸ್’ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ ಟೂರ್ನಿಯ ರಾಯಭಾರಿಯಾಗಿದ್ದಾರೆ. ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಅಬ್ಬರಿಸಿದ್ದ ಶಶಾಂಕ್ ಸಿಂಗ್, ಬಿಲಾಸ್ಪುರ್ ಬುಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಪರ ಅಂಡರ್-19 ಕ್ರಿಕೆಟ್ ಆಡಿದ್ದ ಪಂಜಾಬ್ ಆಟಗಾರ ಅಮನ್ದೀಪ್ ಖರೆ ರಾಯ್ಪುರ ರೈನೋಸ್ ತಂಡದ ಸಾರಥ್ಯ ವಹಿಸಿದ್ದಾರೆ. ಐಪಿಎಲ್’ನಲ್ಲಿ ಆಡಿರುವ ಅಜಯ್ ಮೊಂಡಲ್, ಶುಭಮ್ ಅಗರ್ವಾಲ್, ಹರ್’ಪ್ರೀತ್ ಸಿಂಗ್ ಭಾಟಿಯಾ ಈ ಟೂರ್ನಿಯಲ್ಲಿ ಆಡಲಿದ್ದಾರೆ.

ಛತ್ತೀಸ್’ಗಢ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲಿರುವ ತಂಡಗಳು: (Chhattisgarh Cricket Premier League – CCPL)
1. ರಾಯ್ಪುರ ರೈನೋಸ್ (Raipur Rhinos)
2. ಬಿಲಾಸ್ಪುರ್ ಬುಲ್ಸ್ (Bilaspur Bulls)
3. ಬಸ್ತಾರ್ ಬಯೋನ್ಸ್ (Bastar Byons)
4. ರಾಜ್’ನಂದ್’ಗಾಂವ್ ಪ್ಯಾಂಥರ್ಸ್ (Rajnandgaon Panthers)
5. ರಾಯಗಢ ಲಯನ್ಸ್ (Raigarh Lions)
6. ಸುರ್ಗುಜ ಟೈಗರ್ಸ್ (Surguja Tigers)
ಇದನ್ನೂ ಓದಿ : T20 World Cup Harmeet Singh: ಅಮೆರಿಕ ಪರ ಆಡುತ್ತಿದ್ದಾನೆ ಭಾರತದ U-19 ವಿಶ್ವಕಪ್ ಸ್ಟಾರ್ !
Chhattisgarh Cricket Premier -ccpl League Raipur Rhinos Mukund Gowda Head Coach