ಕ್ರಿಕೆಟಿಗ ಕೆ.ಎಲ್ ರಾಹುಲ್ ದುಬೈನ ಟಿ20 ವಿಶ್ವಕಪ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ತನ್ನ ಪ್ರೇಯಸಿ ಅತಿಯಾ ಶೆಟ್ಟಿ ಹುಟ್ಟುಹಬ್ಬಕ್ಕೆ ಕೊಂಚ ತಡವಾದರೂ ರಾಹುಲ್ ಸ್ಪೇಶಲ್ ಆಗಿಯೇ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಇನ್‌ಸ್ಟಾ ಗ್ರಾಮ್ ಪೋಸ್ಟ್ ನಲ್ಲಿ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದು ಬರೆದುಕೊಂಡಿದ್ದಾರೆ.
ಅತಿಯಾ ಶೆಟ್ಟಿ ಪ್ರಸ್ತುತ ದುಬೈನ ಟಿ20 ವಿಶ್ವಕಪ್ ನಲ್ಲಿ ಕೆ.ಎಲ್.ರಾಹುಲ್ ಅವರೊಂದಿಗೆ ಇದ್ದಾರೆ. ಶುಕ್ರವಾರ ರಾತ್ರಿ ಕೆಎಲ್ ರಾಹುಲ್ ಅತಿಯಾ ಶೆಟ್ಟಿ ಜೊತೆಗಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ಆ ಪೋಟೋದಲ್ಲಿ ಅತಿಯಾ ಹಾಗೂ ರಾಹುಲ್ ಸಂತೋಷದಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಕೆ.ಎಲ್.ರಾಹುಲ್ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೇ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅತಿಯಾ ಶೆಟ್ಟಿ ಅವರಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಕೆ.ಎಲ್.ರಾಹುಲ್ ಅವರ ಈ ಪೋಸ್ಟ್ ಗೆ ಅತಿಯಾ ಶೆಟ್ಟಿ ಅವರ ತಂದೆ ನಟ ಸುನೀಲ್ ಶೆಟ್ಟಿ ಮತ್ತು ಅವರ ಸಹೋದರ ಅಹಾನ್ ಶೆಟ್ಟಿ ಹೃದಯದ ಎಮೋಜಿಗಳನ್ನು ತೋರಿಸಿದ್ದಾರೆ.
ಅತಿಯಾ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬದ ಆಚರಣೆಯ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳು ಎಂದು ಅತಿಯಾ ತಿಳಿಸಿದ್ದಾರೆ. ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ 2019 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು.
ಇದನ್ನೂ ಓದಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ : ಉತ್ತಪ್ಪ, ಸಂಜು ಆರ್ಭಟ, ಬಿಹಾರ ವಿರುದ್ದ ಕೇರಳಕ್ಕೆ ಭರ್ಜರಿ ಗೆಲುವು
ಅತಿಯಾ ಶೆಟ್ಟಿ ಮತ್ತು ರಾಹುಲ್ ಥೈಲ್ಯಾಂಡ್ ರಜೆಯ ಚಿತ್ರಗಳು ಅವರ ಅಭಿಮಾನಿಗಳ ಗಮನ ಸೆಳೆದಾಗ ಅವರ ಅಂದಿನ ಊಹಾಪೋಹ ಸಂಬಂಧದ ಬಗ್ಗೆ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು. ಅವರು 2015 ರ ಹೀರೊ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು.
(KL Rahul says “Happy Birthday My Heart Icon” to Athiya Shetty)